ಜೂನಿಯರ್ ಹಾಕಿ ವಿಶ್ವಕಪ್​ ಟೂರ್ನಿಯಲ್ಲಿ ಗೆಲುವು ಸಾಧಿಸಿದ ಭಾರತ

ಸ್ಯಾಂಟಿಯಾಗೊ: ಜೂನಿಯರ್ ಹಾಕಿ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಮಹಿಳಾ ಮತ್ತು ಪುರುಷ ತಂಡಗಳು ಗೆಲುವು ಸಾಧಿಸಿವೆ. ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಪುರುಷರ ಪಂದ್ಯಾವಳಿಯಲ್ಲಿ ಭಾರತ ತಂಡ ಕೊರಿಯಾವನ್ನು 4-2 ರಲ್ಲಿ ಸೋಲಿಸಿದರೆ, ಚಿಲಿಯ ಸ್ಯಾಂಟಿಯಾಗೋದಲ್ಲಿ ನಡೆದ ಪಂದ್ಯದಲ್ಲಿ ಮಹಿಳಾ ಹಾಕಿ ಪಡೆ ನ್ಯೂಜಿಲ್ಯಾಂಡ್​ ವಿರುದ್ಧ ಪೆನಾಲ್ಟಿ ಶೂಟೌಟ್​ನಲ್ಲಿ 3-2 ರಲ್ಲಿ ಗೆಲುವು ಸಾಧಿಸಿತು.

ಅರೈಜೀತ್ ಸಿಂಗ್ ಹ್ಯಾಟ್ರಿಕ್​​: ಮಲೇಷ್ಯಾದಲ್ಲಿ ನಡೆಯುತ್ತಿರುವ ಪುರುಷರ ಜೂನಿಯರ್ ಹಾಕಿ ವಿಶ್ವಕಪ್​-2023ರಲ್ಲಿ ಭಾರತ ತಂಡ ಗೆಲುವಿನ ಶುಭಾರಂಭ ಕಂಡಿದೆ. ಮೊದಲ ಪಂದ್ಯದಲ್ಲಿ ಫಾರ್ವರ್ಡ್ ಆಟಗಾರ ಅರೈಜೀತ್ ಸಿಂಗ್ ಹುಂಡಾಲ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತದ ಜೂನಿಯರ್ ಪುರುಷರ ಹಾಕಿ ತಂಡವು ಏಷ್ಯಾ ತಂಡವಾದ ಕೊರಿಯಾವನ್ನು 4-2 ಗೋಲುಗಳ ಅಂತರದಿಂದ ಸೋಲಿಸಿತು.

ಅರೈಜೀತ್ 11, 16, 41ನೇ ನಿಮಿಷದಲ್ಲಿ ಮೂರು ಬಾರಿ ಗೋಲು ಹೊಡೆದರೆ, ಅಮನ್​ದೀಪ್ 30ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಕೊರಿಯಾ ಪರವಾಗಿ ಡೊಹ್ಯುನ್ ಲಿಮ್ 38ನೇ, ಮಿಂಕ್ವಾನ್ ಕಿಮ್ 45 ನೇ ನಿಮಿಷದಲ್ಲಿ ಗೋಲು ಗಳಿಸಿದರು.

ಶೂಟೌಟ್‌ನಲ್ಲಿ ಭಾರತೀಯ ಮಹಿಳೆಯರು ಆರಂಭಿಕ ಎರಡು ಹೊಡೆತಗಳನ್ನು ಕೈಚೆಲ್ಲಿದರು. ಆದರೆ, ತಂಡದ ಗೋಲ್‌ಕೀಪರ್ ಮಾಧುರಿ ಕಿಂಡೋ ನಾಲ್ಕು ಬ್ಯಾಕ್ ಟು ಬ್ಯಾಕ್ ಗೋಲುಗಳನ್ನು ತಡೆಯುವ ಮೂಲಕ ತಂಡವು ಪುಟಿದೇಳುವಂತೆ ಮಾಡಿದರು. ಕೊನೆಯಲ್ಲಿ ತಂಡ 3-2 ಗೋಲಿನಿಂದ ವಿಜಯ ಸಾಧಿಸಿದೆ.

Donate Janashakthi Media

Leave a Reply

Your email address will not be published. Required fields are marked *