ಬೆಂಗಳೂರು: ನಗರದ ಸರ್ಕಾರಿ ಶಾಲೆಯೊಂದರ ಶಿಕ್ಷಕ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ, ಶಿಕ್ಷಕನ ಈ ಕೃತ್ಯಕ್ಕೆ ವಿದ್ಯಾರ್ಥಿನಿಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಶಿಕ್ಷಕ ತನ್ನ ನೀಚ ಬುದ್ದಿ ಪ್ರದರ್ಶನ ಮಾಡಿ 6 ವಿದ್ಯಾರ್ಥಿನಿಯರಿಗೆ ಮಾನಸಿಕ ಒತ್ತಡ ಹೇರಿದ್ದಾನೆ. ಈ ದುಷ್ಟ ಶಿಕ್ಷಕ ಅಪ್ರಾಪ್ತ ಹೆಣ್ಣುಮಕ್ಕಳ ಜೊತೆ ಅನುಚಿತವಾಗಿ ವರ್ತಿಸಿದ್ದೂ ಅಲ್ಲದೆ, 5 ರೂಪಾಯಿ ಚಾಕಲೇಟ್ ತೋರಿಸಿ, ಕೃತ್ರ ಮುಚ್ಚಿ ಹಾಕಲು ಯತ್ನಸಿದ್ದಾನೆ ಎನ್ನಲಾಗುತ್ತಿದೆ.
ಅಮ್ರಾಪ್ತ ವಯಸ್ಸಿನ ಹುಡುಗಿಯರು ಶೌಚಾಲಯಕ್ಕೆ ಹೋಗುವಾಗ ಈ ದುರುಳ ಕದ್ದು ನೋಡುತ್ತಿದ್ದನಂತೆ, ಯಾರಿಗೂ ಹೇಳಬೇಡಿ ಚಾಕಲೇಟ್ ಕೊಡ್ತೀವಿ ಬನ್ನಿ ಅಂತ ಹೇಳಿ ಮನ ಬಂದ ಕಡೆ ಸ್ಪರ್ಶಿಸಿದ್ದಾನೆ ಎನ್ನುವ ಆರೋಪ ಶಿಕ್ಷಕನ ವಿರುದ್ಧ ಕೇಳಿಬಂದಿದೆ.
ಇದನ್ನೂ ಓದಿ: ಸುಳ್ಯ| ಸಂವಿಧಾನದ ಸಮರ್ಪಣಾ ದಿನದ ಸ್ಮರಣೆಗಾಗಿ ರಾಷ್ಟ್ರಧ್ವಜ ಗೌರವ ಯಾತ್ರೆ
ಶಿಕ್ಷಕನ ವಿರುದ್ಧ ಪೋಕ್ಸೂ ಕಾಯ್ದೆಯಡಿ ಎಫ್ಐಆರ್ ದಾಖಲು
ಶಿಕ್ಷಕನ ಈ ಹೀನ ಕೃತ್ಯಕ್ಕೆ ವಿದ್ಯಾರ್ಥಿನಿಯರು ಭಯದ ಮಡುವಿನಲ್ಲಿದ್ದಾರೆ. ಈ ಬಗ್ಗೆ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ, ಆಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಬಂದು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಶಿಕ್ಷಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್ಐಆರ್ ದಾಖಲು ಮಾಡಿಸಿದ್ದಾರೆ.
ಮತ್ತೊಂದೆಡೆ ಆತಂಕದಲ್ಲಿರುವ ಪೋಷಕರು, ಬುದ್ದಿ ಹೇಳಿ ಕೊಡುವ ಶಿಕ್ಷಕರೇ ಹಿಂಗಾದ್ರೆ, ಯಾರನ್ನ ನಂಬಬೇಕು? ಯಾರನ್ನ ನಂಬಿ ಮಕ್ಕಳನ್ನ ಸ್ಕೂಲ್ ಗೆ ಕಳಿಸೋದು ಅಂತ ಭಯಪಡುತ್ತಿದ್ದಾರೆ.
ಇದನ್ನೂ ನೋಡಿ: ಕೇಂದ್ರ ರಾಜ್ಯ ಸರ್ಕಾರಗಳ ರೈತ – ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಐತಿಹಾಸಿಕ ಹೋರಾಟಕ್ಕೆ ಸಿದ್ದತೆ