ಜೈಪುರ: ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಪೊಲೀಸ್ ಕಾನ್‌ಸ್ಟೆಬಲ್‌ನನ್ನು ಮಂಚಕ್ಕೆ ಕಟ್ಟಿ ಸ್ಥಳೀಯರು ಥಳಿಸಿರುವ ಘಟನೆ ನಡಿದಿದೆ.
ಮಂಗಳವಾರ ರಾತ್ರಿ ಕಾನ್‌ಸ್ಟೆಬಲ್ ಮಹೇಶ್ ಕುಮಾರ್ ಗುರ್ಜರ್ 30 ವರ್ಷದ ಮಹಿಳೆ ಮನೆಯಲ್ಲಿ ಒಂಟಿಯಾಗಿದುವಾಗ ಆಕೆಯ ಮನೆಗೆ ನುಗ್ಗಿ ಅತ್ಯಾಚಾರವೆಸಗಿದ್ದಾನೆ.ಆಕೆ ಕಿರುಚಿಕೊಂಡಾಗ ನೆರೆಹೊರೆಯವರು ನರೆವಿಗೆ ಬಂದು ಆರೋಪಿಯನ್ನು ಹಿಡಿದಿದ್ದಾರೆ.ಅಷ್ಟರಲ್ಲಿ ಆಕೆಯ ಕುಟುಂಬಸ್ಥರು ಆತನನ್ನು ಮಂಚಕ್ಕೆ ಕಟ್ಟಿ ಥಳಿಸಿದ್ದಾರೆ ಎಂದು ಸರ್ಕಲ್ ಆಫೀಸರ್ (ಸಿಓ) ಈಶ್ವರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ಹಾಸನ ಜಿಲ್ಲೆಯ ವಡೂರು ಗ್ರಾಮದಲ್ಲಿ ಮತ್ತೆ ಮುಂದುವರೆದ ಕಾಡಾನೆ ದಾಳಿ ಮಹಿಳೆ ಸಾವು
ಘಟನೆಯ ಬಗ್ಗೆ ಮಾಹಿತಿ ಪಡೆದ ಬಸ್ವಾ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗುರ್ಜರ್ ಅವರನ್ನು ವೈದ್ಯಕೀಯ ಪರೀಕ್ಷೆಗ ಕರೆದೊಯ್ಯಿದ್ದು,ಬಳಿಕ ಗುರ್ಜರ್ ಅವರನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ಸಿಂಗ್ ಹೇಳಿದ್ದಾರೆಎ. ಘಟನೆ ಸಂಭಂಧ ವಿವಾಹಿತ ಮಹಿಳೆ ದೂರು ನೀಡಿದ್ದಾರೆ.
ಮಹಿಳೆ ಪೊಲೀಸರಿಗೆ ಗುರುವಾರ ದೂರು ನೀಡಿದ ಬಳಿಕ ವಿಚಾರ ತಿಳಿದು ಬಂದಿದೆ.ಮಂಗಳವಾರವೇ ಈ ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದ ಬಸ್ವಾ ಪೊಲೀಸ್ ಠಾಣೆಯ ಠಾಣಾಧಿಕಾರಿ ಮತ್ತು ಕಾನ್‌ಸ್ಟೆಬಲ್ ಗುರ್ಜರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.ಆರೋಪಿ ಕಾನ್‌ಸ್ಟೆಬಲ್ ಪರಾರಿಯಾಗಿದ್ದು,ಆತನಿಗಾಗಿ ಬಲೆ ಬೀಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.