ಬೆಂಗಳೂರು: ನಗರದಲ್ಲಿ ಕುಡಿಯುವ ನೀರು ಪೋಲು ಮಾಡದಂತೆ ಜಲಮಂಡಳಿ ಖಡಕ್ ಆದೇಶ ಮಾಡಿದ್ದರೂ ವ್ಯರ್ಥ ಮಾಡಿದಂತ 112 ಮಂದಿಯ ವಿರುದ್ಧ ಕೇಸ್ ದಾಖಲಿಸಲಾಗಿದೆ. ಅಲ್ಲದೇ 5.60 ಲಕ್ಷ ದಂಡವನ್ನು ಒಂದೇ ವಾರದಲ್ಲಿ ವಸೂಲಿ ಮಾಡಿದ್ದಾರೆ. ಬೆಂಗಳೂರು
ಈ ಬಗ್ಗೆ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರಾದಂತ ಡಾ.ರಾಮ್ ಪ್ರಸಾದ್ ಮನೋಹರ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಪ್ರಧಾನ ಕಾರ್ಯದರ್ಶಿಯಾಗಿ ಶಕ್ತಿಕಾಂತ್ ದಾಸ್ ನೇಮಕ
ಅದರಲ್ಲಿ ಬೆಂಗಳೂರಲ್ಲಿ ಫೆ.17ರಂದು ಅನಗತ್ಯವಾಗಿ ನೀರು ಪೋಲು ಮಾಡದಂತೆ ಆದೇಶ ಮಾಡಲಾಗಿತ್ತು. ಈ ಮೂಲಕ ನೀರಿನ ಕೊರತೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿತ್ತು ಎಂದಿದ್ದಾರೆ.
ಅನಗತ್ಯವಾಗಿ ನೀರು ಪೋಲು ಮಾಡುವುದನ್ನು ತಡೆಗಟ್ಟುವುದು ನಮ್ಮ ಉದ್ದೇಶವಾಗಿದೆ. ಈ ಆದೇಶವನ್ನು ಮೀರಿ ನಗರದಲ್ಲಿ ವಾಹನ ಸ್ವಚ್ಛಗೊಳಿಸೋದಕ್ಕೆ, ಕೈತೋಟಕ್ಕೆ, ಕಟ್ಟಡ ನಿರ್ಮಾಣ ಸೇರಿ ಇತರೆ ಕಾರಣಕ್ಕೆ ಕುಡಿಯುವ ನೀರು ಪೋಲು ಮಾಡಿರುವುದು ಕಂಡು ಬಂದಿದೆ. ಅಂತವರ ವಿರುದ್ಧ 112 ಕೇಸ್ ದಾಖಲಿಸಲಾಗಿದೆ. 5.60 ಲಕ್ಷ ದಂಡವನ್ನು ವಸೂಲಿ ಮಾಡಲಾಗಿದೆ ಎಂಬುದಾಗಿ ತಿಳಇಸಿದ್ದಾರೆ.
ಇದನ್ನೂ ನೋಡಿ: ನಶಿಸಿಹೋಗುತ್ತಿರುವ ಕನ್ನಡ ಶಾಲೆಗಳು – ಪುರುಷೋತ್ತಮ ಬಿಳಿಮಲೆ ಕಳವಳJanashakthi Media