ಹಾಥ್ರಸ್ ಕಾಂಡ: ಮನುವಾದಿ ಅನ್ಯಾಯಕ್ಕೊಂದು ರೂಪಕ

ಬೃಂದಾ ಕಾರಟ್

ಅನು: ಸಿ.ಸಿದ್ದಯ್ಯ

ಹಾಥ್ರಸ್ ದಲಿತರು ಮತ್ತು ಮಹಿಳೆಯರ ವಿರುದ್ಧ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ಅನ್ಯಾಯ, ಕ್ರೌರ್ಯ ಮತ್ತು ಮನುಸ್ಮೃತಿಯ ಜಾರಿಗೆ ಒಂದು ರೂಪಕವಾಗಿದೆ. ಇದರಲ್ಲಿ ನಾಲ್ಕು ಹಂತಗಳಿವೆ ಎಂದು ಇತ್ತೀಚೆಗೆ ಸಪ್ಟಂಬರ್‍ 2020ರ ಹಾಥ್ರಸ್‍ ಅತ್ಯಾಚಾರ ಮತ್ತು ಕೊಲೆ ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಿದಾಗ ತಿಳಿಯಿತು. ಹಾಥ್ರಸ್

ಕೈದಿಗಳು ನಾವೇ. ನನ್ನ ತಂಗಿಯನ್ನು ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿ, ಭಯಾನಕ ದೌರ್ಜನ್ಯ ನಡೆಸಿದವರು ಮುಕ್ತವಾಗಿ ಅಡ್ಡಾಡಿ ಕೊಂಡಿದ್ದಾರೆಅವರು ಊರಿನಲ್ಲಿ ವಿಜೇತರಂತೆ ತಿರುಗಾಡುತ್ತಿದ್ದಾರೆ. ಆದರೆ ನಮಗೆ ನಮ್ಮ ಮನೆಯಿಂದ ಹೊರಬರಲು   ಸಾಧ್ಯವಾಗುತ್ತಿಲ್ಲಇದು ಹಾಥ್ರಸ್‍ನ ಸಂತ್ರಸ್ತೆಯ 33 ವರ್ಷದ ಸಹೋದರ ಸತೀಂದರ್ ಕುಮಾರ್ ಮಾತು. ಜನವರಿ 17ರಂದು ಅವರ ಯೋಗಕ್ಷೇಮ ವಿಚಾರಿಸಲು ಅವರ ಗ್ರಾಮ ಬುಲ್ ಗರ್ಹಿಗೆ ನಾನು ಮತ್ತು ಸುಭಾಷಿಣಿ ಅಲಿ ಹೋಗಿದ್ದೆವು.    ನಾವಲ್ಲಿ ಕಂಡದ್ದು ನ್ಯಾಯದ ದಮನ ಮತ್ತು ಅಲಿಖಿತ ಜಾತಿ ಸಂಹಿತೆಯ ಪಾಲನೆ. ಇದರಿಂದ ಉತ್ತರಪ್ರದೇಶದಲ್ಲಿ ದಲಿತನೊಬ್ಬ ನ್ಯಾಯಕ್ಕಾಗಿ ಹೋರಾಡುವುದು    ತುಂಬಾ ಕಷ್ಟ ಎಂಬ ಸತ್ಯ ನಮಗೆ ಕಣ್ಣುಕುಕ್ಕುವ ರೀತಿಯಲ್ಲಿ ಮನದಟ್ಟಾಯಿತು. ಸಂತ್ರಸ್ತೆಯ ಕುಟುಂಬಕ್ಕೆ ಆಗಿರುವ ಆಘಾತದ ವಿವರಗಳನ್ನು ಪಡೆಯುವಾಗ ಈ ಮನುವಾದಿ ಜಾತಿ ನಿಯಮಗಳ ಅನುಷ್ಠಾನದಲ್ಲಿ  ನಾಲ್ಕು ಹಂತಗಳಿವೆ ಎಂದು ತಿಳಿಯಿತು. ಹಾಥ್ರಸ್

ಮೊದಲ ಹಂತ – ಅಪರಾಧ

ಮೊದಲನೆಯದು, ಸೆಪ್ಟೆಂಬರ್ 2020 ರ ಅಪರಾಧ – ಬಡ ದಲಿತ ಕುಟುಂಬದ 19 ವರ್ಷದ ಹುಡುಗಿಯ ಮೇಲೆ ನಾಲ್ಕು  ಮೇಲ್ಜಾತಿ ಪುರುಷರು ಸಾಮೂಹಿಕ ಅತ್ಯಾಚಾರ ಮಾಡಿ ನಂತರ ಹತ್ಯೆ ಮಾಡಿದರು. ಆಕೆ  ಬದುಕಿದ್ದ್ದೇ ಜಾತಿ, ವರ್ಗಮತ್ತು  ಪಿತೃಪ್ರಧಾನ್ಯತೆಯ ಶೋಷಣೆಗಳು ಒಟ್ಟುಗೂಡಿರುವ  ಭಾರತದ್ದೇ  ಆದ ವಿಶಿಷ್ಟ ಸನ್ನಿವೇಶದಲ್ಲಿ. ಅದೊಂದು ಜಾತಿ ಅಪರಾಧವಾಗಿತ್ತು; ಒಬ್ಬ ಮಹಿಳೆಯ ಮೇಲೆ ಎಸಗಿದ ಅಪರಾಧವಾಗಿತ್ತು;  ಅದು ಪ್ರಬಲ ಗ್ರಾಮೀಣ ಉಚ್ಛವರ್ಗದವರು ಒಬ್ಬ ಬಡಮಹಿಳೆಯ ಮೇಲೆ ನಡೆಸಿದ್ದ ಒಂದು ವರ್ಗ ಅಪರಾಧವೂ ಆಗಿತ್ತು; ಮತ್ತು ‘ಹಕ್ಕಿನಿಂದ’ ನಡೆಸಿದ ಅಪರಾಧವಾದ್ದರಿಂದ   ಅದನ್ನು ಅಪರಾಧವೆಂದೇ ಪರಿಗಣಿಸಲಾಗದು! ಹಾಥ್ರಸ್

 

ಎರಡನೇ ಹಂತ – ಸರ್ಕಾರದ ಪಕ್ಷಪಾತ

ಎರಡನೇ ಹಂತವೆಂದರೆ   ಆಡಳಿತ ಇಲಾಖೆ ಮತ್ತು ಉತ್ತರಪ್ರದೇಶ ಸರ್ಕಾರದಿಂದ ಅದನ್ನು ಮುಚ್ಚಿ ಹಾಕುವ ಜಾತಿ-ಪ್ರೇರಿತ ಕ್ರಮ.  ಸೆಪ್ಟೆಂಬರ್ 2020 ರಲ್ಲಿ ಅಪರಾಧ ನಡೆದಿದೆ. ಆಡಳಿತ ಮತ್ತು ಉತ್ತರಪ್ರದೇಶ ಸರಕಾರ ತನಿಖೆಯನ್ನು ಬುಡಮೇಲು ಮಾಡಲು ಸಾಧ್ಯವಾದಷ್ಟು  ಪ್ರಯತ್ನಿಸಿತು. ಆರಂಭದಿಂದಲೇ ಅವರು ಅತ್ಯಾಚಾರ ನಿಜವಾಗಿ ನಡೆದಿದೇ ಇಲ್ಲ , ಏನೇ ನಡೆದಿದ್ದರೂ ಒಪ್ಪಿಗೆಯಿಂದಲೇ ನಡೆದಿದೆ ಎಂಬ ಸುಳ್ಳನ್ನು ಪಸರಿಸಲಾಯಿತು. ಐದು ದಿನಗಳಾದರೂ ಎಫ್‍ಐಆರ್  ದಾಖಲಿಸಲಿಲ್ಲ. ವೈದ್ಯಕೀಯ ಪರೀಕ್ಷೆಯನ್ನು ವಿಳಂಬಗೊಳಿಸಲಾಯಿತು, ಮತ್ತು ಮಹತ್ವಪೂರ್ಣ ಸಾಕ್ಷ್ಯ ಇಲ್ಲದಂತೆ ಮಾಡಲಾಯಿತು. ಅಗತ್ಯ ತುರ್ತು ಚಿಕಿತ್ಸೆ ನೀಡದ ಕಾರಣ ಆ ಬಾಲಕಿಯ ಆರೋಗ್ಯ  ಹದಗೆಟ್ಟಿತು. ನಂತರ ಆಕೆಯನ್ನು ಬಹಳ ತಡವಾಗಿ ದಿಲ್ಲಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆಕೆಯ ಸಾವಿನ ನಂತರ, ಪೊಲೀಸರು ಮೃತದೇಹವನ್ನು ಬಲವಂತವಾಗಿ ತೆಗೆದುಕೊಂಡು, ಕುಟುಂಬ ಸದಸ್ಯರ ಅನುಮತಿಯಿಲ್ಲದೆ ರಾತ್ರೋ ರಾತ್ರಿ ಅಂತ್ಯಸಂಸ್ಕಾರ ಮಾಡಿದರು. ಶವದಹನದ ಮೂಲಕ  ಎರಡನೇ ಮರಣೋತ್ತರ ಪರೀಕ್ಷೆಗೆ ಆಗ್ರಹ ಬರದಂತೆ  ತಡೆಯಲಾಯಿತು. ದೇಶಾದ್ಯಂತ ಪ್ರತಿಭಟನೆ ಮತ್ತು ಆಕ್ರೋಶದ ನಂತರ ಪ್ರಕರಣವನ್ನು ಸಿಬಿಐಗೆ  ವಹಿಸಲಾಯಿತು. ಹಾಥ್ರಸ್

ಮೂರನೇ ಹಂತ – ಕಾನೂನು ಹೋರಾಟ

ಮನುವಾದ ಜಾತಿ ವ್ಯವಸ್ಥೆಯು ಮೂರನೇ ಹಂತವೆಂದರೆ, ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸರ್ಕಾರದ   ಪಕ್ಷಪಾತದ ಧೋರಣೆಯ ಮುಂದುವರಿಕೆ. ಆಯುವತಿಯ ಮೇಲಿನ ದೌರ್ಜನ್ಯದ ಎಲ್ಲ ವಿವರಗಳು ಸಿಬಿಐ ಚಾರ್ಜ್‍ಶೀಟಿನಲ್ಲಿವೆ. ಸಾಮೂಹಿಕ ಅತ್ಯಾಚಾರ, ಕೊಲೆ ಮತ್ತು ಪಿತೂರಿಯ ನಿಬಂಧನೆಗಳ ಅಡಿಯಲ್ಲಿ ಆರೋಪಗಳನ್ನು  ಹೊರಿಸಲಾಗಿತ್ತು. ಚಾರ್ಜ್‌ಶೀಟ್ ಸಂತ್ರಸ್ತೆಯ ಸಾಯುವಾಗಿನ ಹೇಳಿಕೆಯನ್ನು ಮತ್ತು ಆಕೆಯನ್ನು ಚಿತ್ರಹಿಂಸೆಯ ಸ್ಥಿತಿಯಲ್ಲಿ ಕಂಡ ಮೊದಲ ವ್ಯಕ್ತಿಯಾದ ಆಕೆಯ ತಾಯಿಯ ಹೇಳಿಕೆಯನ್ನು ಆಧರಿಸಿತ್ತು. ಪರಿಶಿಷ್ಟಜಾತಿಗಳು ಮತ್ತು ಪಂಗಡಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ  ಪ್ರಕರಣಗಳ ವಿಚರಣೆ ನಡೆಸುವ ವಿಶೇಷ ಜಿಲ್ಲಾ ನ್ಯಾಯಾಲಯವು ವಿಚಾರಣೆಯನ್ನು ಕೈಗೆತ್ತಿಕೊಂಡಿತು.  ಯಾವುದೇ ಕಾರಣ ನೀಡದೆ ಸಂತ್ರಸ್ತೆಯ ಸಾವಿನ ಹೇಳಿಕೆಯನ್ನು ತಳ್ಳಿಹಾಕಿದ  ನ್ಯಾಯಾಲಯ,  ತಾಯಿಯ ಹೇಳಿಕೆಯನ್ನು ಕೂಡ ಬದಿಗೊತ್ತಿತು. ಬಾಲಕಿಯು ಹೆಸರಿಸಿದ ನಾಲ್ವರು ಆರೋಪಿಗಳಲ್ಲಿ ಮೂವರನ್ನು ಖುಲಾಸೆಗೊಳಿಸಲಾಯಿತು. ಮತ್ತು ನಾಲ್ಕನೆಯವನಿಗೆ   ಸೆಕ್ಷನ್ 304 ರ ಅಡಿಯಲ್ಲಿ ‘ಶಿಕ್ಷಾರ್ಹ ನರಹತ್ಯೆ’ ಎಂಬ ಕಡಿಮೆ ಅಪರಾಧಕ್ಕಾಗಿ ಶಿಕ್ಷೆ ವಿಧಿಸಲಾಯಿತು. ಹಾಥ್ರಸ್

ಇದನ್ನು ಓದಿ : 2022ರಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ್ದ 777 ಕೋಟಿ ರೂ. ವೆಚ್ಚದ ಸುರಂಗ ದುರಸ್ತಿ ಸಾಧ್ಯವಿಲ್ಲ ಎಂದ ಪಿಡಬ್ಲ್ಯೂಡಿ!

ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಜಾತಿಬಾಂಧವರಿಗೆ ಶಿಕ್ಷೆಯಿಂದ ವಿನಾಯಿತಿ ಇದೆ. ಒಂದು ವೇಳೆ  ಜಾತಿ ಸಮೀಕರಣ ವ್ಯತಿರಿಕ್ತವಾಗಿದ್ದರೆ,ಬಾಧಿತರು ಮೇಲ್ಜಾತಿಗೆ ಸೇರಿದವರಾಗಿದ್ದರೆ, ಅಪರಾಧಿಗಳು ದಲಿತರು ಅಥವಾ ಇತರ ಅಲ್ಪಸಂಖ್ಯಾತರಾಗಿದ್ದರೆ, ಒಂದುವೇಳೆ ಆ ಹುಡುಗಿ ಹಾಥ್ರಸ್‍ನಲ್ಲಿ ಬಲಿಯಾದವಳಂತೆ  ಸಾಯುವ ಮುನ್ನದ ಹೇಳಿಕೆಯನ್ನು ನೀಡಿದ್ದರೆ, ಅದನ್ನು ಯಾವುದೇತಕರಾರಿಲ್ಲದೆ ಒಪ್ಪಿಕೊಳ್ಳುತ್ತಿದ್ದರು. ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ  ವಿಧಿಸುತ್ತಿದ್ದರು. ನ್ಯಾಯಾಲಯವು ಯಾವಾಗಲೂ ಸಾಯುವ ಮುನ್ನ ಬಾಧಿತರು ಕೊಡುವ ಹೇಳಿಕೆಗಳಿಗೆ  ವಿಶೇಷ ಗಮನ ನೀಡುತ್ತದೆ. ಆದರೆ  ಹಾಥ್ರಸ್‍ನಲ್ಲಿ  ಬಲಿಯಾದವಳು ವಾಲ್ಮೀಕಿ ಸಮುದಾಯಕ್ಕೆ ಸೇರಿದ ಹುಡುಗಿ. ಮತ್ತು ಆಕೆ ಮೇಲ್ಜಾತಿಗೆ ಸೇರಿದವರ ಮೇಲೆ ಆರೋಪ ಮಾಡಿದ್ದಳು. ಕುಟುಂಬದವರ ಮೇಲೆ ರಾಜಿ ಮಾಡಿಕೊಂಡು ತೀರ್ಪನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರಲಾಯಿತು. ಇಂತಹ ತೀರಾ ಅನ್ಯಾಯದ ತೀರ್ಪಿನ ವಿರುದ್ಧ ಸರ್ಕಾರ ಮೇನ್ಮನವಿ ಸಲ್ಲಿಸುತ್ತದೆ ಎಂಬ ಅವರ ನಿರೀಕ್ಷೆ ಹುಸಿಯಾಯಿತು. ಉತ್ತರ ಪ್ರದೇಶ ಸರ್ಕಾರ ಮೇಲ್ಮನವಿ ಸಲ್ಲಿಸಲು ನಿರಾಕರಿಸಿತು. ಅಲ್ಲದೆ ಅಷ್ಟೇ ಖಂಡನೀಯ ಸಂಗತಿಯೆಂದರೆ, ಆರೋಪ ಪಟ್ಟಿ ಹಾಕಿದ್ದ, ಈ ಪ್ರಕರಣದಲ್ಲಿ ಪ್ರಮುಖ ಫಿರ್ಯಾದಿಯಾಗಿದ್ದ   ಸಿಬಿಐ ಕೂಡ ಮೇಲ್ಮನವಿ ಸಲ್ಲಿಸಲು ನಿರಾಕರಿಸಿತು. ಸಾಮೂಹಿಕ ಅತ್ಯಾಚಾರ, ಪಿತೂರಿ ಮತ್ತು ಕೊಲೆಯಂತಹ ಗಂಭೀರ ಆರೋಪಗಳನ್ನು ಹಾಕಿದ್ದ ಸಿಬಿಐ ತನ್ನದೇ ಪ್ರಕರಣವನ್ನು ಸಮರ್ಥಿಸಿಕೊಳ್ಳಲಿಕ್ಕೆ ಮೇಲ್ಮನವಿ ಸಲ್ಲಿಸಲು ನಿರಾಕರಿಸುವಇಂತಹ ಉದಾಹರಣೆಗಳು ಈ ಹಿಂದೆ ಇವೆಯೇ? ಸಿಬಿಐ ಕೇಂದ್ರ ಗೃಹ ಇಲಾಖೆಯ ಅಡಿಯಲ್ಲಿದೆ. ಮೇಲ್ಮನವಿ ಸಲ್ಲಿಸದಿರುವ ನಿರ್ಧಾರದ ಹಿಂದೆ ಗೃಹ ಸಚಿವಾಲಯ ಮತ್ತು ಸಚಿವ ಅಮಿತ್ ಶಾ ಅವರ ಅನುಮೋದನೆ ಇದೆ ಎಂದು ಖಂಡಿತಾ ಊಹಿಸಬಹುದು. ಹಾಥ್ರಸ್

ಹಾಥ್ರಸ್ ಸಂತ್ರಸ್ತೆಯ ಸಾಮೂಹಿಕ ಬಲಾತ್ಕಾರ ನಡೆಸಿ ಕೊಲೆ ಮಾಡಲಾಯಿತು-ಸಿಬಿಐ ಚಾರ್ಜ್‍ಶಿಟ್ ವ್ಯಂಗ್ಯಚಿತ್ರ ಕೃಪೆ: ಆರ್.ಪ್ರಸಾದ್

ಸರ್ಕಾರ ಮತ್ತು ಸಿಬಿಐ ಮೇಲ್ಮನವಿ ಸಲ್ಲಿಸಲು ನಿರಾಕರಿಸಿದ್ದರಿಂದ ಸಂತ್ರಸ್ತೆಯ ಕುಟುಂಬ, ಒತ್ತಡವನ್ನೂ ಲೆಕ್ಕಿಸದೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಆ ಪ್ರಕರಣ ಈಗ ಬಾಕಿ ಇದೆ.

ಎರಡನೇ ಪ್ರಕರಣ ಲಖ್ನೌ ಪೀಠಕ್ಕೆ ಸಂಬಂಧಿಸಿದ್ದು. ಸೆಪ್ಟೆಂಬರ್ 2020 ರಲ್ಲಿ ಘೋರ ಅಪರಾಧ ನಡೆದ ನಂತರ ಲಕ್ನೌ ಪೀಠ ಪ್ರಕರಣವನ್ನು ತಾನಾಗಿಯೇ  ಕೈಗೆತ್ತಿಕೊಂಡಿತು. ಅಕ್ಟೋಬರ್ 2020 ರಲ್ಲಿ ಸಂತ್ರಸ್ತ ಕುಟುಂಬವನ್ನು ನ್ಯಾಯಾಲಯಕ್ಕೆ ಕರೆಸಲಾಯಿತು. ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಿ, ಕುಟುಂಬಕ್ಕೆ  ಭದ್ರತೆ ಒದಗಿಸಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿತು. ಆರೋಪಿಗಳ ಖುಲಾಸೆ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರಾಕರಿಸಿದ ಉತ್ತರಪ್ರದೇಶಸರ್ಕಾರ, ಒಬ್ಬ ವ್ಯಕ್ತಿಗೆ ಉದ್ಯೋಗ ಮತ್ತು ಕುಟುಂಬಕ್ಕೆ ಪರ್ಯಾಯ ವಷತಿ ಒದಗಿಸುವ ಲಕ್ನೌ ನ್ಯಾಯಾಲಯದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತು. ಸಂತ್ರಸ್ತೆಯ ಕುಟುಂಬ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವನ್ನು ಎದುರಿಸಲು ಸೂಕ್ತ ವ್ಯವಸ್ಥೆ ಮಾಡಬೇಕಿತ್ತು. ಏಪ್ರಿಲ್ 2023ರಲ್ಲಿ, ಮುಖ್ಯ ನ್ಯಾಯಮೂರ್ತಿ          ನೇತೃತ್ವದ ತ್ರಿಸದಸ್ಯ ಪೀಠವು ಲಕ್ನೌ ನ್ಯಾಯಾಲಯದ ತೀರ್ಪಿಗೆ ತಡೆ ಕೋರಿದ ಸರ್ಕಾರದ ಮನವಿಯನ್ನು ತಿರಸ್ಕರಿಸಿತು. ಆದರೆ ತೀರ್ಪನ್ನು ಜಾರಿಗೊಳಿಸಲು ಸರ್ಕಾರ ನಿರಾಕರಿಸಿತು. ಸುಪ್ರೀಂ ಕೋರ್ಟ್‌ನಲ್ಲಿ  ಮುಂದಿನ ವಿಚಾರಣೆ ಜನವರಿ 2024 ರ ನಂತರ ನಡೆಯಲಿದೆ. ಈ ಎರಡೂ ಪ್ರಕರಣಗಳಲ್ಲಿ ಕಾನೂನು ಪ್ರಕ್ರಿಯೆಯ ಹೊರೆ,  ಆತಂಕ ಮತ್ತು ವೆಚ್ಚವನ್ನು ಕುಟುಂಬವೇ ಭರಿಸಬೇಕಾಗುತ್ತದೆ. ಎರಡೂ ಸಂದರ್ಭಗಳಲ್ಲಿ ಅವರು ಸರ್ಕಾರದ ವಿರುದ್ಧ  ಹೋರಾಡಬೇಕಾಗಿರುವುದು ಕೂಡ ಅವರೇ. ಹಾಥ್ರಸ್

ನಾಲ್ಕನೇ ಹಂತ – ಉಳಿವಿಗಾಗಿ ಹೋರಾಟ

ಪ್ರಸ್ತುತ ನಾಲ್ಕನೇ ಮತ್ತು ಮುಂದುವರೆಯುತ್ತಿರುವ ಹಂತವೆಂದರೆ, ಗ್ರಾಮ ಮಟ್ಟದಿಂದ ಸರ್ಕಾರದ ಉನ್ನತ ಮಟ್ಟದ ವರೆಗೆ ಬಲಿಷ್ಟ ಶಕ್ತಿಗಳ ವೈಷಮ್ಯವನ್ನು ಎದುರಿಸಿ ಕೇವಲ ಬದುಕುಳಿಯುವುದಕ್ಕೂ   ದಿನನಿತ್ಯದ  ಹೋರಾಟ ನಡೆಸಬೇಕಾದ ಹಂತ. ಕಳೆದ ವರ್ಷ ಆರೋಪಿಗಳು ಬಿಡುಗಡೆಯಾದ ದೃಶ್ಯಗಳ ಬಗ್ಗೆ ಸೋದರರಾದ ಸತಿಂದರ್ ಮತ್ತು ಸಂದೀಪ್ ನಮಗೆ ತಿಳಿಸಿದರು. ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಅತ್ಯಾಚಾರಿಗಳು  ಮತ್ತು ಕೊಲೆಗಾರರನ್ನು ಬಿಡುಗಡೆ ಮಾಡಿದಾಗ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆಚರಿಸಿದ ರೀತಿಯನ್ನು ಇದು ನಮಗೆ ನೆನಪಿಸುತ್ತದೆ. “ಮಾರ್ಚ್ 3, 2023ರಂದು ತೀರ್ಪಿನ ನಂತರ ಅವರನ್ನು ತಕ್ಷಣವೇ ಬಿಡುಗಡೆ ಮಾಡಲಾಯಿತು. ಇದು ಹೋಳಿ ಹಬ್ಬಕ್ಕೆ ಕೆಲವು ದಿನಗಳ ಮೊದಲು ಸಂಭವಿಸಿತು.   ಆದರೆ ಆಗಲೇ ಹೋಳಿಯನ್ನು ಆಚರಿಸುವಂತಿತ್ತು. ತಮಟೆವಾದ್ಯಗಳೊಂದಿಗೆ  ಹೂವುಗಳನ್ನು ಎರಚಿದರು, ಅವರ ಸಮುದಾಯದವರು ಹೂವಿನ ಹಾರ ಹಾಕಿ ಸ್ವಾಗತಿಸಿದವರು, ಊರೆಲ್ಲ ಮೆರವಣಿಗೆಯಲ್ಲಿ ಒಯ್ದರು” ಎಂದು ಅವರು ಹೇಳಿದರು. ಬುಲ್‍ಗರ್ಹಿ  ಗ್ರಾಮದಲ್ಲಿ ಕೇವಲ ಆರು ದಲಿತ ಕುಟುಂಬಗಳಿವೆ. ಆ ಹಳ್ಳಿಯ ಬಹುಪಾಲು ಕುಟುಂಬಗಳು ಠಾಕೂರರು.  ಆರೋಪಿಗಳೆಲ್ಲ ಈ ಜಾತಿಗೆ ಸೇರಿದವರು. ಬ್ರಾಹ್ಮಣ ಕುಟುಂಬಗಳ ಸಂಖ್ಯೆಯೂ ಗಮನಾರ್ಹವಾಗಿದೆ. ತಾವು ಭಯಭೀತರಾಗಿ, ಒಂಟಿಯಾಗಿರಬೇಕು ಎನ್ನುತ್ತಾರೆ ಸಂತ್ರಸ್ತ ಕುಟುಂಬದವರು. ಹಾಥ್ರಸ್

ಆರಂಭದಲ್ಲಿ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ನೀಡಿತ್ತು. ಕುಟುಂಬಕ್ಕೆ 24 ಗಂಟೆ ಭದ್ರತೆ ನೀಡಬೇಕೆಂಬ ನ್ಯಾಯಾಲಯದ ಆದೇಶ ಜಾರಿಯಾಗಿದೆ. ನಾವು ಕುಟುಂಬವನ್ನು ಭೇಟಿ ಮಾಡಲು ಹೋ  ದಾಗ, ಅವರ ಕಾಂಪೌಂಡ್‌ನ ಒಂದು ಭಾಗದಲ್ಲಿ ಕೇಂದ್ರೀಯಪಡೆಗಳ  ಕ್ಯಾಂಪ್ ಕಾಣಿಸಿತು. ಕುಟುಂಬದ ರಕ್ಷಣೆ ಹಾಗೂ ಅವರ ಸುರಕ್ಷತೆಗಾಗಿ 15 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು. ಅವರಿಲ್ಲದಿದ್ದರೆ ಇಡೀ ಕುಟುಂಬವನ್ನೇ ಸಾಯಿಸುತ್ತಿದ್ದರು ಎಂದು ಕಾನ್‌ಸ್ಟೆಬಲ್‌ ಒಬ್ಬರು ಹೇಳಿದರು. “ಈ ಕುಟುಂಬದವರು  ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತ್ತಿದ್ದಾರೆ ಎಂದು ಇವರ ಮೇಲೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ” ಎಂದು ಪೊಲೀಸರು ತಿಳಿಸಿದರು.. ಹಾಥ್ರಸ್

ಆದರೆ ಭದ್ರತೆಯೂ ಕೂಡ ಎರಡು ಅಲುಗಿನ ಕತ್ತಿ ಎಂಬುದು ಸಾಬೀತಾಗಿದೆ. ಇಬ್ಬರು ಸಹೋದರರೂ ತಮ್ಮ ಉದ್ಯೋಗ ಕಳೆದುಕೊಂಡರು. ಸತೀಂದರ್ ನೋಯ್ಡಾದಲ್ಲಿ ಒಂದು ಉತ್ಪಾದನಾ ಕಾರ್ಖಾನೆಯಲ್ಲಿ ಆತನ  ತಮ್ಮ ಸಂದೀಪ್ ಗಾಜಿಯಾಬಾದ್‌ ನ ಒಂದು ಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ತಂದೆ-ತಾಯಿಯನ್ನು ನೋಡಿಕೊಳ್ಳಲು ಹಳ್ಳಿಯಲ್ಲಿರುವ ಮನೆಗೆ ಬರುವಂತಾಗಿದೆ. ಈಗ ಭದ್ರತಾ ಸಿಬ್ಬಂದಿ ಇಲ್ಲದೆ ಮನೆಯಿಂದ ಹೊರಬರುವಂತಿಲ್ಲ. ಅವರ ಜೊತೆ ಸಶಸ್ತ್ರ ಪೋಲೀಸರೂ ಇರುತ್ತಾರೆ. ಹಾಗಾಗಿ ಅವರನ್ನು ಯಾರೂ ಕೆಲಸ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ಕೆಲವು ದಶಕಗಳ ಹಿಂದೆ ದಲಿತರಿಗೆ ಭೂ ವಿತರಣಾ ಕಾರ್ಯಕ್ರಮದಲ್ಲಿ ಅವರಿಗೆ ಐದು ಭಿಗಾ ಭೂಮಿ ನೀಡಲಾಗಿತ್ತು. ಎರಡು ಭಿಗಾ ಭೂಮಿಯನ್ನು ಮೇಲ್ಜಾತಿಯವರು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ. ಉಳಿದ ಜಮೀನಿನಲ್ಲಿ ಕೃಷಿ ಕೆಲಸಕ್ಕೆ ಹೋಗುವಾಗಲೂ ಪೋಲೀಸರು ಜೊತೆಯಾಗುತ್ತಾರೆ, ಕೊನೆಗೆ ತರಕಾರಿ ಕೊಳ್ಳಲೂ ಮನೆಯಿಂದ ಹೊರಗೆ ಕಾಲಿಡಲಾಗದೆ, ಮಾರುಕಟ್ಟೆಗೆ ಹೋದಾಗ ಮುಂದೆ ಇಬ್ಬರು, ಹಿಂದೆ ಇಬ್ಬರು ಪೋಲೀಸರು, ಎಲ್ಲರ ಕಣ್ಣು ನಮ್ಮ ಮೇಲೆ ಇದೆ, ಆದ್ದರಿಂದ ನಾವು “ಹಾಥ್ರಸ್ ಪ್ರಕರಣ” ಕುಟುಂಬ ಎಂದು ಗುರುತಿಸಲ್ಪಟ್ಟಿದ್ದೇವೆ. ಕುಟುಂಬವು ಶಾಂತಿ ದೇವಿ ಎಂಬ 80 ವರ್ಷದ ಅಜ್ಜಿ ಮತ್ತು ಸಂತ್ರಸ್ತೆಯ ತಂದೆ ತಾಯಿಗಳಾದ ಓಂ ಪ್ರಕಾಶ್ ಮತ್ತು ರಮಾ ದೇವಿ ಅವರನ್ನು ಒಳಗೊಂಡಿದೆ.

ಓಂ ಪ್ರಕಾಶ್ ದಶಕಗಳಿಂದ (ಪಶ್ಚಿಮ ಬಂಗಾಲದ) ಅಸನ್‍ ಸೋಲ್‍ನಲ್ಲಿ ದಶಕಗಳಿಂದ  ಕಾರ್ಮಿಕರಾಗಿ ದುಡಿಯುತ್ತಿದ್ದವರು.. ಅವರಿಗೆ ಕೆಂಬಾವುಟದ ಪರಿಚಯವಿದೆ. ಜ್ಯೋತಿ ಬಸು ಅವರ ಅಡಿಯ ಬಂಗಾಳದಲ್ಲಿ  ಇಂತಹ ಅನ್ಯಾಯ ನಡೆಯುವುದು ಸಾಧ್ಯವಿರಲಿಲ್ಲ ಎಂದರು. ಇನ್ನು, ಸತೀಂದರ್ ಪತ್ನಿ ಸಂಧ್ಯಾ, ಅವರ ಮೂವರು ಮಕ್ಕಳು, 23 ವರ್ಷದ ಅವರ ತಮ್ಮ ಸಂದೀಪ್ ಇದ್ದಾರೆ. ಭದ್ರತೆಯ ಕಾರಣದಿಂದ ಅವರ ಮಕ್ಕಳು ಶಾಲೆಗೆ ಹೋಗುತ್ತಿಲ್ಲ.  ಹಿರಿಯ ಮಗುವನ್ನು ಸಂಧ್ಯಾ ಅವರ ತಂದೆತಾಯಿ ಹತ್ತಿರ ಬಿಟ್ಟಿದ್ದಾರೆ. ಇಬ್ಬರು ಸಣ್ಣಮಕ್ಕಳಿಗೆ ಶಿಕ್ಷಣದ ಹಕ್ಕಿಗೆ ಈ ಪರಿಸ್ಥಿತಿಯಿಂದ ಅಡ್ಡಿಯಾಗಿದೆ.

ಪರಿಹಾರದ ಹಣ ಪ್ರಕರಣಕ್ಕೆ ಖರ್ಚು ; ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ. ಈ ಮೂರು ವರ್ಷಗಳಲ್ಲಿ ಪರಿಹಾರವಾಗಿ ನೀಡಿದ ಹಣವನ್ನು ಪ್ರಕರಣಕ್ಕೆ ಖರ್ಚು ಮಾಡಲಾಗುತ್ತಿದೆ. ಸಹಾನುಭೂತಿ ಹೊಂದಿರುವ ವಕೀಲರು ಶುಲ್ಕ ತೆಗೆದುಕೊಳ್ಳದಿದ್ದರೂ ಪ್ರತಿ ಬಾರಿ ನ್ಯಾಯಾಲಯಕ್ಕೆ ಹೋದಾಗಲೂ 15 ಸಾವಿರದಿಂದ 20 ಸಾವಿರ ರೂ. ಬೇಕಾಗುತ್ತದೆ. ತಮ್ಮ ಕುಟುಂಬದ ಸದಸ್ಯರಿಗೆ ಮಾತ್ರವಲ್ಲದೆ ಭದ್ರತಾ ಸಿಬ್ಬಂದಿಗೂ ಅವರು ವಾಹನವನ್ನು ಬಾಡಿಗೆಗೆ ಪಡೆಯಬೇಕು. ಕೆಲವು ಸಂದರ್ಭಗಳಲ್ಲಿ, ವಿಶೇಷವಾಗಿ ಆರಂಭಿಕ ದಿನಗಳಲ್ಲಿ, ಅವರು ವಿವಿಧ ನ್ಯಾಯಾಲಯಗಳಿಗೆ ಹೋಗಬೇಕಾಗಿತ್ತು. ತಿಂಗಳಿಗೆ ಹಲವಾರು ಬಾರಿ ಲಕ್ನೌ ಮತ್ತು  ಅಲಹಾಬಾದ್‌ಗೆ ಹೋಗಬೇಕಾಗಿತ್ತು. ಪ್ರತಿಯೊಂದು ಸಂದರ್ಭದಲ್ಲೂ ಕುಟುಂಬವು ಸಾಮಾಜಿಕ ಕಾರ್ಯಕ್ರಮಗಳಿಗೆ ಹೋಗಬೇಕು. ಆಗಲೂ ಇದೇ ರೀತಿ ಖರ್ಚು. ಪ್ರಯಾಣದ ವ್ಯವಸ್ಥೆಯನ್ನು ಕುಟುಂಬದವರೇ ನೋಡಿಕೊಳ್ಳಬೇಕು. ಪರಿಣಾಮವಾಗಿ, ಕುಟುಂಬವು ಹೊರಗೆ ಹೋಗುವುದನ್ನು ನಿಲ್ಲಿಸಿತು. ಹಾಥ್ರಸ್

ಕಳೆದ ವರ್ಷ ಸಂಧ್ಯಾ ತೀವ್ರ ಅಸ್ವಸ್ಥರಾಗಿದ್ದರು. ಆಕೆಯನ್ನು ಆಗ್ರಾದ ಆಸ್ಪತ್ರೆಗೆ ಸೇರಿಸಬೇಕಾಯಿತು. ಆಕೆಯ ವೈದ್ಯಕೀಯ ವೆಚ್ಚದ ಹೊರತಾಗಿ, ಕುಟುಂಬವು ಭದ್ರತಾ ಸಿಬ್ಬಂದಿಯ ವೆಚ್ಚದೊಂದಿಗೆ ಪ್ರತ್ಯೇಕ  ಕೊಠಡಿಯನ್ನು ಸಹ ವ್ಯವಸ್ಥೆ ಮಾಡಬೇಕಾಗಿತ್ತು. ನಮ್ಮೊಂದಿಗೆ ಮಾತನಾಡುತ್ತಿರುವಾಗ ರಮಾದೇವಿಯವರು ಹಲವು ಬಾರಿ ಕಣ್ಣೀರಿಟ್ಟರು. ಮಗಳಿಗೆ ಅಮಾನುಷವಾಗಿ ಚಿತ್ರಹಿಂಸೆ ನೀಡಿದವರನ್ನು ಬಿಡುಗಡೆಗೊಳಿಸಿ ನಮಗೆ ಆಗಿರುವ ಅನ್ಯಾಯವನ್ನು ಒಪ್ಪಿಕೊಳ್ಳುವುದು ಕಷ್ಟವಾಗಿದೆ ಎಂದರು. ಇದು ತನ್ನ ಮಗಳಲ್ಲದೇ ಇಡೀ ಕುಟುಂಬವನ್ನೇ ನಾಶ ಮಾಡಿದೆ ಎಂದು ಅಳಲು ತೋಡಿಕೊಂಡರು. ತನ್ನ ಪುತ್ರರತ್ತ ಬೊಟ್ಟು ಮಾಡಿ, ಈ ನನ್ನ ಮಕ್ಕಳು ಯಾವ ಅಪರಾಧ ಮಾಡಿ ಸಾಮಾನ್ಯ ಜೀವನದಿಂದ ದೂರ ಸರಿದಿದ್ದಾರೆ? ಅವರಿಗೆ ಯಾವುದೇ ಕೆಲಸವಿಲ್ಲದೆ ನಾವು ಹೇಗೆ ಬದುಕಬೇಕು ಎಂದು ಪ್ರಶ್ನಿಸುತ್ತಾಳೆ. ಪರಿಹಾರವಾಗಿ ನೀಡಿದ ಹಣ ಬಹುತೇಕ  ಖಾಲಿಯಾಗಿದೆ ಎಂದು ಸತೀಂದರ್ ಹೇಳಿದರು. ಪ್ರಕರಣದ ಖರ್ಚಿಗೆ ಒಂದಿಷ್ಟು ಹಣ ಇಟ್ಟುಕೊಂಡು ಇತರೆ ಖರ್ಚು ಕಡಿಮೆ ಮಾಡಲು ಯತ್ನಿಸುತ್ತಿದ್ದೇವೆ ಎಂದರು. ಊಟ, ಕನಿಷ್ಠ ಖರ್ಚಿಗೆ ತಿಂಗಳಿಗೆ ಕನಿಷ್ಠ 15 ಸಾವಿರ ರೂಪಾಯಿ ಬೇಕು, ಆದರೆ ಆದಾಯ ಇಲ್ಲದೇ ಪರದಾಡುವಂತಾಗಿದೆ ಎಂದರು. ತೊಟ್ಟಿದ್ದ ಬಟ್ಟೆಯನ್ನು ತೋರಿಸಿ, ಇವುಗಳನ್ನು ಸಂಬಂಧಿಕರು ಕೊಟ್ಟಿದ್ದು, ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ ಎಂದರು. ಹಾಥ್ರಸ್

ಇಲ್ಲಿನ ಸಂಸದ ಒಮ್ಮೆಯೂ ಭೇಟಿ ಮಾಡಿಲ್ಲ ;ಇಲ್ಲಿನ ಲೋಕಸಭೆ ಸ್ಥಾನ ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿದೆ. ಹಾಲಿ ಸಂಸದ ಬಿಜೆಪಿಗೆ ಸೇರಿದ ರಾಜ್ವೀರ್ ದಿಲೆರ್. ಆತ ಸಂತ್ರಸ್ತೆಯ ಕುಟುಂಬವನ್ನು ಒಮ್ಮೆಯೂ ಭೇಟಿ ಮಾಡಿಲ್ಲ. ಅವರ ನೋವಿನ ಕುರಿತು ಕೇಳಿದಾಗ, ಸರ್ಕಾರ 25 ಲಕ್ಷ ರೂ. ಕೊಟ್ಟಿದೆ. ಇನ್ನೂ ಸರ್ಕಾರ ಏನುಮಾಡಬೇಕು ಎನ್ನುತ್ತಾರೆ. ತಮ್ಮ ಮನೆಯಲ್ಲಿ ಟೀ ಕುಡಿಯಲು ಬಳಸುವ ಲೋಟಗಳಲ್ಲಿ ದಲಿತರಿಗೆ ಟೀ  ಕೊಡದ ಮೇಲ್ಜಾತಿಯವರ ಮನೆಗಳಿಗೆ ಆ ಸಂಸದ ಹೋದರೆ, ಅವರೇ ಸ್ವತಃ ಟೀ ಲೋಟ ತೆಗೆದುಕೊಂಡು, ಆ ಲೋಟದಿಂದ ಟೀ ಕುಡಿಯುತ್ತಾರೆ ಎಂಬ ಕಥೆಯನ್ನು ನಮಗೆ ಹೇಳಿದರು. ಇವು ಒಬ್ಬ ಬಿಜೆಪಿಯ ಪರಿಶಿಷ್ಟ ಜಾತಿ ಎಂಪಿ  ನಾಚಿಕೆಯಿಲ್ಲದೆ ಪಾಲಿಸುವ ಜಾತಿ ನಿಯಮಗಳು. ಇಲ್ಲಿ ಎಲ್ಲಾ ದಲಿತರು ಅನುಸರಿಸ ಬೇಕಾದ ಜಾತಿನಿಯಮಗಳು. ಹಾಥ್ರಸ್

ಈ ಭಯಾನಕ ಪರಿಸ್ಥಿತಿಯು ದಲಿತ ಕುಟುಂಬಗಳಿಗೆ ವಿಧಿಸಿರುವ ಶಿಕ್ಷೆ. ತಮ್ಮ ತಂಗಿಯ, ಅವರ ಮಗಳ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದವರೊಂದಿಗೆ ರಾಜಿ ಮಾಡಿಕೊಳ್ಳಲು ನಿರಾಕರಿಸಿದ ಕಾರಣ ಅವರಿಗೆ  ಇಂತಹ ಶಿಕ್ಷೆ. ಹಾಥ್ರಸ್ ದಲಿತರು ಮತ್ತು ಮಹಿಳೆಯರ ವಿರುದ್ಧ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ಅನ್ಯಾಯ, ಕ್ರೌರ್ಯ ಮತ್ತು ಮನುಸ್ಮೃತಿಯ ಜಾರಿಗೆ ಒಂದು ರೂಪಕವಾಗಿದೆ.

 

“ಅಯೋಧ್ಯೆಗೆ ಮರಳುತ್ತಿರುವ ರಾಮ” ಮಹಿಳೆಯರ ವಿರುದ್ಧ ಅಪರಾಧದಲ್ಲಿ ಯುಪಿ ನಂ.1 ಬಿಹೆಚ್‍ಯು ಪ್ರಕರಣದಲ್ಲಿ ಆರೋಪಿಗಳು ಬಿಜೆಪಿ ಐಟಿ ಸೆಲ್‍ನವರು ವ್ಯಂಗ್ಯಚಿತ್ರ ಕೃಪೆ: ರಾಕೇಶ್‍ ರಂಜನ್‍, ಮೊಲಿಟಿಕ್ಸ್.ಇನ್

ಒಂದು ಒಂದು ವೇಳೆ ಜಾತಿ ಸಮೀಕರಣ ವ್ಯತಿರಿಕ್ತವಾಗಿದ್ದರೆ, ಅಪರಾಧಿಗಳು ದಲಿತರು ಅಥವಾ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದರೆ, ಮತ್ತು ಬಾಧಿತರು ಮೇಲ್ಜಾತಿಗೆ ಸೇರಿದವರಾಗಿದ್ದರೆ ಒಂದು ವೇಳೆ  ಆ ಹುಡುಗಿ ಹಾಥ್ರಸ್‍ನಲ್ಲಿ ಬಲಿಯಾದವಳಂತೆ  ಸಾಯುವ ಮುನ್ನದ ಹೇಳಿಕೆಯನ್ನು ನೀಡಿದ್ದರೆ, ಅದನ್ನು ಯಾವುದೇ ತಕರಾರಿಲ್ಲದೆ ಒಪ್ಪಿಕೊಳ್ಳುತ್ತಿದ್ದರರು.  ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುತ್ತಿದ್ದರು.  ನ್ಯಾಯಾಲಯವು  ಯಾವಾಗಲೂ ಸಾಯುವ ಮುನ್ನ ಬಾಧಿತರು ಕೊಡುವ ಹೇಳಿಕೆಗಳಿಗೆ  ವಿಶೇಷ ಗಮನ ನೀಡುತ್ತದೆ. ಆದರೆ ಹಾಥ್ರಸ್‍ನಲ್ಲಿ  ಬಲಿಯಾದವಳು ವಾಲ್ಮೀಕಿ ಸಮುದಾಯಕ್ಕೆ ಸೇರಿದ ಹುಡುಗಿ. ಮತ್ತು ಆಕೆ ಮೇಲ್ಜಾತಿಗೆ ಸೇರಿದವರ ಮೇಲೆ ಆರೋಪ ಮಾಡಿದ್ದಳು.

ಇದನ್ನು ನೋಡಿ : ಎಚ್ಚರ ಮತ್ತು ವಿವೇಕದ ಕಣ್ಣುಗಳನ್ನು ತೆರೆಯಿಸುವ ಹೊಣೆ ಪತ್ರಕರ್ತರದ್ದು – ಟಿ. ಗುರುರಾಜ Janashakthi Media

Donate Janashakthi Media

Leave a Reply

Your email address will not be published. Required fields are marked *