ಬೆಂಗಳೂರು: ಈ ವರ್ಷಾಂತ್ಯಕ್ಕೆ ಚಾಲಕರಹಿತ ಮೆಟ್ರೊ ಸಂಚರಿಸುವಂತೆ ಮಾಡಬೇಕು ಎಂದು ಬಿಎಂಆರ್‌ಸಿಎಲ್ ಗುರಿ ಇಟ್ಟುಕೊಂಡಿದೆ.ಅದಕ್ಕೆ ಬೇಕಾದ ತಯಾರಿ ಮಾಡುತ್ತಿದೆ.
ಸದ್ಯ ಲೋಕೊ ಪೈಲಟ್ ಮೆಟ್ರೊ ರೈಲುಗಳೇ ಸಂಚರಿಸಲಿವೆ.4-5 ತಿಂಗಳಲ್ಲಿ ಚಾಲಕನಿಲ್ಲದ ಮೆಟ್ರೊ ರೈಲು ಆರಂಭಿಸಬೇಕು ಎಂಬ ಯೋಜನೆ ಇದೆ ಎಂದು ಮೆಟ್ರೊ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚವಾಣ್ ಹೇಳಿದ್ದಾರೆ.
ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತವು (ಬಿಎಂಆರ್‌ಸಿಎಲ್) ನಮ್ಮಮೆಟ್ರೊ ಎರಡನೇ ಹಂತದ ಹಳದಿ ಮಾರ್ಗದಲ್ಲಿ ಚಾಲಕನಿಲ್ಲದ ಮೆಟ್ರೊ ಓಡಿಸುವ ಗುರಿಯನ್ನು ಇಟ್ಟುಕೊಂಡಿತ್ತು. ಆರ್.ವಿ. ರಸ್ತೆ ಬೊಮ್ಮಸಂದ್ರ ಎಲೆಕ್ಟ್ರಾನಿಕ್ ಸಿಟಿ ನಡುವಿನ ಈ ಮಾರ್ಗ (ಹಳದಿ) ಶೇ 99 ರಷ್ಟ್ರು ಮುಗಿದಿದ್ದು ಆಗಸ್ಟ್‌ನಲ್ಲಿ ಮೆಟ್ರೊ ರೈಲು ಸಂಚಾರ ಆರಂಭವಾಗಲಿದೆ .ಆದರೆ ಚಾಲಕ ರಹಿತ ಮೆಟ್ರೊ ಬದಲು ಈಗಿರುವ ಡಿಸ್ಟೇನ್ಸ್ ಟು ಗೊ (ಡಿಟಿಜಿ) ವ್ಯವಸ್ಥೆಯ ಲೋಕೊ ಪೈಲಟ್ ಮೆಟ್ರೊಗಳೇ ಸಂಚರಿಸಲಿವೆ.
ಇದನ್ನೂ ಓದಿ:ಮಂಡ್ಯ ರೋಡ್ ʼಶೋʼಕಿ ಆಯ್ತು, ಇದೀಗ ಮೆಟ್ರೊ ʼಶೋʼ ಗೆ ಮೋದಿ ಸಿದ್ದತೆ!
ನಮ್ಮ ಮೆಟ್ರೊದ ಹೊಸ ಮಾರ್ಗಗಳಲ್ಲಿ ಚಾಲಕ ರಹಿತ ಮೆಟ್ರೊ ಸಂಚರಿಸುವಂತೆ ಮಾಡಬೇಕು ಎಂಬ ಯೋಜನೆ ಇದೆ.ಆದರೆ ಅದು ಇನ್ನೂ ಪರಿಶೀಲನೆಯಲ್ಲಿದೆ. ಚಾಲಕ ರಹಿತ ಮೆಟ್ರೊ ಖರೀದಿ ಪ್ರಕ್ರಿಯೆ ನಡೆಯಬೇಕು ನಂತರ ಸಂಚರಿಸಲಿವೆ. ಅದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಯಶವಂತ್ ಚವಾಣ್ ಮೆಟ್ರೊ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ಸಂವಹನ ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆ (ಸಿಬಿಟಿಸಿ) ಮೂಲಕ ಚಲಿಸುವ ಈ ರೈಲು ಪ್ರಾರಂಭವಾಗಿತ್ತು. ಆನಂತರ ಮುಂಬೈನಲ್ಲೂ ಪ್ರಾರಂಭಿಸಲಾಗಿತ್ತು. ಚೆನ್ಯೈ ಮೆಟ್ರೊ ನಿಗಮವು ಸಹ ಚಾಲಕ ರಹಿತ ಮೆಟ್ರೊ ರೈಲನ್ನು ಮುಂದಿನ ತಿಂಗಳು ಪ್ರಾರಂಭಿಸುತ್ತಿದೆ.
ಚಾಲಕನಿಲ್ಲದ ಮೆಟ್ರೊ ಸಂಚಾರ ಪ್ರಾರಂಭವಾದ ನಂತರ ಮೂರು ವರ್ಷಗಳ ಕಾಲ ಅಟೆಂಡರ್ ಇರುತ್ತಾರೆ.ತುರ್ತು ಸಂದರ್ಭಗಳಲ್ಲಿ ಅವರು ಕಾರ್ಯನಿರ್ವಹಿಸುತ್ತಾರೆ ಇಲ್ಲ ಎಂಬುದು ಖಚಿತವಾದ ಮೇಲೆ ಅಟೆಂಡರ್ ಕೂಡ ಇರುವುದಿಲ್ಲ ಎಂದು ಮೆಟ್ರೊ ಅಧಿಕಾರಿಗಳು ಹೇಳಿದ್ದಾರೆ. ಹಳದಿ ಮಾರ್ಗದಲ್ಲಿ ಒಮ್ಮೆ ಆರಂಭಗೊಂಡರೆ ಮುಂದೆ ನೀಲಿ ಮಾರ್ಗಕ್ಕೂ ವಿಸ್ತರಣೆಗೊಳ್ಳಲಿದೆ. ಈಗಿರುವ ಹಸಿರು ಮತ್ತು ನೇರಳೆ ಮಾರ್ಗದಲ್ಲಿಯೂ ಈ ವ್ಯವಸ್ಥೆ ಅಳವಡಿಸಲು ಬಿಎಂಆರ್‌ಸಿಎಲ್ ಚಿಂತನೆ ನಡೆಸುತ್ತಿದೆ.