ಸಿಂಧನೂರು: ಇಂದು ಗುರುವಾರ ಬೆಳಗ್ಗೆ ಇಲ್ಲಿನ ಸರಕಾರಿ ಪದವಿ ಮಹಾವಿದ್ಯಾಲಯದ ಎಂಎಸ್ಸಿ ವಿದ್ಯಾರ್ಥಿನಿಯನ್ನು ಖಾಸಗಿ ಲೇಔಟ್ ಗೆ ಕರೆದೊಯ್ದು ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ನಡೆದಿದೆ. ಸಿಂಧನೂರು
ಲಿಂಗಸೂಗೂರು ನಿವಾಸಿ ಅಬ್ದುಲ್ ವಾಹೀದ್ ಅವರ ಪುತ್ರಿ ಶಿಫಾ (22) ಕೊಲೆಗೀಡಾದ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.
ಎಂದಿನಂತೆ ವಿದ್ಯಾರ್ಥಿನಿ ಶಿಫಾ ಗುರುವಾರ (ಜ.30) ಬೆಳಗ್ಗೆ ಲಿಂಗಸೂಗೂರಿನಿಂದ ಸಿಂಧನೂರಿನ ಕಾಲೇಜಿಗೆ ಬರುತ್ತಿದ್ದ ಸಂದರ್ಭ ಲಿಂಗಸೂಗೂರಿನಿಂದ ಬೈಕ್ ನಲ್ಲಿ ಆಗಮಿಸಿದ್ದ ಪರಿಚಿತ ಯುವಕ, ಮಾತನಾಡುವುದಿದೆ ಬಾ ಎಂದು ಖಾಸಗಿ ಲೇಔಟ್ ಗೆ ಕರೆದುಕೊಂಡು ಹೋಗಿದ್ದಾನೆ. ದಿಢೀರ್ ಚಾಕು ತೆಗೆದು ಕತ್ತು ಕೊಯ್ದಿದ್ದಾನೆ.
ಇದನ್ನೂ ಓದಿ: ಮೈಕ್ರೊ ಫೈನಾನ್ಸ್ ಕಿರುಕುಳ: ಸ್ಮಶಾನದಲ್ಲಿ 3 ದಿನ ಕಾಲ ಕಳೆದ ಬೇಸತ್ತ ಮಹಿಳೆ
ಘಟನೆಗೆ ಸಂಬಂಧಿಸಿ ಯುವಕನೊಬ್ಬನನ್ನು ಲಿಂಗಸೂಗೂರಿನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಬಿ.ಎಸ್. ತಳವಾರ, ಸಿಪಿಐ ವೀರಾರೆಡ್ಟಿ, ಪಿಎಸ್ ಐಗಳಾದ ಯರಿಯಪ್ಪ, ಸುಜಾತ, ಬಸವರಾಜ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ.
ಇದನ್ನೂ ನೋಡಿ: ಹಿಂದೂ ರಾಷ್ಟ್ರಕ್ಕೆ ಸಂವಿಧಾನ | ಆರ್‌ಎಸ್‌ಎಸ್‌ನ ಅಪಾಯಕಾರಿ ನಡೆ Janashakthi Media