ಯಾದಗಿರಿ: ಜಿಲ್ಲೆಯ ಶಹಾಪುರದಲ್ಲಿ ಕಳ್ಳತನ ಮಾಡಿದ ಕಳ್ಳ ತಾನೇ ಹೋಗಿ ದೂರು ನೀಡಿರುವ ಸಿನಿಮೀಯ ಘಟನೆ ನಡೆದಿದೆ. ಇಲ್ಲಿನ ಸರಕಾರಿ ಗೋದಾಮನಲ್ಲಿ ಅಕ್ಕಿ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಕಳ್ಳತನದ ವಿರುದ್ಧ ದೂರು ನೀಡಿದ್ದ ಸರ್ಕಾರಿ ಅಧಿಕಾರಿಯೇ ಇಲ್ಲಿ ಆರೋಪಿಯಾಗಿದ್ದಾನೆ.
ಈ ಬಗ್ಗೆ ದೂರು ಕೇಳಿಬಂದ ತಕ್ಷಣ ತನಿಖೆ ನಡೆಸಿದ ಪೊಲೀಸರು ಒಟ್ಟು 17 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಆದ್ರೆ ಇಲ್ಲಿ ರೋಚಕ ಟ್ವಿಸ್ಟ್ ಏನಪ್ಪ ಅಂದ್ರೆ ಕಳ್ಳತನ ಪ್ರಕರಣದ ಬಗ್ಗೆ ದೂರು ನೀಡಿದ್ದ ಆಹಾರ ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಭೀಮರಾಯ ಮಸಾಳಿ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ.
ಇದನ್ನೂ ಓದಿ: ಯಾದಗಿರಿ| ಸಿಡಿಲು ಬಡಿದು ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲಿಯೇ ಸಾವು
ನವೆಂಬರ್ 22 ರಂದು ಯಾದಗಿರಿ ಜಿಲ್ಲೆಯ ಶಹಾಪುರದ ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘದ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ 2 ಕೋಟಿ 66 ಲಕ್ಷ ರೂ. ಮೌಲ್ಯದ ಬರೋಬ್ಬರಿ 6,077 ಕ್ವಿಂಟಾಲ್ ಪಡಿತರ ಅಕ್ಕಿ ಕಳ್ಳತನವಾಗಿತ್ತು. ಅಕ್ಕಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ಉಪ ನಿರ್ದೇಶಕ ಭೀಮರಾಯ ಮಸಾಳಿ, ಇನ್ನುಳಿದವರು ದೂರು ದಾಖಲಿಸಿದ್ದರು.
ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, 9 ತಿಂಗಳ ತನಿಖೆಯ ನಂತರ ಇದೀಗ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.
ಇದನ್ನೂ ನೋಡಿ: ವಚನಾನುಭವ -13| ಮನದೊಳಗಿನ ಕೊಳೆಯನ್ನು ತೊಳೆಯದೆ , ಮೈ ಮೇಲಿನ ಕೊಳೆಯನ್ನು ತೊಳೆದು, ಮಡಿಯುಟ್ಟುರೆ ಸಾಕೆ? | ಅಲ್ಲಮನ ವಚನ