ಯಾದಗಿರಿ: ರಾಜ್ಯದಲ್ಲಿ ಮೈಕ್ರೊ ಫೈನಾನ್ಸ್ ಕಿರುಕುಳ ಹೆಚ್ಚುತ್ತಲೇ ಇದ್ದೂ, ಫೈನಾನ್ಸ್ ಕಿರುಕುಳಕ್ಕೆ ಬೇಸತ್ತ ಜನರು ಊರು ಬಿಟ್ಟು ಹೋಗುತ್ತಿದ್ದರೆ, ಮತ್ತೆ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮೈಕ್ರೊ
ಇಲ್ಲೊಬ್ಬ ತಾಯಿ ಎಂಥಹ ನರಕಯಾತನೆ ಅನುಭವಿಸುತ್ತಿದ್ದಾರೆ. ಒಂದೆಡೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮಗ, ಮತ್ತೊಂದೆಡೆ ಮೈಕ್ರೋ ಫೈನಾನ್ಸ್ ಕಂಪನಿಯವರ ಕಿರುಕುಳ ಅತಿಯಾಗಿದ್ದು, ಬೇಸತ್ತ ಈ ಮಹಿಳೆ ಊರು ಬಿಟ್ಟು ತೊರೆದಿದ್ದಾಳೆ. ಬೀಗ ಜಡಿದು ಊರು ಬಿಟ್ಟ ಮನೆಗೆ ಮೈಕ್ರೋ ಫೈನಾನ್ಸ್ ಕಂಪನಿಯವರು ಮತ್ತೊಂದು ಬೀಗ ಜಡಿದಿದ್ದಾರೆ. ಅನಾರೋಗ್ಯ ಪೀಡಿತ ಊರಿಗೆ ಬಂದ್ರೂ ಇರೋಕೆ ಜಾಗ ಇಲ್ಲದಂತಾಗಿದೆ.
ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಮಗ ಒಂದೆಡೆಯಾದ್ರೆ, ಫೈನಾನ್ಸ್ ಕಿರುಕುಳ ಮತ್ತೊಂದೆಡೆ
ಕಿಡ್ನಿ ವೈಫಲ್ಯದಿಂದ ಸಾವು ಬದುಕಿನ ಮಧ್ಯೆ ಮಗ ಮಲ್ಲಿಕಾರ್ಜುನ ಹೋರಾಡುತ್ತಿದ್ದಾನೆ. ಮತ್ತೊಂದೆಡೆ ನಾಲ್ಕೈದು ಫೈನಾನ್ಸ್ ನಲ್ಲಿ 30, 50 ಸಾವಿರದಂತೆ ಸಾಲ ಪಡೆದಿರುವುದು ಗೀತಮ್ಮಳಿಗೆ ಅವರ ಕಿರುಕುಳದಿಂದ ನೆಮ್ಮದಿಯೇ ಇಲ್ಲದಂತಾಗಿದೆ. ಫೈನಾನ್ಸ್ ಕಿರುಕುಳಕ್ಕೆ ಗೀತಮ್ಮ ಊರು ಬಿಟ್ಟು ಬೆಂಗಳೂರಿಗೆ ದುಡಿಯೋಕೆ ಹೋಗಿದ್ದಾಳೆ.
ಇದನ್ನೂ ಓದಿ: ಚಾರ್ಮಾಡಿ ಘಾಟಿಯಲ್ಲಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯ ಬೆಂಕಿಗೆ ಆಹುತಿ
ಗೀತಮ್ಮಳ ಮಗ ಮಲ್ಲಿಕಾರ್ಜುನ ಬೆಂಗಳೂರಲ್ಲೇ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದೂ, ನಗರದ ಖಾಸಗಿ ಆಸ್ಪತ್ರೆಗೆ ಆತನನ್ನು ದಾಖಲಿಸಲಾಗಿದೆ. ಮಗ ಬದುಕಲ್ಲ ಊರಿಗೆ ಕರೆದ್ಯೊಯ್ರಿ ಎಂದು ವೈದ್ಯರು ಹೇಳಿದ್ದಾರೆ. ಅನಾರೋಗ್ಯಕ್ಕೆ ತುತ್ತಾದ ಮಗನೊಂದಿಗೆ ಗೀತಮ್ಮ ಊರಿಗೆ ಬಂದಿದ್ದಳು ಆದ್ರೆ ಅವರು ಮನೆಗೆ ಬರುತ್ತಿದ್ದಂತೆ ಶಾಕ್ ಎದುರಾಗಿತ್ತು.
ಗೀತಮ್ಮ ಊರಿಗೆ ಬರೋವಷ್ಟರಲ್ಲಿ ಫೈನಾನ್ಸ್‌ನವರು ಮನೆಗೆ ಬೀಗ ಹಾಕಿದ್ದರು. ಉಳಿದುಕೊಳ್ಳಲು ಮನೆ ಇಲ್ಲದೇ ಸೀತಮ್ಮ ಮತ್ತೆ ಮಗನನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾಳೆ. ಮಗ ಸತ್ತರೇ ನಾನ್ ಹೆಣ ಎಲ್ಲಿ ತೆಗೆದುಕೊಂಡು ಹೋಗಲಿ ಎಂದು ಸೀತಮ್ಮ ಕಣ್ಣೀರು ಇಟ್ಟಿದ್ದಾಳೆ.
ನನ್ನ ಮಗನ ಹೆಣ ಬೇರೆಯವ್ರ ಮನೆಯ ಮುಂದೆ ಓಯ್ದು ಇಡಬೇಕಾ..? ನಮಗೆ ಸಹಾಯ ಮಾಡಿ ಪುಣ್ಯ ಕಟ್ಕೊಳ್ಳಿ ಅಂತ ನ್ಯೂಸ್18 ಕನ್ನಡದ ಎದುರೇ ತಾಯಿ ಸೀತಮ್ಮ ಕಣ್ಣೀರು ಹಾಕುತ್ತ ಅಳಲು ತೋಡಿಕೊಂಡಿದ್ದಾಳೆ.
ಇದನ್ನೂ ನೋಡಿ: ತೊಗರಿಗೆ ವಿಶೇಷ ಪ್ಯಾಕೇಜ್ ನೀಡಲು ಆಗ್ರಹಿಸಿ “ಕಲಬುರಗಿ ಬಂದ್