ವಿಜಯಪುರ: ಹೊಸ್ತಿಲ ಬಳಿ ನವಜಾತ ಮೃತ ಶಿಶುವೊಂದು ವಿಜಯಪುರ ಖಾಸಗಿ ರಾಮಕೃಷ್ಣ ಆಸ್ಪತ್ರೆಯ ಹಿಂಬದಿಯ ಬಿ.ಜಿ. ಪೊಲೀಸ್ ಪಾಟೀಲ ಎಂಬುವವರ ಮನೆಯಲ್ಲಿ ಪತ್ತೆಯಾಗಿದೆ. ಚಾಲುಕ್ಯ ನಗರದ ಮನೆಯಲ್ಲಿ ಬಾಡಿಗೆ ಇರುವ ವೇಳೆ ವಿದ್ಯಾರ್ಥಿನಿಯರು ಬಾಗಿಲು ತೆಗೆದಾಗ ಘಟನೆ ಬೆಳಕಿಗೆ ಬಂದಿದೆ. ಹೊಸ್ತಿಲ
ವಿಜಯಪುರ ನಗರದ ಚಾಲುಕ್ಯ ನಗರದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ನಡೆದಿದೆ. ಆಸ್ಪತ್ರೆಯಲ್ಲಿ ಹೆರಿಗೆಯಾಗಿರುವ ಕ್ಲಿಪ್ ಜೊತೆಯಲ್ಲಿ ಗಂಡುಮಗುವನ್ನುಇಟ್ಟಿದ್ದಾರೆ. ನವಜಾತ ಮಗುವಿನ ದೇಹದ ಮೇಲೆ ಕಪ್ಪು ಕಪ್ಪು ಕಲೆಗಳು ಇದ್ದು ಅನಾರೋಗ್ಯ ಕಾರಣದಿಂದಾಗಿ ಮೃತಪಟ್ಟಿದ್ದು ಆ ಕಾರಣಕ್ಕೆ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಸೂರಜ್ ರೇವಣ್ಣ ವಿರುದ್ಧ ದೂರು ನೀಡಿದವನ ವಿರುದ್ಧ ಎಫ್‌ಐಆರ್
ಮೃತ ಮಗುವನ್ನು ಕಂಡು ವಿದ್ಯಾರ್ಥಿನಿಯರು ಗಾಬರಿಯಾಗಿದ್ದು, ಅವರು ಪೊಲೀಸರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದರು. ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ನೋಡಿ: ವಚನ ವಾಣಿ – 01 ಅರ್ಚನೆ ಪೂಜನೆ ನೇಮವಲ್ಲ, ಮಂತ್ರ ತಂತ್ರ ನೇಮವಲ್ಲ – ಡಾ. ಮೀನಾಕ್ಷಿ ಬಾಳಿ Janashakthi Media