ಹೊಸಪೇಟೆ: ಇಂದು, ಗುರುವಾರ ನಸುಕಿನಲ್ಲಿ ನಗರದ ಭಟ್ರಹಳ್ಳಿ ಆಂಜನೇಯ ದೇವಸ್ಥಾನದ ದ್ವಾರ ಬಾಗಿಲಿನ ಬಳಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಹಲವು ಬಾರಿ ಚುಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೊಸಪೇಟೆ ನಗರದ ಬಾಣಗಕೇರಿಯ ರಾಮಲಿ (40) ಕೊಲೆಯಾದವರು ಎಂದು ಗುರುತಿಸಲಾಗಿದೆ. ಅವರಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ. ಮೃತರು ನಗರಸಭೆ ಸದಸ್ಯರೊಬ್ಬರ ಕುಟುಂಬದವರು ಎಂದು ಹೇಳಲಾಗಿದೆ.
ಇದನ್ನೂ ಓದಿ: ದೆಹಲಿ ವಿಧಾನಸಭಾ ಚುನಾವಣೆ: ಸ್ಫರ್ಧಿಸುತ್ತಿರುವ 132 ಮಂದಿಗೆ ಕ್ರಿಮಿನಲ್ ಹಿನ್ನಲೆ
‘ನಸುಕಿನ 2.30 ರಿಂದ 3 ಗಂಟೆ ನಡುವೆ ಈ ಘಟನೆ ನಡೆದಿದೆ. ಹಣಕಾಸು ವಿಚಾರದಲ್ಲಿ ಚರ್ಚೆ ನಡೆದು ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿರುವ ಶಂಕೆ ಇದೆ. ತನಿಖೆ ನಡೆಯುತ್ತಿದೆ’ ಎಂದು ಗ್ರಾಮಾಂತರ ಠಾಣೆ ಪೊಲೀಸ್ ಮೂಲಗಳು ತಿಳಿಸಿವೆ.
ನಗರದಿಂದ ಹಂಪಿಯತ್ತ ಸಾಗುವ ಬೈಪಾಸ್ ರಸ್ತೆಯಲ್ಲಿ ಭಟ್ರಹಳ್ಳಿ ಆಂಜನೇಯ ದೇವಸ್ಥಾನ ಇದ್ದು, ಅದರ ದ್ವಾರದಲ್ಲೇ ಈ ಘಟನೆ ನಡೆದಿದೆ. ಬೆಳಿಗ್ಗೆ ಜಾಗಿಂಗ್, ವಾಕಿಂಗ್ ಮಾಡುವವರಿಗೆ ಮೃತದೇಹ ಕಾಣಿಸಿತ್ತು. ಪೊಲೀಸರು ಆಗಲೇ ಬಂದಿದ್ದರು. ಬೆಳಕು ಹರಿಯುತ್ತಿದ್ದಂತೆಯೇ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು. ಸ್ಥಳಕ್ಕೆ ಬೆರಳಚ್ಚು ತಜ್ಞರು ಬಂದು ಪರಿಶೀಲನೆ ನಡೆಸಿದರು.
ಇದನ್ನೂ ನೋಡಿ: ಹಿಂದೂ ರಾಷ್ಟ್ರಕ್ಕೆ ಸಂವಿಧಾನ | ಆರ್ಎಸ್ಎಸ್ನ ಅಪಾಯಕಾರಿ ನಡೆ Janashakthi Media