ಜನಾಂಗೀಯ ಕೊಲೆಗಳ ರಕ್ತದ ಕಲೆಗಳನ್ನು ಹಚ್ಚಿಕೊಂಡ ಮೈಕ್ರೋಸಾಫ್ಟ್ ಎಂಬ ಬಹುರಾಷ್ಟ್ರೀಯ ಕಂಪನಿ

ನವದೆಹಲಿ: ಮೈಕ್ರೋಸಾಫ್ಟ್ ಎಂಬ ಅಮೆರಿಕದ ಬಹುದೊಡ್ಡ ಕಂಪ್ಯೂಟರ್ ಕಂಪನಿ ತನ್ನ ಎರಡು ಉದ್ಯೋಗಿಗಳನ್ನು ಪ್ಯಾಲೆಸ್ಟೀನ್ ವಿಷಯದಲ್ಲಿ ಪ್ರತಿಭಟನೆ ತೋರಿ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದರೆಂಬ ಕಾರಣಕ್ಕೆ ಮನೆಗೆ ಕಳುಹಿಸಿದೆ. ಇಬ್ತಿಹಲ್ ಅಬೌಸ್ಸಡ್ ಮತ್ತು ವನಿಯ ಅಗ್ರವಾಲ್ ಎಂಬ ಎರಡು ಮಹಿಳಾ ಸಾಫ್ಟ್ವೇರ್ ಎಂಜಿನಿಯರುಗಳು ಹೀಗೆ ಕೆಲಸ ಕಳೆದುಕೊಂಡ ಧೀರ ಮಹಿಳೆಯರು. ಕೊಲೆ

ಮೈಕ್ರೋಸಾಫ್ಟ್ ತನ್ನ 50 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿತ್ತು. ಕೃತಕ ಬುದ್ದಿಮತ್ತೆ ವಿಭಾಗದ ಮುಖ್ಯಸ್ಥ ಸುಲೆಯಮಾನ್  ಇಬ್ತಿಹಲ್ ಅಬೌಸ್ಸಡ್ ಅವರ ಪ್ರತಿಬಟನೆ ಎದುರಿಸಿದರೆ, ಸತ್ಯ ನಡೆಲ್ಲಾ, ಬಿಲ್ ಗೆಟಸ್ ಮತ್ತು ಸ್ಟೀವ್ ಬಾಲ್ಲ್ಮರ್ ವನಿಯ ಅವರ ಪ್ರತಿಭಟನೆ ಎದುರಿಸಬೇಕಾಯಿತು. ಕೊಲೆ

ಇದನ್ನೂ ಓದಿ: ಕೆಪಿಎಸ್‌ಸಿ ಸದಸ್ಯರ ನೇಮಕಾತಿಗೆ ಶೋಧನಾ ಸಮಿತಿ ಇಲ್ಲ ಎಂಬುದು ಅಚ್ಚರಿಯ ಸಂಗತಿ: ಹೈಕೋರ್ಟ್‌

ಕಾರ್ಯಕ್ರಮದ ಆಯೋಜಕರು ಕೂಡಲೇ ಅವರಿಬ್ಬರನ್ನೂ ಹೊರಹೋಗುವಂತೆ ಹೇಳಿದರು. ಇಬ್ತಿಹಲ್ ಅಬೌಸ್ಸಡ್ ಅವರನ್ನು ಅವರ ಅಶಿಸ್ತಿನ ವರ್ತನೆಗೆ ಕೆಲಸದಿಂದ ವಜಾ ಮಾಡಲಾಗಿದೆಯೆಂದು ತಿಳಿಸಲಾಯಿತು.

ವನಿಯ ಅಗ್ರವಾಲ್ ಆಗಲೇ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಅದು ಏಪ್ರಿಲ್ 11 ಕ್ಕೆ ಜ್ಯಾರಿಗೆ ಬರಬೇಕಾಗಿತ್ತು. ಎರಡು ದಿನ ಮೊದಲೇ ಅವರನ್ನು ಕೆಲಸದಿಂದ ಬಿಡುಗಡೆ (ಅಂದರೆ ವಜಾ) ಮಾಡಲಾಗಿದೆಯೆಂದು ತಿಳಿಸಲಾಯಿತು.

ಈ ಇಬ್ಬರೂ ಮಹಿಳೆಯರು ಮೈಕ್ರೋಸಾಫ್ಟ್ ತನ್ನ ಕೃತಕ ಬುದ್ದಿಮತ್ತೆ ಉಪಕರಣಗಳ ಮೂಲಕ ಗಾಜಾದಲ್ಲಿನ ಜನಾಂಗೀಯ ಹತ್ಯೆಗೆ ಅನುವು ಮಾಡಿಕೊಡುತ್ತಾ ಅಂತಹ ಹತ್ಯೆಯ ಮೂಲಕ ಲಾಭ ಮಾಡಿಕೊಳ್ಳುತ್ತಿದೆಯೆಂದು, ಇದು ನಾಚಿಕೆಗೇಡಿನ ವಿಷಯ ಎಂದು  ಘೋಷಣೆ ಕೂಗಿದರು.

ಮೈಕ್ರೋಸಾಫ್ಟ್ ಎಲ್ಲೂ ತಾನು ಹತ್ಯೆಗೆ ಬೆಂಬಲ ನೀಡುವುದಿಲ್ಲ ಎಂದಾಗಲಿ, ತನ್ನ ವ್ಯಾಪಾರ ಇಂತಹ ಹೀನ ಉದ್ದಿಶ್ಯಗಳಿಂದ ಮುಕ್ತವಾಗಿದೆಯೆಂದಾಗಲಿ ಹೇಳಿಕೆ ನೀಡಿದಂತೆ ಕಾಣುವುದಿಲ್ಲ. ಇದರ ಅರ್ಥವೇನು? ಜನಾಂಗೀಯ ಹತ್ಯೆಗೆ ಎಲ್ಲ ತರಹದ ನೆರವು ನೀಡುವುದೇ ತನ್ನ ವ್ಯಾಪಾರ ಎಂದು ಘಂಟಾಘೋಷವಾಗಿ ಅದು ಹೇಳಿಕೊಂಡಂತಾಯಿತು. ಅಲ್ಲವೇ?

ಎಲ್ಲೂ ಮುಖ್ಯ ವಾಹಿನಿಯ ಮಾಧ್ಯಮಗಳು ಈ ವಿಷಯವನ್ನು ಪ್ರಮುಖ ಸುದ್ದಿ ,ಮಾಡೇ ಇಲ್ಲ ಎಂಬುದು ಇನ್ನೊಂದು ವಿಷಾದದ ಸಂಗತಿ.

ಇದನ್ನೂ ನೋಡಿ: ವಿದ್ಯಾರ್ಥಿಗಳು ತಿನ್ನುವ ಅನ್ನಕ್ಕೆ ವಾರ್ಡನ್‌ ಕನ್ನ Janashakthi Media

Donate Janashakthi Media

Leave a Reply

Your email address will not be published. Required fields are marked *