ಕೋಲಾರ : ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಅವಮರ್ಯಾದಯಿಂದ ಕೊಲೆಯಾದ ಹುಡುಗ ಮತ್ತು ಹುಡುಗಿಯ ಮನೆಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಮತ್ತು ಗಮನ ಸಂಘಟನೆಯ ನಿಯೋಗ ಬೇಟಿ ಮಾಡಿತ್ತು. ಎರಡು ಕುಟುಂಬಗಳಿಗೆ ಸಾಂತ್ವನ, ಧೈರ್ಯ ನೀಡಿ ಜತೆಗೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ.
ನಿಯೋಗವು ಎರಡು ಕುಟುಂಬಗಳ ಜತೆ ಮಾತನಾಡಿರುವ ಅಂಶಗಳನ್ನು ವಿವರವಾಗಿ ಈ ಕೆಳಗಿನಂತೆ ತಿಳಿಸಿದೆ.
ಈ ಬೇಟಿಯ ಸಮಯದಲ್ಲಿ ಗಮನಕ್ಕೆ ಬಂದ ಅಂಶಗಳು :
ಪರಿಶಿಷ್ಟ ಜಾತಿಯ ಹುಡುಗ ಗಾರೆ ಕೆಲಸ ಮಾಡುವ ಬಡ ಕುಟುಂಬದವರು ಇಬ್ಬರು ಗಂಡು ಮಕ್ಕಳು ಎರಡನೆಯ ಮಗನೇ ಗಂಗಾಧರ್ 23 ವರ್ಷ, ಪಿಯುಸಿ ಪೇಲ್ ಆಗಿದ್ದು , ಐಟಿಐಗೆ ಸೇರ್ಪಡೆಯಾಗಲು ಹಣ ಹೊಂದಿಸಲು ಅಣ್ಣನ ಜೊತೆಯಲ್ಲಿಯೇ ಗಾರೆ ಕೆಲಸಕ್ಕೆ ಹೋಗುತ್ತಿದ್ದನಂತೆ. ಅವರ ಮನೆಯಿಂದ ನಾಲ್ಕೈದು ಮನೆ ದಾಟಿದರೆ ಹುಡುಗಿ ಮನೆ, ಹುಡುಗಿಯ ತಂದೆ ಸಹ ಕೂಲಿ ಕಾರ್ಮಿಕ ಮತ್ತು ಅಂಗವಿಕಲರಾಗಿದ್ದಾರೆ. ಗೊಲ್ಲ ಸಮುದಾಯದವರು. ಇವರಿಗೆ ಎರಡು ಹೆಣ್ಣು ಮತ್ತು ಒಂದು ಗಂಡು ಮಗ ಇದ್ದಾರೆ. ಅವಮರ್ಯಾದಯ ಕೊಲೆಗೆ ಬಲಿಯಾದ ದುರ್ದ್ಯೆವಿ ಕೀರ್ತಿ. ಈಕೆ ಡಿಗ್ರಿ 2 ನೇ ವರ್ಷ ಓದುತ್ತಿದ್ದಾಳೆ. ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.
ಸೋಮವಾರ ಸಂಜೆ ಹುಡುಗಿ ಮನೆಯಲ್ಲಿ ಏನು ನಡೆದಿದೆಯೋ ಗೊತ್ತಿಲ್ಲ. ಹುಡುಗನ ಮನೆ ಬಳಿ ಹುಡುಗಿ ಕೀರ್ತಿ ಹೋಗಿ ಹುಡುಗನ್ನು ತಂಬಿಕೊಂಡು ನಿನ್ನ ಬಿಟ್ಟು ಬದುಕಿರಲಾರೆ ಎಂದು ಆಳುತ್ತಿದ್ದಳಂತೆ ಆ ಸಮಯದಲ್ಲಿ ಹುಡುಗಿಯ ತಾಯಿ ಬಂದು ಮಗಳನ್ನು ಕರೆದುಕೊಂಡು ಹೋಗಿದ್ದಾರೆ. ರಾತ್ರಿ ಪೂರ್ತಿಯಾಗಿ ಮನೆಯವರು ಹುಡುಗಿಗೆ ಮನವೋಲಿಸುವ ಪ್ರಯತ್ನ ಮಾಡಲಾಗಿದೆ. ಹುಡುಗಿಯೂ ಅಷ್ಟೇ ಗಟ್ಟಿಯಾಗಿ ನಾನು ಅದೇ ಹುಡುಗನನ್ನು ಮದುವೆಯಾಗುವುದಾಗಿ ಹಟ ಹಿಡಿದಿದ್ದಾಳಂತೆ. ಅದೇ ಸಮಯದಲ್ಲಿ ಹುಡುಗನ ದೊಡ್ಡಮ್ಮ ನಿಧನರಾಗಿದ್ದು ಕುಟುಂಬಸ್ಥರೆಲ್ಲರೂ ಸಾವಿಗೆ ಹೋಗಲು ತಯಾರಿ ಮಾಡಿಕೊಂಡು ತಡರಾತ್ರಿಯಾಯಿತೆಂದು ಬೆಳಿಗ್ಗೆ ಹೋಗಲು ನಿರ್ಧರಿಸಿ ಸುಮ್ಮನಾದರಂತೆ. ಬೆಳಿಗ್ಗೆ ಸಾವಿಗೆ ಕುಟುಂಬದವರೆಲ್ಲಾ ಹೋಗಿದ್ದಾರೆ. ಅಣ್ಣನ ಜೊತೆಯಲ್ಲಿ ತಮ್ಮ ಗಂಗಾದರ್ ಗಾಡಿಯಲ್ಲಿ ಹೊರಟಿದ್ದಾನೆ. ಅ ಸಮಯದಲ್ಲಿ ಕೀರ್ತಿ ನಿಧನರಾದ ಸುದ್ದಿ ಹುಡುಗನ ಕಿವಿಗೆ ಬಿದ್ದಿದೆ. ಆದರೆ ಅಣ್ಣನೊಂದಿಗೆ ಏನು ಚರ್ಚಿಸದೆ ಗಾಡಿಯಿಂದ ಇಳಿದು ರಸ್ತೆ ಪಕ್ಕ ಇದ್ದ ತೋಪಿನೊಳಗೆ ಓಡಿ ಹೋಗಿಬಿಟ್ಟಿದ್ದಾನೆ. ತಕ್ಷಣ ಅವರ ಅಣ್ಣ ತನ್ನ ಬಾಮೈದುನನ್ನು ಕರೆದುಕೊಂಡು ಬಂದು ತಮ್ಮನನ್ನು ಹುಡುಕುವಾಗ ರೈಲು ಕಂಬಿಯ ಮೇಲೆ ತಮ್ಮ ಕುಳಿತಿದ್ದನಂತೆ. ಅವನ ಬಳಿ ಇವರು ಹೋಗುವಷ್ಟರಲ್ಲಿ ಅಲ್ಲಿಂದ ಮತ್ತೇ ತೋಪಿನೊಳಗೆ ಓಡೊಗಿದ್ದಾನೆ. ಇವರು ಮುಂದೆ ಹೋಗಿದ್ದಾರೆ. ಆದರೆ ವಾಪಸ್ ಹಿಂದೆ ಬಂದು ನಿಂತಿದ್ದನಂತೆ.ಇವರು ಹತ್ತಿರ ಹೋಗುವಷ್ಟರಲ್ಲಿ ಹತ್ತಿರ ಯಾರು ಬರಬೇಡಿ ಎಂದು ಕೈಯಾಡಿಸುತ್ತಾ ವೇಗವಾಗಿ ಬರುತ್ತಾ ಅವರ ಅಣ್ಣನ ಮುಂದೆಯೇ ರೈಲಿಗೆ ತಲೆಕೊಟ್ಟಿರುತ್ತಾನೆ. ಕಣ್ಣ ಮುಂದೆಯೇ ರೈಲಿಗೆ ಸಿಕ್ಕಿ ಪ್ರಾಣಬಿಟ್ಟ ತಮ್ಮನ ನೆನೆದು ಕಣಿರಿಟ್ಟ ಅವರ ಅಣ್ಣ ಅತ್ತಿಗೆ ಒಂದು ಕಡೆ, ಇನ್ನೊಂದು ಕಡೆಯಲ್ಲಿ ನೀನು ಎಲ್ಲಿಯೂ ಹೋಗಬೇಡ ನಾನು ನಿನ್ನನ್ನು ಸಾಕುವೆನೆಂದು ಹೇಳಿ ಹೀಗೆ ಮಾಡಿಕೊಂಡ ಅಂತ ನಮ್ಮನ್ನು ತಬ್ಬಿಕೊಂಡು ಅಳುವ ಹುಡುಗನ ತಾಯಿ ಕಾಂತಮ್ಮನವರ ಗೋಳಾಟ ಮನಕಲಕುವಂತಿತ್ತು.
ಹುಡುಗಿ ತಾಯಿ ವಸಂತಮ್ಮ ಹಾರ್ಟ್ ಸಮಸ್ಯೆಯಿದೆ. ನಾನು ನನ್ನ ಗಂಡ ಮೂರು ಜನರು ಮಾತ್ರ ಇದ್ದೆವು, ಬೆಳಿಗ್ಗೆ ಹಾಲು ಕರೆದು ಡೈರಿಗೆ ಹಾಲು ಹಾಕಲು ಹೋಗಿದೆ, ಅ ಸಮಯದಲ್ಲಿ ನಿನ್ನ ಮಗಳು ಸತ್ತು ಹೋಗಿದ್ದಾಳಂತೆ ಡೈರಿ ಹತ್ತಿರ ಹೇಳಿದಾಗ ನನಗೆ ಗೊತ್ತಾಗಿದ್ದು, ಮನೆಗೆ ಬರುವಷ್ಟರಲ್ಲಿ ನನ ಗಂಡ ಆಳುತಾ ಕುಳಿತಿದ್ದರು . ಏನಾಯಿತೋ ನನಗೆ ಗೊತ್ತಿಲ್ಲ ಅಂತ ಗೋಳಾಡುತ್ತಿದ್ದರು. ಇನ್ನೊಂದು ಕಡೆಯಲ್ಲಿ ಹುಡುಗಿಯ ಅಜ್ಜಿ ಮತ್ತು ಅತ್ತೇ ಅವನು ಹೀಗೆ ಮಾಡಬಾರದಿತ್ತು. ಮಾಡಿ ಬಿಟ್ಟಿದ್ದಾನೆ. ಅಪ್ಪ ಮಗಳು ಪ್ರೀತಿ ಜಾಸ್ತಿ ಇತ್ತು. ಕಷ್ಟ ಪಟ್ಟು ಓದಿಸುತ್ತಿದ್ದಾನೆ. ಮನೆ ಕಟ್ಟಿದ್ದಾನೆ. ಹುಡುಗಿ ನೋಡಲು ಹುಡುಗರು ಬರುತ್ತಿದ್ದರು ಅದಕ್ಕೆ ಮರ್ಯಾದೆ ಹೋಗುತ್ತೇ ಅಂತ ಹೀಗೆ ಮಾಡಬ್ಟಿದ್ದಾನೆ ತಪ್ಪು ಅನ್ನುತ್ತಾರೆ ಹುಡುಗನ ಮನೆಯವರು. ಕೇಸ್ ನ ಸುತ್ತಾ ಮುತ್ತಾ ನೋಡಿದರೆ ಹುಡುಗಿ ಅಪ್ಪ ಸಾಕಷ್ಟು ಮಗಳಿಗೆ ಕನ್ವಿನ್ಸ್ ಮಾಡಿ ಅಕೆ ಒಪ್ಪದಿದ್ದಾಗ ಮಗಳು ಸೋಪಾ ಮೇಲೆ ಮಲಗಿದಾಗ ಅಕೆಯ ಎದೆಯಾ ಮೇಲೆ ಕುಳಿತು ಬಾಯಿಗೆ ಬಟ್ಟೆ ತುರಿಕಿ ಉಸಿರುಕಟ್ಟಿಸಿ ಸಾಯಿಸಿ. ಅವಳು ನೇಣು ಹಾಕಿಕೊಂಡಿದ್ದಾರೆಂದು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ನೇಣು ಹಾಕಿಕೊಳ್ಳುವಷ್ಟು ಉದ್ದದ ಬಟ್ಟೆ ಅಲ್ಲಿ ಇರಲಿಲ್ಲವೆಂದು ಪೋಲಿಸ್ ಇನ್ಸೇಪೆಕ್ಟರ್ ಹೇಳುತ್ತಾರೆ.
ಇದನ್ನೂ ಓದಿ:ಬಹಿಷ್ಕಾರಕ್ಕೆ ಒಳಗಾದ ಕುಟುಂಬವನ್ನು ಭೇಟಿ ಮಾಡಿದ ಮಹಿಳಾ ಸಂಘಟನೆ
ದಾರಿಯಲ್ಲಿ ಬರುವಾಗ ಅ ಊರಿನವರು ಹಾಗೂ ಅಕ್ಕಪಕ್ಕದವರೊಂದಿಗೆ ಚರ್ಚೆ ಮಾಡಿದಾಗ ಎರಡು ಜೀವಗಳು ಬಲಿಯಾದವು. ಅವರನ್ನು ಅವರ ಪಾಪಬಿಟ್ಟಿದರೆ ಎಲ್ಲೋ ಹೋಗಿ ಬದುಕುತ್ತಿದ್ದರು. ಎರಡು ಜೀವ ಬಲಿಯಾದವು ಅನ್ನುತ್ತಿದ್ದರು. ಅವಮಾರ್ಯದ ಕೊಲೆಗಳು ನಿರಂರತವಾಗಿ ನಡೆಯುತ್ತದೆ ಎಂಬ ಮಾಹಿತಿಯನ್ನು ನಿಯೋಗ ಜನಶಕ್ತಿ ಮೀಡಿಯ ಜತೆ ಹಂಚಿಕೊಂಡಿದೆ.
ನಿಯೋಗದಲ್ಲಿ ಜನವಾದಿಯ ರಾಜ್ಯ ಉಪಾದ್ಯಕ್ಷರಾದ ಗೌರಮ್ಮ, ರಾಜ್ಯ ಸಮಿತಿ ಸದಸ್ಯರಾದ ಗೀತಾ, ಆಂಜನಮ್ಮ, ಕೋಲಾರ ಜಿಲ್ಲಾ ಸಮಿತಿ ಸದಸ್ಯರಾದ ಮಂಜುಳ, ಲಲಿತಮ್ಮ , ಗಮನ ಸಂಘಟನೆಯಿಂದ ಶಾಂತಮ್ಮ ಇದ್ದರು.