ದೆಹಲಿ ವಿಧಾನಸಭಾ ಚುನಾವಣೆ : ಮೂರು ತಿಂಗಳ ಮೊದಲೆ ಪಟ್ಟಿ ಬಿಡುಗಡೆ ಮಾಡಿದ ಎಎಪಿ

ನವದೆಹಲಿ:  ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ (ಎಎಪಿ) ಸಿದ್ದತೆ ನಡೆಸುತಿದ್ದು, ತನ್ನ 11 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ.

ಇತ್ತೀಚೆಗೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷಕ್ಕೆ ಪಕ್ಷಾಂತರಗೊಂಡ ಬಿಜೆಪಿ ಮತ್ತು ಕಾಂಗ್ರೆಸ್‌ನ ಆರು ನಾಯಕರು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಬ್ರಹ್ಮ್ ಸಿಂಗ್ ತನ್ವರ್ (ಛತ್ತರ್‌ಪುರ), ಅನಿಲ್ ಝಾ (ಕಿರಾರಿ), ಇತ್ತೀಚೆಗೆ ಬಿಜೆಪಿ ತೊರೆದು ಎಎಪಿ ಸೇರಿದ್ದ ಬಿಬಿ ತ್ಯಾಗಿ (ಲಕ್ಷ್ಮಿ ನಗರ). ಜುಬೈರ್ ಚೌಧರಿ (ಸೀಲಾಂಪುರ್), ವೀರ್ ಸಿಂಗ್ ದಿಂಗಾನ್ (ಸೀಮಾಪುರಿ) ಮತ್ತು ಕಾಂಗ್ರೆಸ್‌ ತೊರೆದಿದ್ದ ಸೋಮೇಶ್ ಶೋಕೀನ್ (ಮತಿಯಾಲಾ) ಮೊದಲ ಪಟ್ಟಿಯಲಿದ್ದಾರೆ.

ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ನೌಕರರ 38 ತಿಂಗಳ ಬಾಕಿ ವೇತನ ಪಾವತಿಗೆ ಸಿದ್ಧತೆ

ಸರಿತಾ ಸಿಂಗ್ (ರೋಹ್ತಾಸ್ ನಗರ), ರಾಮ್ ಸಿಂಗ್ ನೇತಾಜಿ (ಬದರ್ಪುರ್), ಗೌರವ್ ಶರ್ಮಾ (ಘೋಂಡಾ), ಮನೋಜ್ ತ್ಯಾಗಿ (ಕರವಾಲ್ ನಗರ) ಮತ್ತು ದೀಪಕ್ ಸಿಂಘಾಲ್ (ವಿಶ್ವಾಸ್ ನಗರ) ಅವರ ಹೆಸರುಗಳನ್ನು ಪಕ್ಷ ಘೋಷಿಸಿದೆ. ಅಭ್ಯರ್ಥಿ

ಪಕ್ಷದ ಸಂಚಾಲಕ ಕೇಜ್ರಿವಾಲ್ ನೇತೃತ್ವದ ಎಎಪಿಯ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಸಭೆಯ ನಂತರ ಈ ಹೆಸರುಗಳನ್ನು ಘೋಷಿಸಲಾಯಿತು.

ದೆಹಲಿ ವಿಧಾನಸಭೆಯ 70 ಸ್ಥಾನಗಳಿಗೆ 2025 ರ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದೆ.ಕೆಲಸ, ಸಾರ್ವಜನಿಕ ಅಭಿಪ್ರಾಯ ಮತ್ತು ಸಂಭಾವ್ಯರ ಗೆಲ್ಲುವ ಸಾಧ್ಯತೆಗಳ ಆಧಾರದ ಮೇಲೆ ಚುನಾವಣೆಗೆ ಟಿಕೆಟ್ ವಿತರಿಸಲಾಗುವುದು ಎಂದು ಕೇಜ್ರಿವಾಲ್ ಈ ಹಿಂದೆ ಹೇಳಿದ್ದರು.

2020 ರಲ್ಲಿ ನಡೆದ ಕೊನೆಯ ಚುನಾವಣೆಯಲ್ಲಿ ಎಎಪಿ 70 ವಿಧಾನಸಭಾ ಸ್ಥಾನಗಳಲ್ಲಿ 62 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಇದನ್ನೂ ನೋಡಿ: SCZIEF Conference| wealth is not the value of development – Says Ashsok Dhavale | AIIEA

Donate Janashakthi Media

Leave a Reply

Your email address will not be published. Required fields are marked *