ಕೃಷಿ ಕಾರ್ಮಿಕರಿಗೆ ದಿನಗೂಲಿ: ಮಧ್ಯಪ್ರದೇಶ ಮತ್ತು ಗುಜರಾತಿನಲ್ಲಿ ಅತ್ಯಂತ  ಕಡಿಮೆ, ಕೇರಳದಲ್ಲಿ ಅತ್ಯಂತ ಹೆಚ್ಚು- ಆರ್‌ಬಿಐ ವರದಿ

ರಿಸರ್ವ್ ಬ್ಯಾಂಕ್‌ನ ಹಣಕಾಸು ವರ್ಷ (FY) 2022-23ರ ಇತ್ತೀಚಿನ ವರದಿಯ ಪ್ರಕಾರ  ಒಬ್ಬ ಪುರುಷ ಕೃಷಿ  ಕಾರ್ಮಿಕನಿಗೆ ದೇಶದಲ್ಲಿ ಸಿಗುವ ಸರಾಸರಿ ದಿನಗೂಲಿ  ರೂ. 345.70. ಅಂದರೆ ತಿಂಗಳಿಗೆ 25 ದಿನಗಳ ಕೆಲಸ ದೊರೆತರೂ ತಿಂಗಳ ಗರಿಷ್ಟ ಆದಾಯ ರೂ.8640 ಆದರೆ ಮಧ್ಯಪ್ರದೇಶದಲ್ಲಿಇದು ರೂ. 229.20  ಮತ್ತು ಗುಜರಾತ್‌ನಲ್ಲಿ ರೂ.241.90, ಅಂದರೆ ಮಾಸಿಕ ಗರಿಷ್ಟ ವರಮಾನ ಅನುಕ್ರಮವಾಗಿ 5,730 ರೂ. ಮತ್ತು  ಗುಜರಾತ್‌ನಲ್ಲಿ 6,047 ರೂ. ಇಡೀ ದೇಶದಲ್ಲೇ ಕೃಷಿ ಕೂಲಿಕಾರರಿಗೆ ಅತ್ಯಂತ ಕಡಿಮೆ ಕೂಲಿಯಿರುವ ರಾಜ್ಯಗಳಿವು-ಎರಡೂ ಬಿಜೆಪಿ ಆಳ್ವಿಕೆಯ ರಾಜ್ಯಗಳು. ಒಂದಂತೂ ಬಿಜೆಪಿ ‘ಮಾದರಿ’ ರಾಜ್ಯ!

ಕ್ರಿಸಿಲ್ ರೇಟಿಂಗ್ ಸಂಸ್ಥೆ  ಪ್ರಕಾರ, ಒಂದು ಸಸ್ಯಾಹಾರಿ ಊಟಕ್ಕೆ  ರೂ 27.9 ಅಥವಾ  5 ಸದಸ್ಯರಿರುವ ಒಂದು ಕೃಷಿ ಕಾರ್ಮಿಕರ ಕುಟುಂಬಕ್ಕೆ ಎರಡು ಹೊತ್ತು ಸಸ್ಯಾಹಾರೀ ಊಟಕ್ಕೆ  ತಿಂಗಳಿಗೆ ರೂ.8,400  ಬೇಕು.  ಮಾಂಸಾಹಾರಿ ಊಟಕ್ಕೆ ಥಾಲಿಗೆ ರೂ. 61.40 ಎಂದು ಲೆಕ್ಕ ಹಾಕಲಾಗಿದೆ.ಅಂದರೆ ಇದು ಈ ಎರಡು ರಾಜ್ಯಗಳಲ್ಲಿ ಒಂದು ಸರಾಸರಿ ಕೃಷಿ ಕಾರ್ಮಿಕ ಕುಟುಂಬದ ಕೈಗೆಟುಕದ್ದು. ಅವರು ತಿಂಗಳ ಕೆಲವು ದಿನಗಳಲ್ಲಿ ಬರಿ ಹೊಟ್ಟೆಯಲ್ಲಿಬೇಕಾಗುತ್ತದೆ ಎಂದು ತೋರಿಸುತ್ತದೆ ಎಂದು ಸಿಐಟಿಯು ಮುಖಂಡ ಜೆ ಎಸ್‍ ಮಜುಂದಾರ್ ಲೆಕ್ಕ ಹಾಕಿದ್ದಾರೆ.

ಇದು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ದಿನಗೂಲಿ ಇರುವ ಎಲ್ಲ ರಾಜ್ಯಗಳ ಸಂದರ್ಭದಲ್ಲೂ ನಿಜ. ಇಂತಹ ಇತರ ಕೆಲವು ರಾಜ್ಯಗಳೆಂದರೆ, ಉತ್ತರ ಪ್ರದೇಶ – ರೂ 309.30; ಒಡಿಶಾ – ರೂ 285.10;  ಮಹಾರಾಷ್ಟ್ರ ರೂ. 303.50. ಇವುಗಳಲ್ಲಿ ಮಹಾರಾಷ್ಟ್ರ ಅತ್ಯಂತ ಹೆಚ್ಚು ಕೈಗಾರಿಕೀಕರಣಗೊಂಡಿರುವ ರಾಜ್ಯ ಎನಿಸಿಕೊಂಡಿದೆ ಎಂಬುದನ್ನು ಗಮನಿಸಬಹುದು.

ಇದನ್ನೂ ಓದಿ: ಮಹಾಧರಣಿ| ಸರ್ವಾಧಿಕಾರಿ ಮನೋಭಾವದ ಸರಕಾರಗಳಿಗೆ ದೇಶದ ಜನ ಪಾಠ ಕಲಿಸಿದ್ದಾರೆ – ಪ್ರೊ. ರವಿವರ್ಮಕುಮಾರ್‌

ಇನ್ನೊಂದೆಡೆಯಲ್ಲಿ,ಕೃಷಿ ಕೂಲಿಕಾರರಿಗೆ ರಾಷ್ಟ್ರೀಯ ಸರಾಸರಿಗಿಂತ ಮೇಲೆ,  ಅತ್ಯಧಿಕ ಕೂಲಿ ಸಿಗುವ ರಾಜ್ಯವೆಂದರೆ ಕೇರಳ. ಇಲ್ಲಿ ದಿನಗೂಲಿ ರೂ. 764.30, ಅಥವ ತಿಂಗಳಲ್ಲಿ 25 ದಿನಗಳ ಕೆಲಸಕ್ಕೆ ರೂ. 19,107.

ತುಲನಾತ್ಮಕವಾಗಿ ಹೆಚ್ಚು ಕೂಲಿ ಸಿಗುವ ಇತರ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ  ಜಮ್ಮು ಮತ್ತು ಕಾಶ್ಮೀರ (ರೂ. 550.40),ಹಿಮಾಚಲ ಪ್ರದೇಶ (ರೂ 473.3), ತಮಿಳುನಾಡು – (470 ರೂ.)  ಸೇರಿವೆ.

ಕೃಷಿಯೇತರ ಕಾರ್ಮಿಕರಿಗೂ

ಕೃಷಿಯೇತರ ಕಾರ್ಮಿಕರ ಸಂದರ್ಭದಲ್ಲಿಯೂ ಅತ್ಯಂತ ಕಡಿಮೆ ಕಡಿಮೆ ಸರಾಸರಿ ದಿನಗೂಲಿ ಮಧ್ಯಪ್ರದೇಶದಲ್ಲಿ ( ರೂ 246.3) ಮತ್ತು  ಗುಜರಾತ್ (ರೂ. 273.10) ಗಳಲ್ಲೇ ; ರಾಷ್ಟ್ರೀಯ ಸರಾಸರಿ 348 ರೂ.

ಕೃಷಿಯೇತರ  ಕಾರ್ಮಿಕರಿಗೆ  ಕೂಡ ರಾಷ್ಟ್ರೀಯ ಸರಾಸರಿಗಿಂತ  ಹೆಚ್ಚಿನ  ಕೂಲಿ/ವೇತನ-ವೇತನ ಸಿಗುವ ರಾಜ್ಯಗಳು ಕೇರಳ  ರೂ. 696.60; ಜಮ್ಮು ಮತ್ತು ಕಾಶ್ಮೀರ -ರೂ. 517.90; ತಮಿಳುನಾಡು – ರೂ 481.50; ಹರಿಯಾಣ –  ದಿನಕ್ಕೆ 451 ರೂ.

2022-23 ರಲ್ಲಿ ಕಟ್ಟಡ ಕಾರ್ಮಿಕರಿಗೆ ರೂ. 393.30 ರ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ದಿನಗೂಲಿಯ ರಾಜ್ಯಗಳಲ್ಲಿಯೂ ಎದ್ದು ಕಾಣುವ ಹೆಸರುಗಳೆಂದರೆ  ಗುಜರಾತ್ ಮತ್ತು ಮಧ್ಯಪ್ರದೇಶ. ಗುಜರಾತ್‌ನಲ್ಲಿ ಸರಾಸರಿ ವೇತನ – ರೂ 323.20; ಮಧ್ಯಪ್ರದೇಶದಲ್ಲಿ- ರೂ 278.70 ಮತ್ತ ತ್ರಿಪುರಾ – ರೂ 286.10.

ಹೆಚ್ಚಿನ ಕೂಲಿ ಸಿಗುವ ನೀಡುವ ರಾಜ್ಯಗಳಲ್ಲಿಯೂ ಅವೇ ಹೆಸರುಗಳನ್ನು ಕಾಣಬಹುದು. ಕೇರಳ – ರೂ 852.50; ಜಮ್ಮು & ಕಾಶ್ಮೀರ – 534.50; ತಮಿಳುನಾಡು –  ರೂ500.90; ಮತ್ತು ಹಿಮಾಚಲ ಪ್ರದೇಶ – ರೂ. 498.30.

ವಾಸ್ತವಿಕವಾಗಿ ನಿಜವಾದ ಗ್ರಾಮೀಣ ಕೂಲಿ ಬೆಳವಣಿಗೆ 2022-23ರಲ್ಲಿ  ಕೃಷಿಯಲ್ಲಿ ಸರಾಸರಿ 5.8% ಮಾತ್ರ.  ಕೃಷಿಯೇತರ ಇನ್ನೂ ಕಡಿಮೆ, 4.9 ಶೇ.

ವಿಡಿಯೋ ನೋಡಿ: ಮಹಾಧರಣಿ| ದುಡಿಯುವ ಜನರ ಜೊತೆ ಆಳುವವರ ಚೆಲ್ಲಾಟ Janashakthi Media

Donate Janashakthi Media

Leave a Reply

Your email address will not be published. Required fields are marked *