ದೇವಸ್ಥಾನ ಶಬ್ಧ ಮಾಲಿನ್ಯ ಮಾಡುವುದಿಲ್ಲವೆ? | ಆಜಾನ್‌ ಧ್ವನಿವರ್ಧಕ ನಿಷೇಧ ಮಾಡುವಂತೆ ಆಗ್ರಹಿಸಿದ್ದ ಅರ್ಜಿ ಹೈಕೋರ್ಟ್‌ನಿಂದ ವಜಾ

ಅಹ್ಮದಾಬಾದ್: ಮಸೀದಿಗಳ ಆಜಾನ್‌ಗೆ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಗುಜರಾತ್ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ದೇವಸ್ಥಾನದಲ್ಲಿ, ಡೋಲು ಮತ್ತು ಸಂಗೀತದೊಂದಿಗೆ ಬೆಳಗಿನ ಆರತಿಯು 3 ಗಂಟೆಗೆ ಬೇಗನೆ ಪ್ರಾರಂಭವಾಗುತ್ತದೆ, ಅದು ಶಬ್ದವನ್ನು ಉಂಟುಮಾಡುವುದಿಲ್ಲವೇ? ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್‌ವಾಲ್ ಮತ್ತು ನ್ಯಾಯಮೂರ್ತಿ ಅನಿರುದ್ಧ ಪಿ.ಮಯೀ ಅವರ ಪೀಠವು ಅರ್ಜಿಯನ್ನು “ಸಂಪೂರ್ಣ ತಪ್ಪು ಕಲ್ಪನೆ” ಎಂದು ಬಣ್ಣಿಸಿದ್ದು, ಅರ್ಜಿಯನ್ನು ವಜಾಗೊಳಿಸಿದೆ. ಧ್ವನಿವರ್ಧಕಗಳ ಮೂಲಕ ಆಜಾನ್‌ ಕೂಗುವುದು “ಶಬ್ದ ಮಾಲಿನ್ಯ” ಮಾಡುತ್ತದೆ ಎಂದು ಬಿಜೆಪಿಯ ಪರ ಸಂಘಟನೆಯಾದ ಬಜರಂಗದಳದ ನಾಯಕ ಶಕ್ತಿಸಿನ್ಹ್ ಝಾಲಾ ಅವರು ನ್ಯಾಯಾಲಯದಲ್ಲಿ ಪಿಐಎಲ್ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಉತ್ತರಾಖಂಡದ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ| ಕಾರ್ಯಚರಣೆ ಯಶಸ್ವಿ

ಮಸೀದಿಯ ಆಜಾನ್‌ ಸಾಮಾನ್ಯ ಜನರ ಅದರಲ್ಲೂ ವಿಶೇಷವಾಗಿ ಮಕ್ಕಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ, ಜೊತೆಗೆ ಇತರ ಅನಾನುಕೂಲತೆಗಳನ್ನು ಉಂಟುಮಾಡುತ್ತದೆ ಎಂದು ಬಜರಂಗದಳದ ನಾಯಕ ತನ್ನ ಅರ್ಜಿಯಲ್ಲಿ ಆರೋಪಿಸಿದ್ದರು. ಆದರೆ, ಅರ್ಜಿದಾರರ ಈ ಪ್ರತಿಪಾದನೆ ಪ್ರಾಯೋಗಿಕವಾಗಿಲ್ಲ ಎಂದು ಹೈಕೋರ್ಟ್ ಹೇಳಿದ್ದು, ಯಾವುದೆ ವೈಜ್ಞಾನಿಕ ಆಧಾರವನ್ನು ಹೊಂದಿಲ್ಲ ಎಂದು ಹೇಳಿದೆ.

“ಅಜಾನ್ ಸಾಮಾನ್ಯವಾಗಿ ಗರಿಷ್ಠ 10 ನಿಮಿಷಗಳವರೆಗೆ ಇರುತ್ತದೆ, ಇದು ಗಮನಾರ್ಹವಾದ ಶಬ್ದ ಮಾಲಿನ್ಯದ ಅಪಾಯವನ್ನು ಉಂಟುಮಾಡುವ ಡೆಸಿಬಲ್ ಮಟ್ಟವನ್ನು ತಲುಪುವ ಸಾಧ್ಯತೆಯಿಲ್ಲ” ಎಂದು ಪೀಠವು ತನ್ನ ತೀರ್ಪಿನಲ್ಲಿ ಒತ್ತಿಹೇಳಿದೆ.

ಇದನ್ನೂ ಓದಿ: ಕರ್ನಾಟಕದ ಗ್ಯಾರಂಟಿ ಅಲೆ ತೆಲಂಗಾಣದಲ್ಲೂ ಬಿಸುತ್ತಿದೆ: ಸಿಎಂ ಸಿದ್ದರಾಮಯ್ಯ

“ಆಜಾನ್‌ ಸಮಯದಲ್ಲಿ ಧ್ವನಿವರ್ಧಕಗಳ ಮೂಲಕ ವರ್ಧಿಸಿದ ಧ್ವನಿಯು ಸಾಕಷ್ಟು ಡೆಸಿಬಲ್‌ಗಳನ್ನು ಉತ್ಪಾದಿಸುತ್ತದೆ, ಇದು ಸಾರ್ವಜನಿಕ ಆರೋಗ್ಯದ ಮೇಲೆ ಅಪಾಯವನ್ನು ಉಂಟುಮಾಡುತ್ತದೆ” ಎಂಬ ಅರ್ಜಿದಾರನ ಹೇಳಿಯನ್ನು ಸಮರ್ಥಿಸಲು ನ್ಯಾಯಾಲಯ ನಿರಾಕರಿಸಿತು.

ಅದೇ ವೇಳೆ ದೇವಾಲಯದ ಆಚರಣೆಗಳ ಸಮಯದಲ್ಲಿ ಗಂಟೆಗಳು ಮತ್ತು ಇತರ ಶಬ್ದಗಳ ಬಗ್ಗೆ ನ್ಯಾಯಾಲಯವು ಅರ್ಜಿದಾರರ ವಕೀಲರನ್ನು ಪ್ರಶ್ನಿಸಿದೆ. “ನಿಮ್ಮ ದೇವಸ್ಥಾನದಲ್ಲಿ, ಡೋಲು ಮತ್ತು ಸಂಗೀತದೊಂದಿಗೆ ಬೆಳಗಿನ ಆರತಿಯು 3 ಗಂಟೆಗೆ ಬೇಗನೆ ಪ್ರಾರಂಭವಾಗುತ್ತದೆ. ಅದು ಶಬ್ದವನ್ನು ಉಂಟುಮಾಡುವುದಿಲ್ಲವೇ?” ಎಂದು ನ್ಯಾಯಾಲಯ ಕೇಳಿದೆ.

ವಿಡಿಯೊ ನೋಡಿ: ದುಡಿಯುವ ಜನರ ಐಕ್ಯ ಹೋರಾಟ ರೂಪಗೊಂಡಿದ್ದು ಹೇಗೆ? – ಎಚ್.ಆರ್. ನವೀನ್ ಕುಮಾರ್ ಜೊತೆ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *