ಬೆಂಗಳೂರು: ಬಿಜೆಪಿ ಅಥವಾ ಜೆಡಿಎಸ್ಗೆ ಮತ ಹಾಕಿದರೆ ಗ್ಯಾರಂಟಿ ಯೋಜನೆಗಳು ರದ್ದಾಗುತ್ತವೆ ಎಚ್ಚರ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಕಾರ್ಯಕರ್ತರಿಗೆ ಹೇಳಿದ್ದಾರೆ. ಬಿಜೆಪಿ
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ನಮ್ಮ ಗ್ಯಾರಂಟಿ ಯೋಜನೆಗಳು ಬಂದಾಗ ರಾಜ್ಯ ದಿವಾಳಿ ಆಗುತ್ತದೆ ಅಂತ ಬಿಜೆಪಿಯವರು ಬೊಬ್ಬೆ ಹೊಡೆದರು. ಈಗ ಅವರೇ ಗ್ಯಾರಂಟಿ ಕೊಡಲು ಹೊರಟಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆಯೆ? ದುಬೈಯಲ್ಲಿ ತಂತ್ರ ನಡೆಯುತ್ತಿದೆಯೆ?
ಶಕ್ತಿ ಯೋಜನೆಯ ಪ್ರಭಾವದಿಂದ ಹಾಸನಾಂಬೆ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಹದಿನಾಲ್ಕು ಕೋಟಿ ರೂಪಾಯಿ ಆದಾಯ ಬಂದಿದೆ. ಬಸ್ ಫ್ರೀ ಕೊಟ್ಟಿದ್ದರಿಂದಲೇ ಇಷ್ಟೊಂದು ಆದಾಯ ಜಾಸ್ತಿ ಆಗಿದೆ. ಗೃಹ ಲಕ್ಷ್ಮಿ ಯೋಜನೆಯು ಟೆಕ್ನಿಕಲ್ ಸಮಸ್ಯೆಯಿಂದ ಏಳು ಪರ್ಸೆಂಟ್ ಜನರಿಗೆ ತಲುಪಿಲ್ಲ. ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಯುವ ನಿಧಿ ಕೂಡಾ ಜಾರಿಗೆ ತರುತ್ತೇವೆ. ನೀವೆಲ್ಲ ಬಿಜೆಪಿ ಅಥವಾ ಜೆಡಿಎಸ್ಗೆ ಮತ ಹಾಕಿದರೆ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುತ್ತಾರೆ ಎಂದು ಜನರಿಗೆ ತಿಳಿಸಿ. ಆದರೆ, ಕಾಂಗ್ರೆಸ್ ಸರ್ಕಾರ ಇರುವವರೆಗೂ ಈ ಗ್ಯಾರಂಟಿಗಳನ್ನು ಹಿಂಪಡೆಯುವುದಿಲ್ಲ, ಬದಲಾವಣೆ ಮಾಡುವುದಿಲ್ಲ. ಇದು ನಿಶ್ಚಿತ ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ನಾನು ಡಿಸಿಎಂ ಆದಾಗ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಈ ವರ್ಷ ಎರಡು ಗ್ಯಾರಂಟಿ ಯೋಜನೆಗಳನ್ನು ತಂದರೆ ಸಾಕು ಎಂದು ಹೇಳಿದರು. ಆದರೆ, ನಾವು ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆವು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಇದನ್ನೂ ಓದಿ:ಹೆಚ್.ಡಿ. ಕುಮಾರಸ್ವಾಮಿಯವರ ಮಾನಸಿಕ ಸ್ವಾಸ್ತ್ಯವನ್ನು ಕಲಕಿದ ಹಾಗೆ ಕಾಣುತ್ತಿದೆ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಕುಮಾರಸ್ವಾಮಿ ಸ್ಥಿಮಿತ ಕಳೆದುಕೊಂಡಿದ್ದಾರೆ
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಸ್ಥಿಮಿತತೆಯನ್ನು ಕಳೆದುಕೊಂಡಿದ್ದಾರೆ. ನಾನು ಇಂದಿರಾಗಾಂಧಿ ಅವರ ಹೆಸರಿನಲ್ಲಿ ಥಿಯೇಟರ್ ನಡೆಸುತ್ತಿದ್ದೆ. ಮೂರು ಥಿಯೇಟರ್ಗಳು ಇದ್ದಾವೆ. ಮಾಧ್ಯಮದವರು ಜನರ ಬಳಿ ಸಮೀಕ್ಷೆ ನಡೆಸಲಿ ಬೇಕಿದ್ದರೆ, ಜನರೇ ಉತ್ತರ ಕೊಡುತ್ತಾರೆ. ಅವರು ದೊಡ್ಡವರು, ಅವರ ಸಂಸ್ಕೃತಿ ಅದು. ಅವರು ಮಾತಾಡುತ್ತಾರೆ ಅಂತ ನಾನು ಮಾತನಾಡಲು ಆಗಲ್ಲ. ಅವರ ಸ್ಥಾನಕ್ಕೆ ಗೌರವ ಇದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಟೆಂಟಲ್ಲಿ ಬ್ಲೂಫಿಲಂ ತೋರಿಸುತ್ತಿದ್ದಾರೆ ಎಂಬ ಹೇಳಿಕೆಗೆ ಈ ಮೂಲಕ ತಿರುಗೇಟು ನೀಡಿದ್ದಾರೆ. ಯೋಜನೆಗಳು
ಗ್ಯಾರಂಟಿ ಪರಿವೀಕ್ಷಣೆಗೆ ನ.28ಕ್ಕೆ ಸಮಿತಿ
ಗ್ಯಾರಂಟಿ ಯೋಜನೆಗಳ ಮೇಲ್ವಿಚಾರಣೆಗೆ ಜಿಲ್ಲಾ ಮಂತ್ರಿಗಳಿಗೆ ಉಸ್ತುವಾರಿ ನೀಡಲಾಗಿದೆ. ಗ್ಯಾರಂಟಿಗಳು ಜನರನ್ನು ಸಮರ್ಪಕವಾಗಿ ತಲುಪುತ್ತಿದೆಯೇ ಇಲ್ಲವೇ ಎಂಬುದನ್ನು ಪರಿಶೀಲನೆ ನಡೆಸಲು ಪಕ್ಷದಿಂದ ಇದೇ ನವೆಂಬರ್ 28ಕ್ಕೆ ಸಮಿತಿಯನ್ನು ರಚನೆ ಮಾಡುತ್ತೇನೆ. ಅಂದು ಕಾಂಗ್ರೆಸ್ ಸಂಸ್ಥಾಪಕರ ದಿನವಿದ್ದು, ಅಂದೇ ಸಮಿತಿಯನ್ನು ರಚನೆ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಈ ಸಮಿತಿಯವರು ಪ್ರತಿ ಮನೆಗೆ ಹೋಗಿ ಗ್ಯಾರಂಟಿಗಳು ಸಮರ್ಪಕವಾಗಿ ತಲುಪಿದೆಯೇ? ಯಾವುದಾದರೂ ಬದಲಾವಣೆ ಮಾಡಬೇಕೇ ಎಂಬ ಮಾಹಿತಿಯನ್ನು ಕಲೆ ಹಾಕುತ್ತದೆ. ನಲವತ್ತು ವರ್ಷಗಳ ರಾಜಕಾರಣದಲ್ಲಿ ಯಾವ ಸರ್ಕಾರವೂ ಕಾರ್ಯಕರ್ತರಿಗೆ ಇಂತಹ ಶಕ್ತಿ ಕೊಟ್ಟಿರಲಿಲ್ಲ. ನ.17ರವರೆಗೆ ಲೆಕ್ಕ ಹಾಕಿದರೆ ಶಕ್ತಿ ಯೋಜನೆಯಡಿ ನೂರು ಕೋಟಿ ರೂ. ಮೌಲ್ಯದ ಟಿಕೆಟ್ ನೀಡಲಾಗಿದೆ. ಜನವರಿ ವೇಳೆ ಯುವ ನಿಧಿಯನ್ನೂ ಜಾರಿಗೆ ತರುತ್ತೇವೆ ಎಂದು ಹೇಳಿದರು. ಯೋಜನೆಗಳು
ವಿಡಿಯೋ ನೋಡಿ:ಕಾಸಿಗಾಗಿ ಹುದ್ದೆ ಪ್ರಕರಣ : ಸಿಎಂ ಕಚೇರಿಯಲ್ಲಿ ಏನು ನಡೆಯುತ್ತಿದೆ – ಎಚ್.ಡಿ ಕುಮಾರಸ್ವಾಮಿ ಪ್ರಶ್ನೆ