ಜನಪರ ಉತ್ಸವದ ಹೆಸರಲ್ಲಿ ದಲಿತರ ಹಣ ಬೇಕಾಬಿಟ್ಟಿ ಖರ್ಚು ಖಂಡಿಸಿ ವೇದಿಕೆ ಮುಂಭಾಗ ಮೌನ ಪ್ರತಿಭಟನೆ

ಕೋಲಾರ: ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆಯಡಿ (ಎಸ್‌ಸಿಎಸ್ಪಿ) ಹಣವನ್ನು ರಾಜ್ಯ ಮಟ್ಟದ ಜನಪರ ಉತ್ಸವದ ಹೆಸರಿನಲ್ಲಿ ಬೇಕಾಬಿಟ್ಟಿ ಖರ್ಚು ಮಾಡಿದ್ದಾರೆ ಎಂದು ಆರೋಪಿ ದಲಿತ ಯುವ ಜಾಗೃತಿ ಸಮಿತಿ ಪದಾಧಿಕಾರಿಗಳು ಮಂಗಳವಾರ ನಗರದಲ್ಲಿ ನಡೆಯುತ್ತಿರುವ ಜನಪರ ಉತ್ಸವದ ವಿಚಾರಗೋಷ್ಠಿಯಲ್ಲಿ ಪೋಸ್ಟರ್ ಪ್ರದರ್ಶನದ ಮೂಲಕ ಮೌನ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ದಲಿತ ಯುವ ವೇದಿಕೆ ಮುಖಂಡ ಶೆಟ್ಟಿಗಾನಹಳ್ಳಿ ವಿ.ಅಂಬರೀಷ್ ಮಾತನಾಡಿ ದಲಿತರ ಅಭಿವೃದ್ಧಿಗೆ ಮೀಸಲಾದ ಸುಮಾರು ಒಂದು ಕೋಟಿ ಹಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾಡಳಿತವು ಮನಸ್ಸೋ ಇಚ್ಛೆ ಖರ್ಚು ಮಾಡಿದ್ದಾರೆ. ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಕನಿಷ್ಠ ಅಂಬೇಡ್ಕರ್ ಅವರ ಪೋಟೋ ಹಾಕಿಲ್ಲ ಸಂಘಟನೆಗಳು ಪ್ರಶ್ನೆ ಮಾಡಿದ ನಂತರ ಮರು ಮುದ್ರಣ ಮಾಡಲಾಗಿದೆ ಜಿಲ್ಲೆಯ ಹಿರಿಯ ದಲಿತ ಸಂಘಟನೆಗಳ ನಾಯಕರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ದಲಿತ ಕಲಾವಿದರನ್ನು ಗುರುತಿಸಿ ಸೌಲಭ್ಯ ಒದಗಿಸಿಲ್ಲ ಆದರೆ ದಲಿತರ ಹಣ ಬೇಕಾಬಿಟ್ಟಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು.

ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸರಿಯಾಗಿ ಪ್ರಚಾರ ಮಾಡಿಲ್ಲ ರಾಜ್ಯ ಮಟ್ಟದ ಕಾರ್ಯಕ್ರಮವಾದರೂ ನೂರು ಜನ ಭಾಗವಹಿಸಿಲ್ಲ ಉದ್ವಾಟನೆಗೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ ಶಿವಕುಮಾರ್ ಬರಲಿದ್ದಾರೆ ಅಂತ ಹೇಳಿದ್ದರು ಅವರು ಯಾರು ಬಂದಿಲ್ಲ ಜೊತೆಗೆ ಜಿಲ್ಲೆಯಲ್ಲಿ ಮೀಸಲ ಕ್ಷೇತ್ರಗಳಲ್ಲಿ ಗೆದ್ದಿರುವ ಮೂವರು ಶಾಸಕರು ಇದ್ದು, ಅವರಾರು ಈ ಕಾರ್ಯಕ್ರಮಕ್ಕೆ ಬಂದಿಲ್ಲ ಕಾರ್ಯಕ್ರಮದ ಹೆಸರಲ್ಲಿ ಎರಡು ದಿನ ಕೋಲಾರ ನಗರದಲ್ಲಿ ದೀಪಾಲಂಕಾರ ಮಾಡಿದ್ದಾರೆ.

ಇದನ್ನೂ ಓದಿ: 299ಕ್ಕೂ ಅಧಿಕ ರೋಗಿಗಳ ಮೇಲೆ ಅತ್ಯಾಚಾರ; ಮಾಜಿ ಸರ್ಜನ್ ಬಂಧನ

ಆದರೆ ಎಷ್ಟೋ ದಲಿತ ಕಾಲೋನಿಗಳಲ್ಲಿ ವಿದ್ಯುತ್‌ ದ್ವೀಪಗಳು ಇಲ್ಲ, ರಸ್ತೆ ಚರಂಡಿಯಂತಹ ಮೂಲಭೂತ ಸೌಕರ್ಯಗಳಿಲ್ಲ, ದಲಿತರು ಸತ್ತಾಗ ಗೌರವಯುತವಾಗಿ ಅಂತ್ಯಕ್ರಿಯೆ ನಡೆಸಲು ಶ್ಮಶಾನ ಭೂಮಿಯಿಲ್ಲ, ಅಲ್ಲದೆ ಎಷ್ಟೋ ದಲಿತ ಕಲಾವಿದರಿಗೆ ನಿಲ್ಲಲು ಒಂದು ನೆಲೆಯಿಲ್ಲ ಈಗಿರುವಾಗ ಯಾವ ಪುರುಷಾರ್ಥಕ್ಕೆಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಪ್ರಶ್ನಿಸಿದ ಅವರು, ಇದು ಜನಪರ ಉತ್ಸವ ಅಲ್ಲ, ಕೆಲವರ ಲೂಟಿ ಉತ್ಸವ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಮುಖಂಡ ದೊಡ್ನಹಳ್ಳಿ ಸುಬ್ರಮಣಿ ಮಾತನಾಡಿ ಒಂದು ಕಡೆ ದಲಿತರ ಹಣವನ್ನು ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಬಳಸಿದ್ದಾರೆ ಇನ್ನೊಂದು ಕಡೆಗೆ ದಲಿತರ ಹಣವನ್ನು ಜನಪರ ಉತ್ಸವ ಹೆಸರಲ್ಲಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಅಧಿಕಾರಿಗಳು ಹೇಳಿದ ರೀತಿಯಲ್ಲಿ ಕನಿಷ್ಠ ಹತ್ತು ಸಾವಿರ ಜನ ಬರುವ ನಿರೀಕ್ಷೆ ಅಂತ ಹೇಳಿ ಇವತ್ತು 100 ಜನ ಬಂದಿದ್ದಾರೆ ಕಾರ್ಯಕ್ರಮದ ಕುರಿತು ಸರಿಯಾಗಿ ಜನಕ್ಕೆ ಮಾಹಿತಿ ಪ್ರಚಾರ ಮಾಡದ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು

ಈ ಸಂದರ್ಭದಲ್ಲಿ ಮುಖಂಡರಾದ ನಂಬಿಗಾನಹಳ್ಳಿ ನಾರಾಯಣಸ್ವಾಮಿ, ಬೆಟ್ಟಹೊಸಪುರ ರವಿ, ಹರೀಶ್, ಚಲಪತಿ, ಪವನ್, ನಾಗರಾಜಪ್ಪ, ವಿ.ಸುಬ್ರಮಣಿ ಮುಂತಾದವರು ಇದ್ದರು ಹತ್ತು ಸಾವಿರ ಜನ ಬರುವ ನಿರೀಕ್ಷೆ ಅಂತ ಹೇಳಿ ಇವತ್ತು 100 ಜನ ಬಂದಿದ್ದಾರೆ ಸರಿಯಾಗಿ ಜನಕ್ಕೆ ಕಾರ್ಯಕ್ರಮದ ಕುರಿತು ಮಾಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ನೋಡಿ: ಕೋಲಾರ :- ರಾಜ್ಯಮಟ್ಟದ ಜಾನಪದ ಉತ್ಸವಕ್ಕೆSCSP/TSP ಹಣ ದುರ್ಬಳಕೆ – ಕಾರ್ಯಕ್ರಮ ಬಹಿಷ್ಕರಿಸಿ ಹೊರ ನಡೆದ ಹೋರಾಟಗಾರರು

 

Donate Janashakthi Media

Leave a Reply

Your email address will not be published. Required fields are marked *