ಜನರಿಂದಲೇ ವಸೂಲಿ ಮಾಡುವತೆರಿಗೆ ಸರಕಾರದ ಸ್ವಂತ ವರಮಾನವೋ ಎಂಬಂತೆ, ಅದರ ತುಸು ಕಡಿಮೆ ವಸೂಲಿಯನ್ನು ‘ಉಡುಗೊರೆ’ ಎಂದು ಬೀಗುವುದು ಒಂದು ಅಸಹ್ಯ ಪಾಳೇಗಾರೀ ಮನಸ್ಥಿತಿಯನ್ನು ಬಯಲುಗೊಳಿಸುತ್ತದೆ. ಹಾಗೆ ನೋಡಿದರೆ, ಎರಡು ಜಿಎಸ್‌ಟಿ ಸ್ಲ್ಯಾಬ್‌ಗಳನ್ನು ರದ್ದುಗೊಳಿಸಿದರೆ ತೆರಿಗೆ-ಹೊರೆಯಲ್ಲಿ ಇಳಿಕೆಯಾಗುವುದು ಕೇವಲ 1.45%. ಇದರಿಂದ ಆಗಬಹುದಾದ ವಿತ್ತೀಯ ಕೊರತೆಯನ್ನು ಸರಿ ಹೊಂದಿಸಲೆಂದು ನವ-ಉದಾರವಾದಿ ಚಾಳಿಯಂತೆ ಸರಕಾರೀ ವೆಚ್ಚಗಳನ್ನು ಅಷ್ಟರ ಮಟ್ಟಿಗೆ ಕಡಿತ ಮಾಡಿದರಂತೂ ಇದರ ಒಟ್ಟು ಪರಿಣಾಮ ಸೊನ್ನೆಯೇ. ಇದನ್ನು ಬಡಾಯಿ ಕೊಚ್ಚಿಕೊಳ್ಳುವುದೇ ಹವ್ಯಾಸವಾಗಿ ಬಿಟ್ಟಿರುವ ಒಂದು ಸರಕಾರ ಮಾತ್ರವೇ ‘ಉಡುಗೊರೆ’ ಎಂದು ಬೀಗಲು ಸಾಧ್ಯ. ನವ ಉದಾರವಾದ ಮತ್ತುಅದರ ಮುಂದಿನ ಭಾಗವಾಗಿ ಫ್ಯಾಸಿಸ್ಟ್ ತೆರನ ಶಕ್ತಿಗಳು ಅಧಿಕಾರಕ್ಕೆ ಏರಿದ ಸಂಯೋಜಿತ ಪರಿಣಾಮವಾಗಿ ದೇಶವು ಒಂದು ವಿಷಾದಕರ ಗೋಜಲಿನಲ್ಲಿ ಸಿಲುಕಿರುವಾಗ ಪ್ರಧಾನಿಗಳ ಸ್ವಾತಂತ್ರ‍್ಯ ದಿನಾಚರಣೆಯ ಭಾಷಣದಲ್ಲಿ ಯಾವುದೇ ಪರಿಹಾರ ಕ್ರಮಗಳ ಮಾತಿರಲಿ, ಇವೆಲ್ಲದರ ಸುಳಿವೂ ಸಹ ಇಲ್ಲ. ದೀಪಾವಳಿ
ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ನರೇಂದ್ರ ಮೋದಿ ಅವರು ಸ್ವಾತಂತ್ರ‍್ಯ ದಿನಾಚರಣೆಯಂದು ಮಾಡಿದ ಭಾಷಣವು ನಿರೀಕ್ಷೆಯಂತೆ ನಿರ್ಲಜ್ಜ ಅಸತ್ಯಗಳಿಂದ ಕೂಡಿತ್ತು. ಅದಕ್ಕೆ ಬಿಜೆಪಿ ಆಳ್ವಿಕೆಯ ವರ್ಷಗಳಲ್ಲಿ ಭಾರತವು ಉತ್ಪಾದನಾ ವಲಯದಲ್ಲಿ ಸಾಧಿಸಿತು ಎನ್ನಲಾದ ‘ಮಹತ್ತರವಾದ’ ಪ್ರಗತಿಯ ಬಗ್ಗೆ ಅವರುಆಡಿದ ಮಾತುಗಳು ಉದಾಹರಣೆಯಾಗುತ್ತವೆ. ಕಳೆದ ಹತ್ತು ವರ್ಷಗಳಲ್ಲಿ ಉತ್ಪಾದನಾ ವಲಯದ ಪಾಲು ವಾಸ್ತವವಾಗಿ ಜಿಡಿಪಿಯ ಶೇ. 17.5ರಿಂದ ಶೇ. 12.6ಕ್ಕೆ ಒಂದು ತೀವ್ರ ಕುಸಿತವನ್ನು ಕಂಡಿದೆ. ಕುಸಿತದ ಈ ಮಟ್ಟವನ್ನು 1960ರಲ್ಲಿ ಕೊನೆಯ ಬಾರಿಗೆ ದಾಟಲಾಗಿತ್ತು ಮತ್ತು ಈ ಮಟ್ಟದ ಕುಸಿತವನ್ನು ಅರ್ಥಶಾಸ್ತ್ರಜ್ಞರು ಅಪ-ಕೈಗಾರಿಕೀಕರಣದ ಸ್ಥಿತಿ ಎನ್ನುತ್ತಾರೆ. ಇಂಥಹ ಒಂದು ಅಪ-ಕೈಗಾರಿಕೀಕರಣ ಪ್ರಕಿಯೆಯ ಸ್ಥಿತಿಯನ್ನೇ ದೇಶವು ಕೈಗಾರಿಕಾ ವಲಯದಲ್ಲಿ ಮಾಡಿದ ಒಂದು ಮಹತ್ತರವಾದ ಪ್ರಗತಿ ಎಂಬಂತೆ ಬಣ್ಣಿಸುವುದು ಪ್ರಧಾನ ಮಂತ್ರಿಯಂಥಹ ಒಂದು ಜವಾಬ್ದಾರಿಯುತ ಹುದ್ದೆಯಲ್ಲಿರುವ ಮೋದಿ ಅವರ ವೈಶಿಷ್ಟ್ಯವೇ ಸರಿ! ದೀಪಾವಳಿ
ಅದೇರೀತಿಯಲ್ಲಿ ಸ್ವಾತಂತ್ರ‍್ಯ ದಿನಾಚರಣೆಯ ಭಾಷಣದಲ್ಲಿ ನಿರ್ದಿಷ್ಟವಾಗಿ ಆರ್‌ಎಸ್‌ಎಸ್‌ಅನ್ನು ಎಳೆದು ತಂದು ಅದನ್ನು ಅವರು ಹೊಗಳಿರುವುದು ಸತ್ಯದ ಒಂದು ವಿಡಂಬನೆಯೇ ಸರಿ. ಸ್ವಾತಂತ್ರ‍್ಯ ಹೋರಾಟದಲ್ಲಿ ಆರ್‌ಎಸ್‌ಎಸ್ ಭಾಗವಹಿಸಲಿಲ್ಲ ಎಂಬುದು ಎಲ್ಲರಿಗೂ ಚೆನ್ನಾಗಿಗೊತ್ತಿರುವ ವಿಷಯವೇ. ಆದರೆ, ಆ ಸಮಯದಲ್ಲಿಅದರ ನಾಯಕರಾಗಿದ್ದ ಎಂ ಎಸ್ ಗೋಲ್ವಾಲ್ಕರ್ ಅವರು ದೇಶವು ಸ್ವಾತಂತ್ರ‍್ಯವನ್ನು ಗಳಿಸಿದ ನಂತರವೂತನ್ನ ವ್ಯವಹಾರಗಳನ್ನು ಅದು ಸ್ವತಃ ತಾನೇ ನಿರ್ವಹಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ ಎಂಬ ಅಭಿಪ್ರಾಯವನ್ನು ಮತ್ತು ಆಡಳಿತವನ್ನು ನಡೆಸಲು ಬ್ರಿಟಿಷರನ್ನೇ ಮತ್ತೆಆಹ್ವಾನಿಸಬೇಕಾಗುತ್ತದೆ ಎಂಬ ನಿರೀಕ್ಷೆಯನ್ನು ಹೊಂದಿದ್ದರು (ಈ ಬಗ್ಗೆ ರಾಮ್ ಪುನಿಯಾನಿ ಎಂಬುವರು ವಿವರವಾಗಿ ಬರೆದಿದ್ದಾರೆ). ದೀಪಾವಳಿ
ಇದನ್ನೂ ಓದಿ: ಎಥನಾಲ್ ಮಿಶ್ರಿತ ಪೆಟ್ರೋಲ್ ಕುರಿತು ಕೋಲಾಹಲ
ದಿರಲಿ, ನಾವೀಗ ಅವರು ಮಾಡಿದ ಪ್ರಮುಖ ಆರ್ಥಿಕ ಪ್ರಕಟಣೆಯತ್ತ ತಿರುಗೋಣ. ಸರಕು ಮತ್ತು ಸೇವಾ ತೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಜಿಎಸ್‌ಟಿ ಸ್ಲ್ಯಾಬ್‌ಗಳನ್ನು – ಶೇ. 12ರ ಮತ್ತು ಶೇ. 28ರ ಸ್ಲ್ಯಾಬ್‌ಗಳನ್ನು – ರದ್ದುಗೊಳಿಸುವುದಾಗಿ ಅವರು ಘೋಷಿಸಿದರು. ಈಗ ಶೇ. 12ರ ಸ್ಲ್ಯಾಬ್‌ಅಡಿಯಲ್ಲಿ ಬರುವ ಸರಕು ಮತ್ತು ಸೇವೆಗಳಿಗೆ ಇನ್ನು ಮುಂದೆ ಶೇ. 5ರಷ್ಟು ಜಿಎಸ್‌ಟಿಯನ್ನು ಮತ್ತು ಈಗ ಶೇ. 28ರ ಸ್ಲ್ಯಾಬ್ ಅಡಿಯಲ್ಲಿ ಬರುವ ಸರಕು ಮತ್ತು ಸೇವೆಗಳಿಗೆ ಶೇ. 18ರಷ್ಟು ಜಿಎಸ್‌ಟಿಯನ್ನು ವಿಧಿಸಲಾಗುವುದು. ದೀಪಾವಳಿ
ಈ ರಿಯಾಯಿತಿಯನ್ನು ದೀಪಾವಳಿ ಹಬ್ಬದ ಒಂದು “ಉಡುಗೊರೆ” ಎಂದು ಕರೆದಿರುವುದು ಅಸಂಗತವಾಗಿ ಕಾಣುತ್ತದೆ. ಏಕೆಂದರೆೆ ಅದು ಒಂದು ಅಸಹ್ಯ ಪಾಳೇಗಾರೀ ಮನಸ್ಥಿತಿಯನ್ನು ಬಯಲುಗೊಳಿಸುತ್ತದೆ. ತೆರಿಗೆಗಳನ್ನು ಜನತೆರುತ್ತಾರೆ. ತೆರಿಗೆ ಆದಾಯ ವುಜನರ ಹಣದಿಂದ ಬರುತ್ತದೆ. ಜನತೆರುವ ತೆರಿಗೆಗಳಲ್ಲಿ ಒಂದು ಇಳಿಕೆಯನ್ನು ಅದು ಸರ್ಕಾರ ನೀಡಿದ “ಉಡುಗೊರೆ” ಎಂದು ಕರೆಯುವುದು ಎಂದರೆ ಸರ್ಕಾರದ ಆದಾಯವು ಅದರ ಖಾಸಗಿ ವರಮಾನ ಎಂದು ಭಾವಿಸಿದಂತಾಗುತ್ತದೆ. ದೀಪಾವಳಿ
ಇದು ವಿಷಯಗಳನ್ನು ತಲೆಕೆಳಗು ಮಾಡುವ ವಿಚಾರವಾಗುತ್ತದೆ ಮತ್ತು “ಪ್ರಭುತ್ವ,ಎಂದರೆ, ನಾನು” ಎಂಬ ಫ್ರೆಂಚ್ ದೊರೆ 14ನೇ ಲೂಯಿಯ ಹೇಳಿಕೆಯನ್ನು ಹೋಲುತ್ತದೆ. ಎನ್‌ಡಿಎ ಸರ್ಕಾರದ ಕೆಲವು ಹಿರಿಯ ನಾಯಕರು ಭಾರತದ ಸೇನೆಯನ್ನು “ಮೋದಿಜಿ ಸೇನೆ” ಎಂದುಕರೆಯುವ ಮಟ್ಟಕ್ಕೆ ಹೋಗಿದ್ದಾರೆ ಎಂದರೆ, ವಿಚಾರಗಳನ್ನು ತಲೆಕೆಳಗು ಮಾಡುವುದನ್ನು ಬಿಟ್ಟರೆ ಅವರಿಂದ ಬೇರೆ ಏನನ್ನು ನಿರೀಕ್ಷಿಸಬಹುದು? ದೀಪಾವಳಿ
‘ಉಡುಗೊರೆ’ಯ ಗಾತ್ರವಾದರೂ ಎಷ್ಟು?
ಈಗ ಉದ್ದೇಶಿತ “ಉಡುಗೊರೆ”ಯ ಪೂರ್ಣ ಪ್ರಮಾಣ ಅದೆಷ್ಟು ದೊಡ್ಡದು ಎಂಬುದನ್ನು ನೋಡೋಣ. ಪತ್ರಿಕಾ ವರದಿಗಳ ಪ್ರಕಾರ, ಶೇ. 28ರ ಸ್ಲ್ಯಾಬ್‌ಅಡಿಯಲ್ಲಿ ಬರುವ ಸರಕು ಮತ್ತು ಸೇವೆಗಳಿಂದ ಈಗ ಬರುತ್ತಿರುವ ಆದಾಯವು ಜಿಎಸ್‌ಟಿಯ ಒಟ್ಟು ಆದಾಯದ ಕೇವಲ ಶೇ. 11ರಷ್ಟಿದೆ (ದಿ ಹಿಂದೂ, ಆಗಸ್ಟ್ 16, ಪತ್ರಿಕೆಯನ್ನು ನೋಡಿ). ಆದ್ದರಿಂದ, ಈ ಶೇ. 28 ದರವನ್ನು ಶೇ. 18ಕ್ಕೆ ಇಳಿಕೆ ಮಾಡುವುದರಿಂದ, ಈ ಸ್ಲ್ಯಾಬ್‌ನಿಂದ ಬರುವ ಆದಾಯದಲ್ಲಿ ಶೇ. 10ರಷ್ಟು ನಷ್ಟವಾಗುತ್ತದೆ. ಅಂದರೆ, ಈ ನಷ್ಟವು ಒಟ್ಟು ಜಿಎಸ್‌ಟಿ ಆದಾಯದ ಶೇ. 1.1.ಅದೇರೀತಿಯಲ್ಲಿ, ಶೇ. 12ರ ಸ್ಲ್ಯಾಬ್‌ಅಡಿಯಲ್ಲಿ ಈಗ ಬರುತ್ತಿರುವ ಆದಾಯವು ಜಿಎಸ್‌ಟಿಯ ಒಟ್ಟು ಆದಾಯದ ಶೇ. 5ರಷ್ಟಿದ್ದು, ಈ ದರವನ್ನು ಶೇ. 5ಕ್ಕೆ ಇಳಿಸುವುದರಿಂದ ಈ ಆದಾಯದ ಶೇ. 7ರಷ್ಟು ಅಂದರೆ ಒಟ್ಟು ಜಿಎಸ್‌ಟಿ ಸಂಗ್ರಹದ ಶೇ. 0.35 ನಷ್ಟವಾಗುತ್ತದೆ.
ಆದ್ದರಿಂದ, ಈ ಎರಡೂ ರಿಯಾಯಿತಿಗಳು ಒಟ್ಟಾರೆಯಾಗಿ ಜಿಎಸ್‌ಟಿ ಆದಾಯದ ಶೇ. 1.45ರಷ್ಟು ನಷ್ಟವನ್ನುಂಟು ಮಾಡುತ್ತವೆ. ಅಂದರೆ, ಜಿಎಸ್‌ಟಿಯ ಒಟ್ಟು ಆದಾಯದ ಶೇ. 1.45ರಷ್ಟು ಸಾರ್ವಜನಿಕರಿಗೆ ವರ್ಗಾವಣೆಯಾಗುತ್ತದೆ. 2024-25ರಲ್ಲಿ ಸಂಗ್ರಹವಾದ ಒಟ್ಟು ಜಿಎಸ್‌ಟಿ ಆದಾಯವು 22.08 ಲಕ್ಷ ಕೋಟಿ ರೂಪಾಯಿಗಳಾಗಿರುವುದರಿಂದ, ಮೋದಿ ಅವರು ಘೋಷಿಸಿದ ಜಿಎಸ್‌ಟಿ ರಿಯಾಯಿತಿಗಳ ಮೂಲಕ ಸಾರ್ವಜನಿಕರಿಗೆ ವರ್ಗಾವಣೆಯಾಗುವ ಒಟ್ಟು ಮೊತ್ತವು ಪ್ರಸ್ತುತದಲ್ಲಿ 32,016 ಕೋಟಿ ರೂಪಾಯಿಗಳಷ್ಟಾಗುತ್ತದೆ, ಅಥವಾ 2024-25 ವರ್ಷಕ್ಕಾಗಿ ಅಧಿಕೃತವಾಗಿ ಅಂದಾಜು ಮಾಡಲಾದ ಜಿಡಿಪಿಯ ಕೇವಲ ಶೇ. 0.0967 ರಷ್ಟಾಗುತ್ತದೆ. ಇದನ್ನು ಹತ್ತಿರದ ಸಂಖ್ಯೆಯಾದ ಶೇ. 0.1 ಎಂದು ತೆಗೆದುಕೊಳ್ಳೋಣ. ದೀಪಾವಳಿ
ಜನರಿಗೆ ನೀಡುವ ಈ “ಉಡುಗೊರೆ”ಯುಇಡೀಅರ್ಥವ್ಯವಸ್ಥೆಯ ಮೇಲೆ ಬೀರುವ ವಿಸ್ತರಣಾ ಪರಿಣಾಮಗಳನ್ನು ಅಧಿಕೃತ ಮೂಲಗಳು ವಿವರಿಸತೊಡಗಿವೆ. ಆದರೆ, ಈ ವಿಸ್ತರಣೆಯಅಂತಿಮ ಪರಿಣಾಮವು ಈ “ಉಡುಗೊರೆ”ಗೆ ಬೇಕಾಗುವ ಹಣವನ್ನು ಹೇಗೆ ಒದಗಿಸಿಕೊಳ್ಳಲಾಗುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ. ಜನರಿಗೆ ನೀಡಲಾಗುವ ಈ ರಿಯಾಯಿತಿಗಳಿಂದಾಗಿ ವಿತ್ತೀಯ ಕೊರತೆಯು ಏರಿಕೆಯಾಗದಂತೆ ನೋಡಿಕೊಳ್ಳುವ ಸಲುವಾಗಿ, ಈ ತೆರಿಗೆರಿಯಾಯಿತಿಗಳಿಗೆ ಅನುಗುಣವಾಗಿ ಸರ್ಕಾರದ ಖರ್ಚು-ವೆಚ್ಚಗಳಲ್ಲಿ ರಿಯಾಯಿತಿಗಳಿಗೆ ಸಮಾನವಾದ ಒಂದು ಇಳಿಕೆ ಇದ್ದರೆ, ಆಗ ಈ ರಿಯಾಯಿತಿಗಳಿಂದಾಗಿ ಉಂಟಾಗಬಹುದಾದ ವಿಸ್ತರಣಾ ಪರಿಣಾಮಗಳನ್ನು ಸರ್ಕಾರದ ವೆಚ್ಚಗಳ ಇಳಿಕೆಯು ಉಂಟುಮಾಡುವ ಬೇಡಿಕೆಯ ಸಂಕೋಚನ ಪರಿಣಾಮಗಳು ರದ್ದುಗೊಳ್ಳುತ್ತವೆ. ಹಾಗಾಗಿ, ಅರ್ಥವ್ಯವಸ್ಥೆಯಲ್ಲಿ ಒಟ್ಟಾರೆಯಾಗಿ ಉಂಟಾಗುವ ವಿಸ್ತರಣಾ ಪರಿಣಾಮವು ಶೂನ್ಯವಾಗಿರುತ್ತದೆ. ಶಿಕ್ಷಣ, ಆರೋಗ್ಯ ರಕ್ಷಣೆ, ಉದ್ಯೋಗ ಸೃಷ್ಟಿ ಮುಂತಾದ ಚಟುವಟಿಕೆಗಳ ಮೇಲಿನ ವೆಚ್ಚಗಳನ್ನು ಸರ್ಕಾರವು ಒಂದು ವೇಳೆ ಕಡಿತ ಮಾಡಿದರೆ, ತೆರಿಗೆ ರಿಯಾಯಿತಿಗಳ ಮೂಲಕ ವೃದ್ಧಿಯಾಗಬಹುದಾದ ಜನ ಕಲ್ಯಾಣ ಪರಿಣಾಮವು ನಕಾರಾತ್ಮಕವಾಗುತ್ತದೆ. ಆಗ ತೆರಿಗೆ ರಿಯಾಯಿತಿಗಳು ಅತ್ತ ಬೆಳವಣಿಗೆಯನ್ನು ವೃದ್ಧಿಸಲಿಲ್ಲ ಇತ್ತ ಜನ ಕಲ್ಯಾಣವನ್ನೂ ವೃದ್ಧಿಸಲಿಲ್ಲ ಎಂಬುದು ಸಾಬೀತಾಗುತ್ತದೆ.
ಮೋದಿ ಅವರು ಪ್ರಕಟಿಸಿದ ತೆರಿಗೆ ರಿಯಾಯಿತಿಗಳಿಗೆ ಅನುಗುಣವಾಗಿ ಸರ್ಕಾರದ ವೆಚ್ಚಗಳಲ್ಲಿ ಒಂದು ವೇಳೆ ಯಾವುದೇ ಕಡಿತಗಳಿಲ್ಲ ಮತ್ತು ರಿಯಾಯಿತಿಗಳು ವಿತ್ತೀಯ ಕೊರತೆಯ ಏರಿಕೆಗೆ ಕಾರಣವಾಗುತ್ತವೆ ಎಂದೇ ಭಾವಿಸೋಣ. ಆಗಲೂ, “ಗುಣಕ” ಮೌಲ್ಯವು 2 ಎಂದು ಊಹಿಸಿಕೊಂಡರೂ, ಈ ಗುಣಕ ಮೌಲ್ಯವು ಯಾವ ರೀತಿಯಲ್ಲಿ ನೋಡಿದರೂ ಅಸಮಂಜಸವಲ್ಲ ಏಕೆಂದರೆ ಈ ರಿಯಾಯಿತಿಗಳನ್ನು ಬಡವರಿಗೆ ಅಥವಾ ಗ್ರಾಮೀಣ ಜನರಿಗೆ (ಇವರ ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಗುಣಕ ಮೌಲ್ಯವನ್ನು ನಿರೀಕ್ಷಿಸಬಹುದಾಗಿದೆ) ಮಾತ್ರ ವಲ್ಲದೆ ಒಟ್ಟಾರೆಯಾಗಿ ಎಲ್ಲ ಸಾರ್ವಜನಿಕರಿಗೆ ನೀಡಲಾಗುವುದರಿಂದ, ಅವು ನಮ್ಮ ವಾರ್ಷಿಕ ಬೆಳವಣಿಗೆಯ ದರಕ್ಕೆ ಕೇವಲ ಶೇ. 0.2ರಷ್ಟನ್ನು ಮಾತ್ರ ಸೇರಿಸುತ್ತವೆ. ಇದು ಒಂದು ಜುಜುಬಿ ಮೊತ್ತವೇ ಸರಿ. ತನ್ನ ಸಾಧನೆಯನ್ನು ವಿವರಿಸುವಾಗ ಅತಿಶಯೋಕ್ತಿಗಳನ್ನು ಬಳಸುವ ಸರ್ಕಾರವೊಂದು ಮಾತ್ರವೇ ಜಿಡಿಪಿಯ ಶೇ. 0.1ರಷ್ಟು ತೆರಿಗೆ ರಿಯಾಯಿತಿಗಳನ್ನು ದೀಪಾವಳಿ “ಉಡುಗೊರೆ” ಎಂದು ಹೇಳಿಕೊಳ್ಳಬಹುದು. ದೀಪಾವಳಿ
ನಿಜವಾಗಿಯೂ ಸರಕಾರಕ್ಕೆ ಕಾಳಜಿಯಿದ್ದರೆ…
ಅರ್ಥ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಬಗ್ಗೆ ಸರ್ಕಾರವು ಒಂದು ವೇಳೆ ಗಂಭೀರವಾಗಿದ್ದರೆ, ಆಗ ಸರ್ಕಾರದ ಖರ್ಚು ವೆಚ್ಚಗಳನ್ನು ಅದು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳಬೇಕಿತ್ತು. ಉದಾಹರಣೆಗೆ, ಆರಂಭಿಕವಾಗಿ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತುಆರೋಗ್ಯ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತಕ್ಕ ರೀತಿಯಲ್ಲಿ ತರಬೇತಿ ಪಡೆದ ಸಿಬ್ಬಂದಿಯೊಂದಿಗೆ (ಆಳ್ವಿಕೆಯ ಮುದ್ದಿನ ಮರಿಗಳಿಂದಲ್ಲ) ಭರ್ತಿ ಮಾಡಬೇಕಿತ್ತು ಮತ್ತು ಇದಕ್ಕೆ ತಗಲುವ ವೆಚ್ಚವನ್ನು ಸಂಪತ್ತುತೆರಿಗೆ ಮತ್ತು ವಾರಸುದಾರಿಕೆ- ತೆರಿಗೆಯನ್ನು ಹೇರುವ ಮೂಲಕ ಒದಗಿಸಿಕೊಳ್ಳಬೇಕಿತ್ತು. ದೀಪಾವಳಿ
ಸಂಪತ್ತಿನ ಅಸಮಾನತೆಯು ದೇಶದಲ್ಲಿ ಇಲ್ಲಿಯವರೆಗೂ ನಂಬಿದ್ದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿದೆ ಎಂದು ಈಗ ಹೇಳಲಾಗುತ್ತಿದೆ. ಜನ ಸಂಖ್ಯೆಯ ಮೇಲ್ತುದಿಯ ಶೇ. 1ರಷ್ಟು ಜನರು ದೇಶದ ಸಂಪತ್ತಿನ ಸುಮಾರು ಶೇ. 40ರಷ್ಟನ್ನು ಹೊಂದಿದ್ದಾರೆಂದು ಈ ಹಿಂದೆ ಅಂದಾಜಿಸಲಾಗಿತ್ತು. ಆದರೆ, ಅಮೆರಿಕ ಮೂಲದ ಬರ್ನ್ಸ್ಟೈನ್ ಎಂಬ ಒಂದು ಸಂಪತ್ತು ನಿರ್ವಹಣಾ ಸಂಸ್ಥೆಯು ಇತ್ತೀಚೆಗೆ ಪ್ರಕಟಿಸಿರುವ ಒಂದು ವರದಿಯಲ್ಲಿ ಭಾರತದ ಜನಸಂಖ್ಯೆಯ ಮೇಲ್ತುದಿಯ ಶೇ. 1ರಷ್ಟು ಜನರು ದೇಶದ ಸಂಪತ್ತಿನ ಶೇ. 60ರಷ್ಟನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ. ಇದನ್ನು ನಿಖರವಾಗಿ ಅಂದಾಜು ಮಾಡುವುದು ಒಂದು ಕಷ್ಟದ ಕೆಲಸ ಎಂಬುದೇನೊ ಸರಿ. ಆದರೆ, ನಿಖರವಾದ ಸಂಖ್ಯೆ ಏನೇ ಇರಲಿ, ಭಾರತದಲ್ಲಿರುವ ಸಂಪತ್ತಿನ ಅಸಮಾನತೆಯು ವಿಶ್ವದಲ್ಲೇ ಅತಿ ಹೆಚ್ಚಿನದು ಎಂಬುದಂತೂ ಹೌದು, ಮಾತ್ರವಲ್ಲ, ಅದು ಮತ್ತಷ್ಟು ಹೆಚ್ಚುತ್ತಿದೆ ಎಂಬುದೂ ಹೌದು. ದೀಪಾವಳಿ
ಆದ್ದರಿಂದ ಅರ್ಥ ವ್ಯವಸ್ಥೆಯ ಪುನಶ್ಚೇತನವನ್ನು ಮೂಲಭೂತವಾಗಿ ಪ್ರಜಾಪ್ರಭುತ್ವ ಸಮಾಜದ ರೀತಿ-ನೀತಿಗೆ ವಿರುದ್ಧವಾಗಿರುವ ಸಂಪತ್ತಿನ ಅಸಮಾನತೆಯ ಪೀಡೆಯ ವಿರುದ್ಧ ದಾಳಿ ಮಾಡುವ ರೀತಿಯಲ್ಲಿಯೇ ಯೋಜಿಸಬೇಕಿತ್ತು ಮತ್ತು ಪ್ರಧಾನ ಮಂತ್ರಿಯವರ ಸ್ವಾತಂತ್ರ‍್ಯ ದಿನಾಚರಣೆಯ ಭಾಷಣವು ಅಂತಹ ಪುನಶ್ಚೇತನದ ಕಾರ್ಯತಂತ್ರವನ್ನು ಪ್ರಕಟಿಸುವ ಸಂದರ್ಭವಾಗಿರಬೇಕಿತ್ತು. ಆದರೆ ಮೋದಿ ಸರ್ಕಾರ ಮಾಡಲು ಪ್ರಯತ್ನಿಸಿದ್ದು ಇದನ್ನಲ್ಲ. ಅರ್ಥ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸಲಾಗಲಿ ಅಥವಾ ಜನರಿಗೆ ಪರಿಹಾರ ನೀಡಲಾಗಲಿ ಅದು ಮಾಡಿರುವುದು ಅತ್ಯಲ್ಪವೇ. ದೀಪಾವಳಿ
ಆದರೂ, ಅತ್ಯಲ್ಪವಾಗಿರುವ ಈ ರಿಯಾಯಿತಿಗಳನ್ನೇ ಒಂದು ಭಾರೀ ಕೊಡುಗೆಎಂಬಂತೆತನ್ನ ಈ “ದೀಪಾವಳಿ ಉಡುಗೊರೆ” ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತದೆ! ಆದರೆ, ಯಾವುದೇ ಮಹತ್ವಪೂರ್ಣ ಕ್ರಮಗಳನ್ನು ಕೈಗೊಳ್ಳುವುದಕ್ಕಿಂತ ಸಾರ್ವಜನಿಕ ಪ್ರಚಾರದ ಮಾತುಗಳೇ ತನ್ನ ಆದ್ಯತೆ ಎಂದು ಬಗೆಯುವ ಒಂದು ಸರ್ಕಾರದಿಂದ ಏನನ್ನು ತಾನೇ ನಿರೀಕ್ಷಿಸಬಹುದು. ನಿಜವಾದ ಸಮಸ್ಯೆಗಳ ಪ್ರಸ್ತಾಪವೂ ಇಲ್ಲ.
ಇದನ್ನೂ ನೋಡಿ: ಧರ್ಮಸ್ಥಳದ ನಿಗೂಢಗಳು | ಚಿಕ್ಕ ಕೆಂಪಮ್ಮ ನೀಡಿದ ದೂರಿಗೂ ಸೌಜನ್ಯ ಪ್ರಕರಣಕ್ಕೂ ಲಿಂಕ್ !!Janashakthi Media
ಶಿಕ್ಷಣ ಮತ್ತುಆರೋಗ್ಯ ಪಾಲನೆ ಇವು ಹಿಂದಿನಂತಲ್ಲದೆ ಈಗ ವ್ಯಾಪಾರಗಳಾಗಿ ಬಿಟ್ಟಿವೆ; ಆದ್ದರಿಂದಅತೀದುಬಾರಿಯಾಗಿವೆ; ಅದರಿಂದಾಗಿ ಅವು ಜನ ಸಾಮಾನ್ಯರ ಅಳವಿಗೆ ನಿಲುಕದಷ್ಟು ದೂರ ಹೋಗಿವೆ ಎಂಬುದನ್ನು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇತ್ತೀಚೆಗೆ ಒಪ್ಪಿಕೊಂಡಿದ್ದಾರೆ. ಇದು, ಈ ನಿರ್ಣಾಯಕ ವಲಯಗಳು ನವ ಉದಾರವಾದಿ ಕಾರ್ಯತಂತ್ರದ ಅನುಗುಣವಾಗಿ ಖಾಸಗೀಕರಣಗೊಳ್ಳುವ ಬದಲು ಸರ್ಕಾರದ ಪ್ರಾಥಮಿಕ ಜವಾಬ್ದಾರಿಯಾಗಿರಬೇಕು ಎಂಬ ದೃಷ್ಟಿಕೋನವನ್ನು ಸೂಚ್ಯವಾಗಿ ಒಪ್ಪಿಕೊಳ್ಳುವುದರ ಹತ್ತಿರದಲ್ಲಿದೆ.
ಭಾಗವತ್‌ಈ ರೀತಿ ಒಪ್ಪಿಕೊಂಡಿರುವುದು ಸತ್ಯದ ಒಂದು ಭಾಗವನ್ನು ಮಾತ್ರ ಒಳಗೊಂಡಿದೆ. ಇನ್ನೊಂದು ಭಾಗವು ಅವರ ಪರಿವಾರವು ಹುಟ್ಟುಹಾಕಿದ ಗೂಂಡಾಗಳು ಮತ್ತು ಮೇಲೇರಲು ಪ್ರಯತ್ನಿಸುವ ವ್ಯಕ್ತಿಗಳು ಸರ್ಕಾರದ ಅಂಗ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಧ್ವಂಸಗೊಳಿಸುವುದನ್ನು ಒಳಗೊಂಡಿದೆ.
ಆರ್‌ಎಸ್‌ಎಸ್ ನಿಷ್ಠೆ ಹೊಂದಿದ ವಿದ್ಯಾರ್ಥಿ ಪುಂಡರು ವಿಶ್ವವಿದ್ಯಾಲಯಗಳಲ್ಲಿ ಯಾವುದೇ ಮುಕ್ತ ವಿಚಾರಗಳ ಚರ್ಚೆಯನ್ನುತಡೆಯುತ್ತಾರೆ; ವಿಶ್ವವಿದ್ಯಾಲಯಗಳ ಅಧ್ಯಾಪಕ ಹುದ್ದೆಗಳಿಗೆ ನಿಗದಿತ ಕನಿಷ್ಠ ಅರ್ಹತೆಗಳನ್ನೂ ಸಹ ಹೊಂದಿರದ ವ್ಯಕ್ತಿಗಳನ್ನೂ ಒಳಗೊಂಡಂತೆ ಕಳಪೆ ಗುಣಮಟ್ಟದ ನೇಮಕಾತಿಗಳನ್ನು ಮಾಡಲಾಗುತ್ತದೆ; ಮತ್ತು, ಹುಡುಕಿ ಆಯ್ಕೆ ಮಾಡಿದ ರಾಜ್ಯಪಾಲರುಗಳು, ವಿಶ್ವವಿದ್ಯಾನಿಲಯಗಳ ಪದನಿಮಿತ್ತ ಕುಲಪತಿಗಳಾಗಿ, ಆರ್‌ಎಸ್‌ಎಸ್‌ನ ನೆಚ್ಚಿನ ಭಂಟರನ್ನು ವಿಶ್ವವಿದ್ಯಾಲಯಗಳ ಆಡಳಿತದ ಮುಖ್ಯಸ್ಥರನ್ನಾಗಿ ನೇಮಿಸುತ್ತಾರೆ.
ಈ ರೀತಿಯಲ್ಲಿ ಉದ್ದೇಶಪೂರ್ವಕವಾಗಿ ವಿಶ್ವವಿದ್ಯಾನಿಲಯಗಳ ಗುಣಮಟ್ಟವನ್ನು ನಾಶಪಡಿಸುತ್ತಿರುವುದರಿಂದಾಗಿ, ಯಾವುದೇ ಒಬ್ಬ ಸಾಮಾನ್ಯ ನಾಗರಿಕನು ತನ್ನ ಮಕ್ಕಳನ್ನು ಅಂತಹ ಸಂಸ್ಥೆಗೆ ಕಳುಹಿಸುವ ಸಾಮರ್ಥ್ಯವನ್ನು ಆತ ಹೊಂದಿದ್ದರೂ ಸಹ ಆತತನ್ನ ಮಕ್ಕಳನ್ನು ಕಳುಹಿಸಬೇಕಾದರೂ ಏಕೆ? ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಅಂತಹ ನಿರ್ಣಾಯಕ ವಲಯಗಳಲ್ಲಿ ಸರ್ಕಾರ ನಡೆಸುವ ಸಂಸ್ಥೆಗಳು ಹಣಕಾಸಿನ ಕೊರತೆಯಿಂದ (ಇದು ನವ ಉದಾರವಾದಿ ತತ್ವಗಳಿಗೆ ಅನುಗುಣವಾಗಿ) ಮಾತ್ರವಲ್ಲದೆ ಗುಣಮಟ್ಟವನ್ನು ಉದ್ದೇಶ ಪೂರ್ವಕವಾಗಿ ನಾಶಪಡಿಸುತ್ತಿರುವುದರಿಂದಾಗಿ ಬಳಲುತ್ತಿವೆ (ಇದು ಶ್ರೀ ಭಾಗವತ್ ಮುಖ್ಯಸ್ಥರಾಗಿರುವ ಫ್ಯಾಸಿಸ್ಟ್ ತೆರನಸಂಘಟನೆಗಳ ಕೊಡುಗೆಯಾಗಿದೆ).
ಪರಿಣಾಮವಾಗಿ, ಶಿಕ್ಷಣವು ಶಿಥಿಲಗೊಂಡಿದೆ ಮತ್ತು ಅವ್ಯವಸ್ಥೆಯಗೂಡಾಗಿದೆ; ಆರೋಗ್ಯ ಪಾಲನೆ ವ್ಯವಸ್ಥೆಯು ಶಿಥಿಲಗೊಂಡಿದೆ ಮತ್ತು ಆಸ್ಪತ್ರೆಗಳು ಅಸ್ತವ್ಯಸ್ತಗೊಂಡಿವೆ; ಮನರೇಗದಂತಹ ಉದ್ಯೋಗ ಸೃಷ್ಟಿ ಕಾರ್ಯಕ್ರಮಗಳೂ ಶಿಥಿಲಗೊಂಡಿವೆ ಮತ್ತು ಈ ಯೋಜನೆಯನ್ನು ಉಸಿರುಗಟ್ಟಿಸಲಾಗುತ್ತಿದೆ. 79ನೇ ಸ್ವಾತಂತ್ರ‍್ಯ ದಿನದಂದು, ನವ ಉದಾರವಾದ ಮತ್ತು ಅದರ ಮುಂದಿನ ಭಾಗವಾಗಿ ಫ್ಯಾಸಿಸ್ಟ್ ತೆರನಶಕ್ತಿಗಳು ಅಧಿಕಾರಕ್ಕೆ ಏರಿದ ಸಂಯೋಜಿತ ಪರಿಣಾಮವಾಗಿ ದೇಶವು ಒಂದು ವಿಷಾದಕರ ಗೋಜಲಿನಲ್ಲಿ ಸಿಲುಕಿದೆ. ಮೋದಿಯವರ ಸ್ವಾತಂತ್ರ‍್ಯ ದಿನಾಚರಣೆಯ ಭಾಷಣದಲ್ಲಿ ಯಾವುದೇ ಪರಿಹಾರ ಕ್ರಮಗಳ ಮಾತಿರಲಿ, ಇವೆಲ್ಲದರ ಸುಳಿವೂ ಸಹ ಇಲ್ಲ.

ಕೃಪೆ: ಪಿ.ಮಹಮ್ಮದ್,
ವಾರ್ತಾಭಾರತಿ
