ನೈಜೀರಿಯಾದಲ್ಲಿ ಶಾಲೆಗೆ ನುಗ್ಗಿದ ಬಂದೂಕುದಾರಿಗಳು: 287 ವಿದ್ಯಾರ್ಥಿಗಳ ಅಪಹರಣ

ಬುಜಾ : ನೈಜೀರಿಯಾದ  ಶಾಲೆಯೊಂದರ ಮೇಲೆ ಬಂದೂಕು ದಾಳಿ ನಡೆದಿದ್ದು ಕನಿಷ್ಠ 287 ವಿದ್ಯಾರ್ಥಿಗಳನ್ನು ದುಷ್ಟರು ಅಪಹರಿಸಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹೊರಬಿದ್ದಿದೆ. ಅಪಹರಣ

ನೈಜೀರಿಯಾದ ಕದುನಾ ರಾಜ್ಯದ ಕುರಿಗಾ ನಗರದಲ್ಲಿ ಈ ಘಟನೆ ನಡೆದಿದೆ. ಗುರುವಾರ ಬೆಳಿಗ್ಗೆ 8 ಗಂಟೆ ವೇಳೆಗೆ ಸರಕಾರಿ ಶಾಲೆಯನ್ನು ಸುತ್ತುವರಿದ ಬಂದೂಕುಧಾರಿಗಳು ಕನಿಷ್ಠ 287 ವಿದ್ಯಾರ್ಥಿಗಳನ್ನು ಅಪಹರಿಸಿದ್ದಾರೆ.

ಇದನ್ನು ಓದಿ : ಕೇರಳದಲ್ಲಿ ದೇಶದ ಮೊದಲ ಸರ್ಕಾರಿ ಒಟಿಟಿ ಉದ್ಘಾಟನೆ

`ಅಪಹರಿಸಲ್ಪಟ್ಟಿರುವ ಎಲ್ಲಾ ಮಕ್ಕಳೂ ಸುರಕ್ಷಿತವಾಗಿ ಮರಳಿ ಬರುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಭದ್ರತಾ ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ’ ಎಂದು ಸ್ಥಳೀಯ ಗವರ್ನರ್ ಉಬಾ ಸಾನಿ ಭರವಸೆ ನೀಡಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ. ಇದುವರೆಗೆ ಯಾವುದೇ ಸಂಸ್ಥೆ ಈ ಕೃತ್ಯದ ಹೊಣೆ ವಹಿಸಿಲ್ಲ. ಆದರೆ ಐಸಿಸ್ ಜತೆ ನಂಟು ಹೊಂದಿರುವ ಸಂಘಟನೆಯ ಕೃತ್ಯ ಇದಾಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಈಶಾನ್ಯ ನೈಜೀರಿಯಾದಲ್ಲಿ 200ಕ್ಕೂ ಅಧಿಕ ಜನರನ್ನು(ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು) ಭಯೋತ್ಪಾದಕರು ಅಪಹರಿಸಿದ್ದ ಘಟನೆಯ ಬೆನ್ನಿಗೇ ಮತ್ತೊಂದು ಅಪಹರಣ ಕೃತ್ಯ ವರದಿಯಾಗಿದೆ.

ಇದನ್ನು ನೋಡಿ : ಪಾಕ್ ಘೋಷಣೆಯಷ್ಟೆ ಬಿಜೆಪಿಗೆ ಕೇಳಿಸಿತಾ? ಜನರ ಸಂಕಷ್ಟದ ನೋವು ಕೇಳಲೇ ಇಲ್ವಾ? ವಿಶ್ಲೇಷಣೆ – ಸಂಧ್ಯಾ ಸೊರಬ

Donate Janashakthi Media

Leave a Reply

Your email address will not be published. Required fields are marked *