ಮೈಸೂರು: ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕರು ಅಂದರೆ ದೇವರ ಸಮಾನಕ್ಕೆ ಹೋಲಿಸುತ್ತೀವಿ, ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ನಾಚಿಕೆ ಗೇಡಿನ ಕೃತಿಗಳನ್ನು ಮಾಡುತ್ತಿದ್ದಾರೆ. ನಿದ್ದೆ ಮಾತ್ರೆಗಳನ್ನು ನೀಡಿ ಶಿಕ್ಷಕನೊಬ್ಬ ಮೂವರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಇದೀಗ ಎಲ್ಲೆಡೆ ದೊಡ್ಡ ಸದ್ದು ಮಾಡುತ್ತಿದೆ. ಮೈಸೂರು
ಹೆಚ್.ಡಿ. ಕೋಟೆ ತಾಲೂಕಿನ ಅಗಸರಹುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆಬ್ರವರಿ 25ರಂದು ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಶಿಕ್ಷಕ ಗಿರೀಶ್ ಗಾಗಿ ತಲಾಶ್ ಮುಂದುವರಿದಿದೆ.
ಇದನ್ನೂ ಓದಿ: ವಸತಿ ಶಾಲೆ-ಕಾಲೇಜುಗಳ ಹೊರಗುತ್ತಿಗೆ ಸಿಬ್ಬಂದಿಗಳ ಬಗ್ಗೆ ಬಜೆಟ್ ಅಧಿವೇಶನದಲ್ಲಿ ಚರ್ಚೆ
ಶಿಕ್ಷಕ ಗಿರೀಶ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂವರು ವಿದ್ಯಾರ್ಥಿನಿಯರಿಗೆ ಜಂತುಹುಳು ಮಾತ್ರೆ ಎಂದು ಹೇಳಿ ನಿದ್ದೆ ಬರುವ ಮಾತ್ರೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.
ಆರೋಪಿ ಶಿಕ್ಷಕನ ವಿರುದ್ಧ ಫೋಕ್ಸೋ ಕೇಸ್ ದಾಖಲಾಗಿದ್ದು, ಆತನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ನಾಪತ್ತೆಯಾಗಿರುವ ಶಿಕ್ಷಕ ಗಿರೀಶ್ ಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸಿದ್ದಾರೆ.
ಇದನ್ನೂ ನೋಡಿ: ಶ್ರಮಜೀವಿಗಳ ಅಹೋರಾತ್ರಿ ಹೋರಾಟ | ಬಿಸಿಯೂಟ ನೌಕರರ ಮುಷ್ಕರ