ಆಂಧ್ರಪ್ರದೇಶ: ಮಗಳ ಮದುವೆಗಾಗಿ ಕೂಡಿಟ್ಟ ಹಣ ಗೆದ್ದಲು ತಿಂದಿದ್ದು ಸುಮಾರು ಎರಡು ಲಕ್ಷದಷ್ಟು ಹಣ ಚಿಂದಿ ಚಿಂದಿಯಾಗಿದೆ.
ಆಂಧ್ರಪ್ರದೇಶದ ಮಾನ್ಯಂ ಜಿಲ್ಲೆಯ ಪಾರ್ವತಿಪುರಂ ಮಂಡಲದ ಪುತ್ತೂರಿನ ಆದಿಮೂಲಂ ಲಕ್ಷ್ಮಣ ರಾವ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಲಕ್ಷ್ಮಣರಾವ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರು ತಮ್ಮ ಹಿರಿಯ ಮಗಳನ್ನು ಒಳ್ಳೆಯ ವರನಿಗೆ ಮದುವೆ ಮಾಡಿಕೊಡಬೇಕೆಂದು ಬಯಸಿದ್ದರು. ಇದಕ್ಕಾಗಿ ಮನೆಯಲ್ಲಿದ್ದ ಟ್ರಂಕ್‌ನಲ್ಲಿ ಕವರ್‌ನಲ್ಲಿ ಐನೂರು, ನೂರರ ನೋಟುಗಳನ್ನು ಕೂಡಿಡುತ್ತಿದ್ದರು. ಎರಡು ವರ್ಷದಿಂದ ಎರಡು ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಕೂಡಿಡಲಾಗಿತ್ತು.
ಇದನ್ನೂ ಓದಿ : ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ ಖಂಡಿಸಿ SFI ಪ್ರತಿಭಟನೆ
ಲಕ್ಷ್ಮಣರಾವ್ ಅವರದ್ದು ಕೂಲಿ ಮಾಡಿ ಜೀವನ ಮಾಡುವ ಕುಟುಂಬ. ಕುಟುಂಬದಲ್ಲಿ ಇಬ್ಬರು ಹೆಣ್ಣು ಮಗಳಿದ್ದಾರೆ. ಅದರಲ್ಲಿ ಹಿರಿಯ ಮಗಳಿಗೆ ಚೆನ್ನಾಗಿ ಮದುವೆ ಮಾಡಿಕೊಡಬೇಕು ಅನ್ನುವುದು ಕುಟುಂಬದ ಆಸೆಯಾಗಿತ್ತು. ಅದಕ್ಕಾಗಿ ಕೂಲಿ ಮಾಡಿದ್ದರಿಂದಾಗಿ ಬಂದ ಹಣವನ್ನು ಪೆಟ್ಟಿಗೆಯೊಂದರಲ್ಲಿ ಭದ್ರವಾಗಿ ಕೂಡಿಡುತ್ತಿದ್ದರು. ಆದರೆ ಗೆದ್ದಲು ಹುಳಗಳು ಆ ಕುಟುಂಬದ ಕನಸನ್ನು ನುಚ್ಚುನೂರು ಮಾಡಿವೆ. ಕೂಡಿಟ್ಟಿದ್ದ ಹಣ ಎಲ್ಲವನ್ನು ಚಿಂದಿ ಚಿಂದಿ ಮಾಡಿಬಿಟ್ಟಿದ್ದು ಕುಟುಂಬ ಈಗ ಕಣ್ಣೀರು ಹಾಕುತ್ತಿದೆ.
ಇತ್ತೀಚೆಗಷ್ಟೆ, ಲಕ್ಷ್ಮಣರಾವ್ ಮನೆಯ ಮೇಲಿಂದ ಕಾಲು ಜಾರಿ ಬಿದ್ದು ಐದು ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಲಕ್ಷ್ಮಣರಾವ್ ಮಗಳ ಮದುವೆಗಾಗಿ ಹಣ ಕೂಡಿಡುತ್ತಿದ್ದದ್ದು ಮನೆಯಲ್ಲಿ ಯಾರಿಗೂ ತಿಳಿದಿರಲಿಲ್ಲ. ಕಣ್ಣೆದುರಿಗೆ ಕಂಡ ಆ ಹಣವನ್ನು ನೋಡಿ ಲಕ್ಷ್ಮಣನ ವೃದ್ಧ ಅಪ್ಪ-ಅಮ್ಮ ಕಣ್ಣೀರು ಹಾಕಿದರು. ಒಂದೆಡೆ ಸಂಸಾರಕ್ಕೆ ಒತ್ತಾಸೆ ನೀಡುತ್ತಲೇ ಮತ್ತೊಂದೆಡೆ ಮಗನ ಮೇರು ಜವಾಬ್ದಾರಿ ನೋಡಿದ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಲಕ್ಷ್ಮಣ್ ಮೃತಪಟ್ಟು ಐದು ತಿಂಗಳಾದರೂ ಮೃತ ಮಗ ಬಾಕ್ಸ್ ತೆರೆಯದಿರುವುದು ಈ ಅಚಾತುರ್ಯಕ್ಕೆ ಕಾರಣವಾಗಿದೆ. ಕೂಲಿಕಾರ್ಮಿಕರು ಕಷ್ಟಪಟ್ಟು ದುಡಿದ ಹಣ ಗೆದ್ದಲು ಬಾಧೆಯಿಂದ ಹೀಗಾಗಿದ್ದು, ನೋಟಿನ ಕಂತೆಗಳು ತುಂಡಾಗಿರುವುದನ್ನು ಕಂಡು ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ. ಒಂದೆಡೆ ಮಗನ ಸಾವು, ಮತ್ತೊಂದೆಡೆ ಮಗ ಪಟ್ಟಿದ್ದ ಕಷ್ಟ ಕಂಡು ವೃದ್ಧ ತಂದೆ-ತಾಯಿ ಇನ್ನಷ್ಟು ಕಂಗಾಲಾಗಿದ್ದಾರೆ.
ಈ ವಿಡಿಯೋ ನೋಡಿ : ಮಾನವೀಯತೆ ಜಾಗಕ್ಕೆ ಮತೀಯತೆ ಬಂದಿದೆ – ಬರಗೂರು ರಾಮಚಂದ್ರಪ್ಪ