ಸರ್ಕಾರಿ ಸವಲತ್ತು ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯ!

ನವದೆಹಲಿ: ಸರ್ಕಾರ ನೀಡುವ ಯಾವುದೇ ಯೋಜನೆಯ ಸವಲತ್ತುಗಳು, ಸಹಾಯಧನ ಮತ್ತು ಇತ್ಯಾದಿ ಪಡೆದುಕೊಳ್ಳಲು ಇನ್ನು ಮುಂದೆ ಆಧಾರ್‌ ಸಂಖ್ಯೆಯನ್ನು ಬಳಸಬೇಕೆಂದು ವಿಶಿಷ್ಟಗುರುತಿನ ಪ್ರಾಧಿಕಾರ ಸುತ್ತೋಲೆ ಹೊರಡಿಸಿದೆ.

ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಿಗೆ ಈ ಬಗ್ಗೆ ಸುತ್ತೋಲೆಯಲ್ಲಿ ಸ್ಪಷ್ಟನೆ ನೀಡಲಾಗಿದ್ದು, ಈಗಾಗಲೇ ದೇಶದ ಶೇ. 99 ರಷ್ಟು ವಯಸ್ಕರಿಗೆ ಆಧಾರ್ ನಂಬರ್ ನೀಡಲಾಗಿದೆ. ಹನ್ನೆರಡು ಡಿಜಿಟ್ ಸಂಖ್ಯೆಯ ನಂಬರ್ ಸರ್ಕಾರದ ಸವಲತ್ತು ನೇರವಾಗಿ ಪಡೆಯಲು ನೆರವಾಗುತ್ತಿವೆ ಎಂಬ ವಿಚಾರವನ್ನು ಉಲ್ಲೇಖಿಸಲಾಗಿದೆ.

ಆಧಾರ್‌ ಕಾಯ್ದೆಯ ಸೆಕ್ಷನ್‌ 7 ಅನ್ವಯ, ಒಂದು ವೇಳೆ ಯಾವುದೇ ವ್ಯಕ್ತಿ ಸಹಾಯಧನ ಅಥವಾ ಸರ್ಕಾರದ ಇನ್ಯಾವುದೇ ಲಾಭ ಪಡೆಯಲು ಆಧಾರ್‌ ಸಂಖ್ಯೆ ನೀಡುವುದು ಕಡ್ಡಾಯವಾಗಿತ್ತು. ಒಂದು ವೇಳೆಗೆ ಯಾವುದೇ ವ್ಯಕ್ತಿಗೆ ಆಧಾರ್‌ ಸಂಖ್ಯೆ ಅಲಭ್ಯ ಎಂದಾರೆ ಪರ್ಯಾಯ ಗುರುತಿನ ಚೀಟಿ ನೀಡಿ ಸೌಲಭ್ಯ ಪಡೆದುಕೊಳ್ಳಬಹುದಿತ್ತು. ಆದರೆ ಇಂತಹ ಪರ್ಯಾಯವನ್ನು ಬಳಸಲು ಸಾಧ್ಯವಿಲ್ಲ.

ಆಗಸ್ಟ್‌ 11ರಂದು ಹೊರಡಿಸಿರುವ ಸುತ್ತೋಲೆ ಅನ್ವಯ, ಒಂದು ವೇಳೆ ಯಾವುದೇ ವ್ಯಕ್ತಿ, ಸರ್ಕಾರಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ವೇಳೆ ಆಧಾರ್‌ ನೀಡದೆ ಇದ್ದರೆ, ಅಂಥ ವ್ಯಕ್ತಿ ಆಧಾರ್‌ ನೋಂದಣಿಗೆ ತಕ್ಷಣವೇ ಅರ್ಜಿ ಸಲ್ಲಿಸಬೇಕು. ಆಧಾರ್ ಸಂಖ್ಯೆ ಸಿಗುವವರೆಗೆ ಪರ್ಯಾಯ ಗುರುತಿನ ಚೀಟಿ ಬಳಕೆ ಮಾಡಬಹುದು. ಆದರೆ ತಕ್ಷಣವೇ ಆಧಾರ್ ಸಂಖ್ಯೆಯನ್ನು ಪಡೆದುಕೊಳ್ಳಲುವುದು ಅವಶ್ಯಕವೆಂದು ತಿಳಿಸಲಾಗಿದೆ.

ಆಧಾರ್‌ ಸಂಖ್ಯೆ ದುರ್ಬಳಕೆ ತಪ್ಪಿಸುವುದರ ಜತೆಗೆ ಪಾರದರ್ಶಕವಾಗಿರಲು ಆಧಾರ್‌ ಸಂಖ್ಯೆ ಇಲ್ಲದವರಿಗೆ ಇ- ಕೆವೈಸಿ ಮತ್ತು ಇತರೆ ಆಧಾರ್‌ ಅಥೆಂಟಿಕೇಷನ್‌ಗೆ ವರ್ಚುವಲ್‌ ಐಡೆಂಟಿಫೈರ್‌ (ವಿಐಡಿ) ಮಾದರಿಯನ್ನು ಪರಿಚಯಿಸಲಾಗಿದೆ.

ಈ ಹಿಂದೆ ಸಹ ಪ್ರಾಧಿಕಾರವು ನಾಗರಿಕರಿಗೆ ವರ್ಚುವಲ್ ಐಡೆಂಟಿಫೈಯರ್ (VID) ಸೌಲಭ್ಯವನ್ನು ನೀಡಿತ್ತು. VID ಒಂದು ತಾತ್ಕಾಲಿಕ ಮತ್ತು ಹಿಂತೆಗೆದುಕೊಳ್ಳಬಹುದಾದ 16 ಅಂಕಿಯ ಗುರುತಿನ ಸಂಖ್ಯೆಯಾಗಿದ್ದು ಇದನ್ನು ಆಧಾರ್ ಸಂಖ್ಯೆಯೊಂದಿಗೆ ಮ್ಯಾಪ್ ಮಾಡಿ ಇ-ಕೆವೈಸಿಯನ್ನು ಸುಲಭವಾಗಿ ಪಡೆದುಕೊಳ್ಳಬಹುದು.

ವಿಐಡಿ ಒಂದು ಐಚ್ಛಿಕ ಆಯ್ಕೆಯಾಗಿದ್ದು ಗ್ರಾಹಕ ಅಥವಾ ಫಲಾನುಭವಿ ಬೇಕೆಂದರೆ ನೀಡಬಹುದು ಇಲ್ಲವೇ ನಿರಾಕರಿಸಬಹುದು. ಆದರೆ ಸರ್ಕಾರಿ ಯೋಜನೆ ಮತ್ತು ಸವಲತ್ತು ಪಡೆದುಕೊಳ್ಳಲು ಆಧಾರ್ ನಂಬರ್ ಕಡ್ಡಾಯವಾಗಿದೆ.

Donate Janashakthi Media

Leave a Reply

Your email address will not be published. Required fields are marked *