ಕಾರವಾರ | ಕೂಲಿ ಕಾರ್ಮಿಕನ ಮನೆ ಸಂಪೂರ್ಣ ಬೆಂಕಿಗಾಹುತಿ

Please follow and like us:

ಕಾರವಾರ : ವಿದ್ಯುತ್ ಶಾರ್ಟ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ಹೊತ್ತಿ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಸಂಪೂರ್ಣ ಸುಟ್ಟುಹೋದ ಘಟನೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶ ನಗರದಲ್ಲಿ ನಡೆದಿದೆ.

ಇದನ್ನು ಓದಿ :- ಹಸಿರುಭೂಮಿ ಪ್ರತಿಷ್ಠಾನ ನಿರ್ಮಿಸಿದ ಗಿಡಗಳು ಸ್ಥಳೀಯರಿಂದಲೇ ಜೆಸಿಬಿಗೆ ಆಹುತಿ ಉಳಿಸುವಂತೆ ಕೆಲ ಸ್ಥಳೀಯರ ಆಕ್ರೋಶ

ಮಾದೇವಿ ಸುಧಾಕರ ಮಡಿವಾಳ್ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು ಕೂಲಿ ಕೆಲಸಕ್ಕೆ ಈ ಕುಟುಂಬ ತೆರಳಿತ್ತು. ಬಂದು ನೋಡುವುದರೊಳಗೆ ಮನೆ ಸುಟ್ಟು ಸಂಪೂರ್ಣ ನಾಶವಾಗಿದೆ. ಲಕ್ಷಾಂತರ ರುಪಾಯಿ ಮನೆಯ ವಸ್ತುಗಳು ಬೆಂಕಿಗಾಹುತಿಯಾಗಿದ್ದು ,ನೆಗ್ಗು ಗ್ರಾಮಪಂಚಾಯ್ತಿಯ ಕಂದಾಯ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:
Donate Janashakthi Media

Leave a Reply

Your email address will not be published. Required fields are marked *