ಕಾರು ಅಪಘಾತವನ್ನು ಹಲ್ಲೆಯೆಂದು ಬಿಂಬಿಸಿದ ಬಿಜೆಪಿ ಮುಖಂಡ| ಮಣಿಕಂಠ ರಾಠೋಡ್ ಪೋಲಿಸರ ವಶಕ್ಕೆ

ಕಲಬುರಗಿ : ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಾರು ಅಪಘಾತವನ್ನೇ ಹಲ್ಲೆ ಮಾಡಿದ್ದಾರೆಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆರೋಪಿಸಿದ್ದ ಮಣಿಕಂಠ ರಾಠೋಡ್ ಅಸಲಿಯತ್ತು ಬಯಲಾಗಿದೆ.

ಅಪಘಾತದಲ್ಲಿ ಆಗಿದ್ದ ಗಾಯವನ್ನು ತೋರಿಸಿ ಹಲ್ಲೆ ಮಾಡಿದ್ದಾರೆ ಎಂದು ಕಥೆ ಕಟ್ಟಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ನನ್ನು ಪೋಲಿಸರು ನಗರದ ಭಾರತ ಪ್ರೈಡ್‌ ಅಪಾಟ್ಮೆಂಟ್‌ನಲ್ಲಿ ಮತ್ತೆ ವಶಕ್ಕೆ ಪಡೆದುಕೊಂಡಿದ್ದಾರೆ.

ಅಪಘಾತವನ್ನು ಕೊಲೆ ಯತ್ನ ಎಂದು ಬಿಂಬಿಸಿದ್ದ ಅಸಲಿಯತ್ತು ಪೋಲಿಸರ ತನಿಖೆಯಲ್ಲಿ ಬಯಲಾಗಿತ್ತು. ಇದರ ಬೆನ್ನೆಲೆ ಇಂದು ಸುದ್ದಿಗೋಷ್ಠಿ ಕರೆದಿದ್ದರು. ಆದ್ರೆ ಪೋಲಿಸರು ಸುದ್ದಿಗೋಷ್ಠಿ ನಡೆಸುವ ಮುನ್ನವೇ ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರು ಅಪಘಾತವನ್ನ ರಾಜಕೀಯವಾಗಿ ಬಳಸಿಕೊಳ್ಳಲು ಕಥೆ ಕಟ್ಟಿದ ಮಣಿಕಂಠ ರಾಠೋಡ್, ನವೆಂಬರ್ 18 ರಂದು ಮಧ್ಯರಾತ್ರಿ ಹಲ್ಲೆ ಮಾಡಿದ್ದಾರೆ ಎಂದು ಮಣಿಕಂಠ ಹೇಳಿದ್ದ. ಅದಲ್ಲದೇ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದ. ಅಷ್ಟೇ ಅಲ್ಲದೇ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಆದ್ರೆ, ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸಿದಾಗ ಮಣಿಕಂಠ ರಾಠೋಡ್ ಕಟ್ಟು ಕಥೆಯ ಸತ್ಯಾಂಶ ಬಯಲಿಗೆ ಬಂದಿದೆ. ಇದರೊಂದಿಗೆ ಮಣಿಕಂಠ, ಪ್ರಿಯಾಂಕ್ ಖರ್ಗೆ ಮೇಲೆ ಗೂಬೆ ಕೂರಿಸಲು ಹೋಗಿ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ:ಚಿತ್ತಾಪುರ: ಬಿಜೆಪಿ ವಿಧಾನಸಭಾ ಅಭ್ಯರ್ಥಿ ಮಣಿಕಂಠ ರಾಠೋಡ್‌ ಅರೆಸ್ಟ್‌

ಮಣಿಕಂಠ ರಾಠೋಡ್​ನ ಅಸಲಿ ಕಥೆ ಹೀಗಿದೆ

ಬಿಜೆಪಿ ಮಣಿಕಂಠ ರಾಠೋಡ್ ಮೇಲಿನ ಹಲ್ಲೆ ದೂರು ಗಂಭೀರವಾಗಿ ಪರಿಗಣಿಸಿದ್ದ ಶಹಬಾದ್ ಪೊಲೀಸರು, ಈ ಪ್ರಕರಣವನ್ನ ಬೆನ್ನತ್ತಿ ಹೋದಾಗ ಅಸಲಿಯತ್ತು ಬಟಾಬಯಲಾಗಿದೆ. ಮಣಿಕಂಠ ರಾಠೋಡ್ ಇನ್ನೋವಾ ಕ್ರಿಸ್ಟಾ ವೈಟ್ ಕಲರ್ ಕಾರು ಯಾದಗಿರಿ ಜಿಲ್ಲೆಯ ಚೆಪಟ್ಲಾ ಬಳಿ ಅಪಘಾತವಾಗಿತ್ತು. ನವಂಬರ್ 18 ರ ಮಧ್ಯರಾತ್ರಿ ಕಾರು ಮರಕ್ಕೆ ಡಿಕ್ಕಿಯಾಗಿತ್ತು. ಮರಕ್ಕೆ ಡಿಕ್ಕಿ ಹೊಡೆದ ಹಿನ್ನಲೆ‌ ಕಾರಿನಲ್ಲಿದ್ದ ಮಣಿಕಂಠ ರಾಠೋಡ್ ಗಾಯಗೊಂಡಿದ್ದ. ಗಾಯಗೊಂಡ ಮಣಿಕಂಠ ರಾಠೋಡ್ ತನ್ನ ಮತ್ತೊಂದು ಕಾರಿನಲ್ಲಿ ತೆರಳಿದ್ದ. ಇನ್ನು ಅಪಘಾತಗೊಂಡ ಇನ್ನೋವಾ ಕ್ರಿಸ್ಟಾ ಕಾರನ್ನು ಟೋಯಿಂಗ್ ಮೂಲಕ ರಾತ್ರೋ ರಾತ್ರಿ ಹೈದರಾಬಾದ್ ಶಿಫ್ಟ್ ಮಾಡಿಸಿದ್ದ.

ತನ್ನ ಮತ್ತೊಂದು ಕಾರಿನಲ್ಲಿ ಚಿತ್ತಾಪುರಕ್ಕೆ ಆಗಮಿಸಿದ್ದ ಮಣಿಕಂಠ ರಾಠೋಡ್, ಚಿತ್ತಾಪುರದಿಂದ ಕಲಬುರಗಿಗೆ ಬರುವಾಗ ಹಲ್ಲೆ ಮಾಡಲಾಗಿದೆ ಎಂದು ಕಥೆ ಕಟ್ಟಿದ್ದ. ತನ್ನದೆ ಕಾರಿನ ಗಾಜನ್ನ ಒಡೆದು ಹಾಕಿ ಏಳೆಂಟು ದುಷ್ಕರ್ಮಿಗಳಿಂದ ಹಲ್ಲೆಯಾಗಿದೆ ಎಂದು ಸೀನ್ ಕ್ರಿಯೇಟ್ ಮಾಡಿದ್ದಾನೆ. ಬಳಿಕ ಚಿತ್ತಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಆಗಿದ್ದ. ಆದ್ರೆ, ಮಣಿಕಂಠ ರಾಠೋಡ್ ಕಾರಿನಲ್ಲಿ ಬರುವಾಗ ಹಲ್ಲೆಯಾದ ಕಾರಿನಲ್ಲಿ ಒಂದೇ ಒಂದು ಹನಿ ರಕ್ತ ಬಿದ್ದಿರಲಿಲ್ಲ.

ಇನ್ನು ಮಣಿಕಂಠ ರಾಠೋಡ್ ಕಾಲ್ ರೇಕಾರ್ಡ್ ಹಿಸ್ಟರಿ ಟೆಕ್ನಿಕಲ್ ಎವಿಡೆನ್ಸ್ ಬೆನ್ನತ್ತಿದಾಗ ಹಲ್ಲೆಯ ಕಥೆ ಅಪಘಾತದ ಕಥೆಯಾಗಿ ಬಯಲಾಗಿದೆ. ಹಲ್ಲೆ ಪ್ರಕರಣ ಬೇಧಿಸಿದ ಬಳಿಕ ಮಣಿಕಂಠ ರಾಠೋಡ್ ಜೊತೆಗಿದ್ದವನನ್ನ ವಿಚಾರಣೆ ನಡೆಸಿದಾಗ ಅಪಘಾತದ ಕಥೆ ಬಿಚ್ಚಿಟ್ಟಿದ್ದಾನೆ. ಇದರೊಂದಿಗೆ ಅಪಘಾತವನ್ನ ರಾಜಕೀಯವಾಗಿ ಬಳಸಿಕೊಳ್ಳಲು ಹೋಗಿ ಮಣಿಕಂಠ ರಾಠೋಡ್ ಸಿಕ್ಕಿಬಿದ್ದಿದ್ದಾನೆ.

ಕಲಬುರಗಿ ಎಸ್ಪಿ ಸ್ಪಷ್ಟನೆ

ಇನ್ನು ಈ ಬಗ್ಗೆ ಸ್ಪಷ್ಟಪಡಿಸಿದ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಸಲು, ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರು ಶಹಬಾದ್ ತಾಲೂಕಿನ ಶಂಕರವಾಡಿ ಕ್ರಾಸ್ ಬಳಿ ಮಾರಣಾಂತೀಕ ಹಲ್ಲೆ ಆಗಿತ್ತು ದೂರು ನೀಡಿದ್ದರು‌. ಅವರ ದೂರಿನ್ವಯ ಶಹಬಾದ್ ಠಾಣೆಯಲ್ಲಿ 307 ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಆದ್ರೆ ಸಾಕ್ಷಿಗಳ ವಿಚಾರಣೆ ಬಳಿಕ ಅದು ಕೊಲೆಯತ್ನ ಅಲ್ಲ. ಬದಲಾಗಿ ಅಪಘಾತ ಆಗಿದೆ ಎನ್ನುವುದು ಗೊತ್ತಾಗಿದೆ.. ಗುರುಮಿಠಕಲ್ ಬಳಿ ಅಪಘಾತವಾಗಿತ್ತು. ಮರಕ್ಕೆ ಡಿಕ್ಕಿ ಹೊಡೆದು ರಾಠೋಡ್ ಗೆ ಗಾಯವಾಗಿತ್ತು. ಸದ್ಯ ಪ್ರಕರಣ ತನೀಖೆಯಲ್ಲಿದೆ. ಕೆಲ ಪ್ರತ್ಯೇಕ್ಷ ಸಾಕ್ಷಿದಾರರು,ಕೆಲ ಟೆಕ್ನಿಕಲ್ ಸಾಕ್ಷ್ಯ ಸಂಗ್ರಹಿಸಿದ್ದೆವೆ ಎಂದು ಸ್ಪಷ್ಟಪಡಿಸಿದರು.

ವಿಡಿಯೋ ನೋಡಿ:ಮಣಿಪುರ ಧಗಧಗಿಸುತ್ತಿರುವುದೇಕೆ? ಕೈ ಕೊಟ್ಟ ಡಬಲ್‌ ಇಂಜಿನ್‌ ಸರ್ಕಾರ! Janashakthi Media

Donate Janashakthi Media

Leave a Reply

Your email address will not be published. Required fields are marked *