ಹಾವೇರಿ| ಅಂಗನವಾಡಿ ಕಾರ್ಯಕರ್ತೆಯ ಅನುಮಾಸ್ಪದ ಸಾವಿ – ಅತ್ಯಾಚಾರ, ಕೊಲೆ ಶಂಕೆ

ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಅನುಮಾಸ್ಪದಾಗಿ ಸಾವನ್ನಪ್ಪಿದ್ದು, ಸದ್ಯ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಜಾತ್ರೆಗೆ ಹೋಗಿದ್ದ ಮಹಿಳೆ ಅರೆಬೆತ್ತಲಾಗಿ ಪತ್ತೆಯಾಗಿದ್ದಾರೆ. ಕುಟುಂಬಸ್ಥರು ಅತ್ಯಾಚಾರ ಮತ್ತು ಹತ್ಯೆಯ ಆರೋಪ ಮಾಡಿದ್ದಾರೆ. ಪೊಲೀಸರು ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದು ವಿಚಾರಣೆ ನಡೆಸುತ್ತಿದ್ದಾರೆ.

ಇದು ಸಹಜ ಸಾವೆ ಅಥವಾ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಮೃತ ಮಹಿಳೆ ಹೆಸರು ಪಕ್ಕಿರವ್ವ ನಿಂಗಪ್ಪ ಸಣ್ಣತಮ್ಮಣ್ಣನವರ. ಕೋಡ ಗ್ರಾಮದಲ್ಲಿ ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಮಕ್ಕಳು ಮರಿ ಯಾರು ಇಲ್ಲಾ, ಗಂಡ ಸಾವನ್ನಪ್ಪಿದ ನಂತರ ಏಕಾಂಗಿಯಾಗಿ ಬದುಕು ಕಟ್ಟಿಕೊಂಡಿದ್ದರು.

ಇದನ್ನೂ ಓದಿ: ತಮಿಳುನಾಡು| ರೈಲು ನಿಲ್ದಾಣದ ಹಿಂದಿ ನಾಮಫಲಕಕ್ಕೆ ಕಪ್ಪು ಬಣ್ಣ ಬಳಿದ ಜನರು

ಫೆಬ್ರುವರಿ 15 ರಂದು ಕೋಡ್ ಗ್ರಾಮದಿಂದ ಜಾತ್ರೆಗೆ ಹೋಗುತ್ತೇನೆಂದು ಹೋಗಿದ್ದ ಮಹಿಳೆ, ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜಿಲ್ಲೆಯ ಹಿರೇಕೆರೂರು ಪಟ್ಟಣದ ಹೊರವಲಯದಲ್ಲಿರೋ ದುರ್ಗಾದೇವಿ ದೇವಾಲಯದ ಬಳಿ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

ಒಟ್ಟಾರೆ ಸಾವಿನ ಸುತ್ತ ಸಾಕಷ್ಟು ಅನುಮಾನಗಳ ಹುತ್ತ ಮೂಡಿದ್ದು, ಪೊಲೀಸರ ತನಿಖೆಯಿಂದ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ಇದನ್ನೂ ನೋಡಿ: ಕೇಂದ್ರೀಕರಣದ ರಾಜಕಾರಣ ಮತ್ತು ವಿಕೇಂದ್ರೀಕರಣದ ಪಂಚಾಯತ್ ರಾಜ್ ವ್ಯವಸ್ಥೆಯ ವೈಫಲ್ಯ‌… Janashakthi Media

Donate Janashakthi Media

Leave a Reply

Your email address will not be published. Required fields are marked *