ಒಂದೇ ಆಟೋದಲ್ಲಿ 27 ಮಂದಿ ಪ್ರಯಾಣ: ದಿಗ್ಭ್ರಮೆಗೊಂಡ ಪೊಲೀಸರು

ಫತೇಪುರ(ಉತ್ತರ ಪ್ರದೇಶ): ಅತಿ ವೇಗವಾಗಿ ಚಲಿಸಿಕೊಂಡು ಹೋಗುತ್ತಿದ್ದ ಆಟೋವೊಂದನ್ನು ತಡೆದ ಉತ್ತರ ಪ್ರದೇಶದ ಪೊಲೀಸರಿಗೆ ದಿಗ್ಭ್ರಮೆ ಉಂಟಾಯಿತು. ಕಾರಣ ಇಷ್ಟೇ ಆಟೋ ಚಾಲಕ ಒಳಗೊಂಡು 4 ಮಂದಿ ಹೆಚ್ಚೆಂದರೆ, 6 ಮಂದಿ ಪ್ರಯಾಣಿಸಬಹುದಾದ ಆಟೋದಲ್ಲಿ ಬರೋಬ್ಬರೀ 27 ಮಂದಿ ಪ್ರಯಾಣಿಸುತ್ತಿದ್ದರು.

ಬಕ್ರೀದ್ ಆಚರಣೆ ವೇಳೆ ಒಂದೇ ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದವರನ್ನು ಪೊಲೀಸರು ತಡೆದರು. ಇದನ್ನು ಚಿತ್ರೀಕರಿಸುತ್ತಿರುವ ವೇಳೆಯಲ್ಲಿ ಆಟೋದಲ್ಲಿದ್ದ ಪ್ರಯಾಣಿಕರನ್ನೆಲ್ಲರನ್ನೂ ಇಳಿಯಲು ಹೇಳಿದ್ದಾರೆ. ಚಾಲಕನನ್ನು ಹೊರತುಪಡಿಸಿ ಮಕ್ಕಳು, ವೃದ್ಧರು ಸೇರಿ 27 ಜನ ಇಳಿದಿದ್ದಾರೆ. ಆಟೋದಿಂದ ಒಬ್ಬಬ್ಬರೇ ಪ್ರಯಾಣಿಕರು ಕೆಳಿಗಿಳಿಯುತ್ತಿರುವುದನ್ನು ನೋಡಬಹುದಾಗಿದೆ.

ಫತೇಪುರದ ಬಿಂಡ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 27 ಮಂದಿಯನ್ನು ಕರೆದೊಯುತ್ತಿದ್ದ ಆಟೋ ಚಾಲಕನಿಗೆ ದಂಡ ಹಾಕಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಇದೇ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸಾಕಷ್ಟು ಬಾರಿ ನಿಗದಿಗಿಂತ ಹೆಚ್ಚಿನ ಸಾಮರ್ಥ್ಯದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿರುದ್ದವರನ್ನು ಪೊಲೀಸರು ಎಚ್ಚರಿಕೆ ನೀಡುತ್ತಿದ್ದರು. ಆದರೂ ಸಹ ಆಟೋ ಚಾಲಕರು ತಮ್ಮ ಹಳೇ ಛಾಳಿ ಮುಂದುವರೆಸಿದ್ದರು.

ಸಾಮಾನ್ಯವಾಗಿ ಒಂದು ಆಟೋದಲ್ಲಿ 6 ಜನರು ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಆದರೆ ಈ ಆಟೋರಿಕ್ಷಾದಲ್ಲಿ ಚಾಲಕನನ್ನು ಹೊರತುಪಡಿಸಿ 27 ಜನರು ಇರುವುದನ್ನು ನೋಡಿ ಪೊಲೀಸರೇ ದಿಗ್ಭ್ರಮೆಗೊಂಡಿದ್ದಾರೆ. ಈ ವೀಡಿಯೋವನ್ನು ದಾರಿಹೋಕರೊಬ್ಬರು ವೀಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಆಟೋವನ್ನು ವಶಕ್ಕೆ ಪಡೆದ ಪೊಲೀಸರು ಚಾಲಕನಿಗೆ 11, 500 ರೂ ದಂಡ ವಿಧಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *