ಬೆಂಗಳೂರು: ವಿಜಯಪುರ ನಗರ ಪಾಲಿಕೆಗೆ ಹೊಸ ಆಯುಕ್ತರ ವರ್ಗಾವಣೆ ವಿಚಾರವಾಗಿ ನಡೆದ ಚರ್ಚೆ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿತು.
ವಿಧಾನಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಯತ್ನಾಳ ಅವರು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಹುದ್ದೆಗೆ ಅರ್ಹತೆ ಇಲ್ಲದವರನ್ನು ನೇಮಿಸಲಾಗಿದೆ. ವರ್ಗಾವಣೆಯಲ್ಲಿ ವ್ಯಾಪಾರ ನಡೆದಿದೆ ಎಂದು ಹೇಳಿದ್ದು ಗದ್ದಲಕ್ಕೆ ಕಾರಣವಾಯಿತು. ಡಿ.ಕೆ.ಶಿವಕುಮಾರ್ ಹಾಗೂ ಬೈರತಿ ಸುರೇಶ್ ಅವರ ಮಾತುಗಳಿಂದ ಕೆರಳಿ, ಸರ್ಕಾರದ ವಿರುದ್ಧ ಬಿಜೆಪಿ ಸದಸ್ಯರು ಧರಣಿಗಿಳಿದು ಘೋಷಣೆ ಕೂಗಿದರು.ಎರಡು ಬಾರಿ ಕಲಾಪ ಮುಂದೂಡಿಕೆಯಾಯಿತು.
ವಿಜಯಪುರ ನಗರ ಪಾಲಿಕೆಗೆ ಅರ್ಹತೆ ಇಲ್ಲದ ವ್ಯಕ್ತಿಯನ್ನು ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ ಇದು ವರ್ಗಾವಣೆಯ ದಂಧೆ ಎಂದು ಯತ್ನಾಳ್ ಸರ್ಕಾರದ ಮೇಲೆ ಟೀಕಿಸಿದರು.
ಈ ಮಾತು ಕೇಳಿ ಸಿದ್ದರಾಮಯ್ಯ ನವರು ವ್ಯಾಪಾರ ಮಾಡ್ತಿದ್ದೀವಿ ಎನ್ನುತ್ತೀರಿ ಎನ್ ಮಾತಾಡ್ತಾ ಇದ್ದೀರಿ ಜವಾಬ್ದಾರಿಯಿಂದ ಮಾತಾಡಿ. ನೀವು ಮಾತ್ರ ಹರಿಶ್ಚಂದ್ರರಾ,ಅವರು ಹರಿಶ್ಚಂದ್ರರಲ್ವಾ ಸುಮ್ಮನೇ ಏನೇನೋ ಮಾತಾಡಬೇಡಿ ಎಂದು ತರಾಟೆಗೆ ತೆಗೆದುಕೊಂಡರು.
ಇನ್ನೂ ಈ ವಿಚಾರದಲ್ಲಿ ಬಸವರಾಜ್ ಬೊಮ್ಮಾಯಿ ಯತ್ನಾಳ್ ಪರ ‘ಯತ್ನಾಳ್ ತಮ್ಮ ಮಾತಿಗೆ ಉತ್ತರ ಕೊಡೋಕ್ಕೆ ತಯಾರಿದ್ದಾರೆ, ನಮ್ಮ ಸದಸ್ಯರು ಕೇಳುತ್ತಿರುವ ಪ್ರಶ್ನೆಗೆ ಉತ್ತರ ಕೊಡಿ ಅದರ ಬದಲು ಅವರನ್ನು ಹೆದರಿಸಬೇಡಿ ಎಂದು ಬೊಮ್ಮಾಯಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಹಾಗೂ ಭೈರತಿ ಸುರೇಶ್ ವಿರುದ್ಧ ಕಿಡಿಕಾದರು .
ನೀವು ಹೇಳಿದ ಆಫೀಸರ್ ಹಾಕಲ್ಲ ಏನು ಮಾಡ್ತೀರಾ ಮಾಡ್ಕೊಳಿ ಎಂದು ಬೈರತಿ ಹೇಳಿದಾಗ ಬಿಜೆಪಿ ಸದಸ್ಯರು ಈ ಮಾತುಗಳಿಗೆ ಕ್ಷಮೆ ಕೇಳುವಂತೆ ಧರಣಿ ನಡೆಸಿದರು.
ಇದನ್ನೂ ಓದಿ:ನೀರಿನ ಯೋಜನೆಗಳ ವಿದ್ಯುತ್ ಬಿಲ್ ಬಾಕಿ ಇತ್ಯರ್ಥ ಪಡಿಸಲು ಶಾಶ್ವತ ಪರಿಹಾರ – ಡಿಕೆ ಶಿವಕುಮಾರ
ಬಿಜೆಪಿ ಸದಸ್ಯರಿಗೆ ಡಿಕೆ ಶಿವಕುಮಾರ್, ‘ನೀವೇ ಹೇಳಿದ್ದೀರಾ ಮುಖ್ಯಮಂತ್ರಿ ಸ್ಥಾನಕ್ಕೆ ಎಷ್ಟು, ಡಿಸಿಎಂ ಸ್ಥಾನ ಕ್ಕೆ ಎಷ್ಟು ಅಂತ. ಕೂತ್ಕೊಳ್ಳಯ್ಯ ಸ್ವಲ್ಪ, ಏನೇನು ಮಾತಾಡಿದಿರಾ ಅನ್ನೋ ಹಿಸ್ಟರಿ ನಮ್ಮ ಹತ್ರ ಇದೆ’ ಎಂದರು. ನೀವು ಏನೂ ಹೇಳಿದ್ರು ನಾವು ಒಪ್ಪಲ್ಲ. ನಮ್ಮ ಪಕ್ಷದಲ್ಲಿ ಹೀಗೆ ಮಾತಾಡಿದ್ರೆ ನಾನು ಪಾರ್ಟಿಯಿಂದ ಉಚ್ಛಾಟನೆ ಮಾಡ್ತಾ ಇದ್ದೆ. ನಿಮ್ಮ ಪಕ್ಷದ ತರ ಅಲ್ಲ ನಾವು ಎಂದು ಶಿವಕುಮಾರ್ ತಿರುಗೇಟು ಕೊಟ್ಟರು.
ಡಿ.ಕೆ ಶಿವಕುಮಾರ್ ಮಾತಿನಿಂದ ಕೆರಳಿದ ಬಿಜೆಪಿ ಸದಸ್ಯರು, ಸರ್ಕಾರದ ನಿಲುವು ಖಂಡಿಸಿ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಉತ್ತರ ಇಂದೇ ಕೊಡಬೇಕಾಗಿಲ್ಲ, ನಾಳೆನೂ ಕೊಡಬಹುದು ಎಂದು ಹೇಳಿದರು. ಬಿಜೆಪಿ ಸದಸ್ಯರು, ‘ಸದನದಲ್ಲಿ ಹೀಗೆ ವರ್ತಿಸಿದ್ದು ಸರಿಯಲ್ಲ ಕೂಡಲೇ ಭೈರತಿ ಸುರೇಶ್ ಹಾಗೂ ಡಿಸಿಎಂ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು. ಸದನದಲ್ಲಿ ಗದ್ದಲ ಹೆಚ್ಚಾಗಿದ್ದರಿಂದ ಸ್ಪೀಕರ್ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು.