ಮೈಸೂರು: ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಚಿನ್ನಪ್ಪ ಪಾಳ್ಯ ಗ್ರಾಮದ ಶೌಚಾಲಯ ಗುಂಡಿಯಲ್ಲಿ ಮನುಷ್ಯನ ಬುರುಡೆ, ಮೂಳೆಗಳು ಪತ್ತೆಯಾಗಿರುವ ಘಟನೆ ನಡೆದಿದೆ. ದಾಸಪ್ರಕಾಶ್ ಎಂಬುವವರ ಮನೆಯ ಹಿತ್ತಲಿನ ಶೌಚಾಲಯದ ಗುಂಡಿಯಲ್ಲಿ ಮನುಷ್ಯನ ಬುರುಡೆ, ಮೂಳೆಗಳು ಪತ್ತೆಯಾಗಿವೆ. ಮೈಸೂರು
ಶೌಚಾಲಯ ಗುಂಡಿ ಕುಸಿದು ಬಿದ್ದ ಹಿನ್ನಲೆಯಲ್ಲಿ ದುರಸ್ತಿ ಕಾರ್ಯ ನಡೆಸುವ ವೇಳೆ ಶೌಚಾಲಯದ ಗುಂಡಿ ಒಳಗೆ ಮೂಳೆಗಳು ಪತ್ತೆಯಾಗಿವೆ. ಮನೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸರ್ಕಲ್ ಇನ್ ಸ್ಪೆಕ್ಟರ್ ಶಬೀರ್ ಹುಸೇನ್, ಡಿವೈಎಸ್ಪಿ ಗೋಪಾಲಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ತೆಲಂಗಾಣ| ಸುರಂಗದ ಮೇಲ್ಛಾವಣಿ ಕುಸಿತ: ಕಾರ್ಮಿಕರನ್ನು ರಕ್ಷಿಸಲು ಕಾರ್ಯ ಮುಂದುವರಿಕೆ
ದಾಸಪ್ರಕಾಶ ಮತ್ತು ತಂದೆ ಜೇಕಬ್ ಮನೆಯಲ್ಲಿ ವಾಸವಾಗಿದ್ದರು. ಜೇಕಬ್ ಸಾಯುವ ಮೂರ್ನಾಲ್ಕು ತಿಂಗಳ ಹಿಂದೆಯೇ ದಾಸಪ್ರಕಾಶ್ ಸತ್ತಿರುವ ಶಂಕೆ ವ್ಯಕ್ತವಾಗಿದೆ.
ದಾಸಪ್ರಕಾಶ್‌ಗೆ ಹೆಂಡತಿ ಹಾಗೂ ಮಕ್ಕಳಿದ್ದಾರೆ. ಅವರನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಅವರು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ. ದಾಸ್‌ಪ್ರಕಾಶ್ ನಾಪತ್ತೆಯಾದರೂ ತಂದೆ ಜೇಕಬ್ ಹಾಗೂ ಪತ್ನಿ ಪ್ರಿಯಾ ದೂರು ನೀಡಿರಲಿಲ್ಲ.
ತಂದೆ ಜೊತೆ ಅನ್ಯೋನ್ಯವಾಗಿದ್ದ ದಾಸಪ್ರಕಾಶ್ ತಂದೆ ನಿಧನವಾದಾಗ ಬಂದಿರಲಿಲ್ಲ. ಇದೀಗ ಮನೆಯ ಶೌಚಾಲಯದ ಟ್ಯಾಂಕ್ ಕ್ಲೀನ್ ಮಾಡುವಾಗ ಮನುಷ್ಯನ ಮೂಳೆ, ಬುರುಡೆ ಸಿಕ್ಕಿದ್ದು ಸಾವಿನ ಸುತ್ತು ಅನುಮಾನ ಹೆಚ್ಚಾಗಿದೆ.
ಇದನ್ನೂ ನೋಡಿ: ಭೂಗಳ್ಳರ ಪಾಲಾದ ಬೆಂಗಳೂರಿನ ಹುಳಿಮಾವು ಕೆರೆ Janashakthi Media