ಬೆಂಗಳೂರು : ಪದ್ಮನಾಭ ನಗರದ ಮಹಾರಾಜ್ ಅಗ್ರಸೇನ್ ಆಸ್ಪತ್ರೆಯಲ್ಲಿ ವಾಂತಿ ಅಂತ ಆಸ್ಪತ್ರೆ ಸೇರಿದ ಗೃಹಿಣಿ ಇದ್ದಕ್ಕಿದಂತೆ ಸಾವನ್ನಪ್ಪಿರೋ ಘಟನೆ ನಡೆದಿದೆ.
ಬನಶಂಕರಿಯಲ್ಲಿ ವಾಸವಿದ್ದ ಮಹಿಳೆ ದೇವಿಗೆ ದಿಢೀರ್ ವಾಂತಿ ಹೆಚ್ಚಾದ ಕಾರಣ ತಕ್ಷಣವೇ ಆಕೆಯನ್ನು ಮಹಾರಾಜ್ ಅಗ್ರಸೇನ್ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಪ್ಲೇಟ್ಲೆಟ್ ಕಡಿಮೆ ಆಗಿ ಡೆಂಗ್ಯೂ ಬಂದಿರುವುದು ಗೊತ್ತಾಗಿದೆ. ಡೆಂಗ್ಯೂ ಇರೋದು ಖಚಿತವಾದ್ರೂ ಸೂಕ್ತ ಚಿಕಿತ್ಸೆ ಸಿಗದ ಕಾರಣ ನಿನ್ನೆ ಸಂಜೆ 4 ಗಂಟೆಯೊಳಗೆ ಗೃಹಿಣಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಉಡುಪಿ ಕಗ್ಗೊಲೆ | ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ; ಕನ್ನಡ ಮಾಧ್ಯಮಗಳ ಸುಳ್ಳು ಬಯಲು!
ಇದರಿಂದ ರೊಚ್ಚಿಗೆದ್ದ ಕುಟುಂಬಸ್ಥರು ಆಸ್ಪತ್ರೆ ಮುಂದೆಯೇ ಧರಣಿ ಕುಳಿತ್ತಿದ್ದಾರೆ. ಪುಟ್ಟ ಕಂದಮ್ಮಗಳು ಅಮ್ಮನನ್ನು ಕಳೆದುಕೊಂಡು ಏನು ತಿಳಿಯದೇ ಅನಾಥವಾಗಿವೆ. ದೇವಿ ಪತಿ ಸಹ ಆಸ್ಪತ್ರೆ ವಿರುದ್ಧ ರೊಚ್ಚಿಗೆದ್ದು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆ ಎಂದ್ರೆ ಸಾಕು ಭಯ ಉಂಟು ಮಾಡುವ ವಾತಾವರಣ. ಚಿಕ್ಕ ನೋವು ಅಂತ ಹೋದ್ರು ಆಪರೇಷನ್ ಮಾಡಿಸಬೇಕು ಎಂದು ಹೇಳುವ ಆಸ್ಪತ್ರೆಗಳೆ ಹೆಚ್ಚಾಗುತ್ತಿವೆ. ಜೀವ ಕೊಡುವ ಬದಲಿಗೆ ಹಣ ಕೊಟ್ರೆ ಜೀವ ಎಂಬ ಅಪವಾದಗಳು ಎಷ್ಟೋ ಆಸ್ಪತ್ರೆಗಳ ತಲೆ ಮೇಲೆ ಇದೆ. ಈಗ ಪದ್ಮನಾಭ ನಗರದ ಮಹಾರಾಜ್ ಅಗ್ರಸೇನ್ ಆಸ್ಪತ್ರೆ ಇದೇ ಆರೋಪವನ್ನು ಹೊತ್ತಿದೆ.
ಈ ಅನ್ಯಾಯವನ್ನು ಖಂಡಿಸಿ ಬಸವನಗುಡಿ ಭೀಮ್ ಆರ್ಮಿ ಸಂಘಟನೆ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿತು. ವೈದ್ಯರ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು ಅವರ ವಿರುದ್ಧ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆ ಅನ್ವಯ ಕೇಸು ದಾಖಲಿಸಿಬೇಕು ಎಂದು ಸಂಘಟನೆಯ ಅಧ್ಯಕ್ಷ ರಾಜಶೇಖರ್ ಒತ್ತಾಯಿಸಿದ್ದಾರೆ.
ವಿಡಿಯೋ ನೋಡಿ: ಪೋಕ್ಸೋ ಪ್ರಕರಣದ ಆರೋಪಿ ಸ್ವಾಮಿಗೆ ಪಾದಪೂಜೆ ! ಜನರ ಪ್ರಜ್ಞೆಗೆ ಏನಾಗಿದೆ? – ಮೂಡ್ನಾಕೂಡು ಚಿನ್ನಸ್ವಾಮಿ