ಕಾರವಾರ : ವಿದ್ಯುತ್ ಶಾರ್ಟ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ಹೊತ್ತಿ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಸಂಪೂರ್ಣ ಸುಟ್ಟುಹೋದ ಘಟನೆ
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶ ನಗರದಲ್ಲಿ ನಡೆದಿದೆ.
ಇದನ್ನು ಓದಿ :- ಹಸಿರುಭೂಮಿ ಪ್ರತಿಷ್ಠಾನ ನಿರ್ಮಿಸಿದ ಗಿಡಗಳು ಸ್ಥಳೀಯರಿಂದಲೇ ಜೆಸಿಬಿಗೆ ಆಹುತಿ ಉಳಿಸುವಂತೆ ಕೆಲ ಸ್ಥಳೀಯರ ಆಕ್ರೋಶ
ಮಾದೇವಿ ಸುಧಾಕರ ಮಡಿವಾಳ್ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು ಕೂಲಿ ಕೆಲಸಕ್ಕೆ ಈ ಕುಟುಂಬ ತೆರಳಿತ್ತು. ಬಂದು ನೋಡುವುದರೊಳಗೆ ಮನೆ ಸುಟ್ಟು ಸಂಪೂರ್ಣ ನಾಶವಾಗಿದೆ. ಲಕ್ಷಾಂತರ ರುಪಾಯಿ ಮನೆಯ ವಸ್ತುಗಳು ಬೆಂಕಿಗಾಹುತಿಯಾಗಿದ್ದು ,ನೆಗ್ಗು ಗ್ರಾಮಪಂಚಾಯ್ತಿಯ ಕಂದಾಯ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.