ಮೈಕ್ರೋ ಫೈನಾನ್ಸ್‌ ಹಾವಳಿಗೆ ನೂತನ ಮಸೂದೆಯ ಕಡಿವಾಣ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ಸರ್ಕಾರವು ಮೈಕ್ರೋ ಫೈನಾನ್ಸ್‌ ಗಳ ಹಾವಳಿಯನ್ನು ತಡೆಗಟ್ಟಲು ನೂತನ ಮಸೂದೆಯನ್ನು ಜಾರಿಗೊಳಿಸಲು ಮುಂದಾಗಿದೆ. ರಾಜ್ಯದಲ್ಲಿ ಮೈಕ್ರೋಫೈನಾನ್ಸ್‌ ಸಂಸ್ಥೆಗಳ ಕಿರುಕುಳ ದಿನೇದಿನೇ ಹೆಚ್ಚುತ್ತಿದ್ದು, ಅವುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಚಿಂತನೆ ನಡೆಸಲಾಗಿದೆ. ಹಾವಳಿ

ಸಿಎಂ ಸಿದ್ದರಾಮಯ್ಯ ಸರ್ಕಾರ ಕರ್ನಾಟಕ ಮೈಕ್ರೋ ಫೈನಾನ್ಸ್ ಇನ್ಟ್ಸಿಟ್ಯೂಷನ್ ಆಫ್ ರೆಗುಲೇಷನ್ ಆಫ್‌ ಮನಿ ಲೆಂಡಿಂಗ್ ಬಿಲ್ ಜಾರಿಗೊಳಿಸಲು ಮುಂದಾಗಿದೆ.

ಇದನ್ನೂ ಓದಿ: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬರ್ಬರ ಹತ್ಯೆ

1. ಮೈಕ್ರೋ ಫೈನಾನ್ಸ್ ‌ಕಿರುಕುಳ ಕಾಗ್ನಿಜಬಲ್ ಅಫೆನ್ಸ್ ಅಂತ ಪರಿಗಣಿಸುವುದು

2. ಈ ಹೊಸ ಕಾನೂನಿನ ಅಡಿ ಕೇಸ್ ದಾಖಲಿಸಿದರೆ ಅದು ಜಾಮೀನು ರಹಿತ

3. ಈ ಹೊಸ ಕಾಯ್ದೆಯ ಪ್ರಕಾರ ಮೂರು ವರ್ಷ ಕಠಿಣ ಶಿಕ್ಷೆ ವಿಧಿಸುವುದು

ಇವುಗಳು ಈ ಕಾಯಿದೆ ಪ್ರಮುಖ ಅಂಶಗಳಾಗಿವೆ. ಕಾಯ್ದೆ ಸಿದ್ದಪಡಿಸಿರುವ ಕಾನೂನು ಇಲಾಖೆ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ‌ಸಭೆ ಬಳಿಕ ಕಾಯ್ದೆ ಜಾರಿಗೆ ತರಲು ತೀರ್ಮಾನಿಸಿದೆ.

ಸುಗ್ರೀವಾಜ್ಞೆ ಮೂಲಕ ನೂತನ ಕಾಯಿದೆ ಜಾರಿಗೊಳಿಸಲು ಸಿಎಂ ಸಿದ್ದರಾಮಯ್ಯ ಇಂಗಿತ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

ಇದನ್ನೂ ನೋಡಿ: ಸಂಸ್ಕೃತಿ ಹೆಸರಲ್ಲಿ ಸುಟ್ಟಕಾಡ್ಗಿಚ್ಚಿನ ಜಾಗದಲ್ಲಿ ಸೌಹಾರ್ದ ಗಿಡಗಳನ್ನು ನೆಡಬೇಕು – ರಹಮತ್ ತರೀಕೆರೆ

Donate Janashakthi Media

Leave a Reply

Your email address will not be published. Required fields are marked *