ಸರ್ಕಾರ ರಚನೆಯಾಗಿ 6 ತಿಂಗಳು ಕಳೆದ ಬಳಿಕ ಬಿಜೆಪಿಗೆ ಜ್ಞಾನೋದಯ: ಕಾಂಗ್ರೆಸ್‌

ಬೆಂಗಳೂರು: ಚುನಾವಣೆ ಮುಗಿದು, ಸರ್ಕಾರ ರಚನೆಯಾಗಿ 6 ತಿಂಗಳು ಕಳೆದ ಮೇಲೆ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಜ್ಞಾನೋದಯವಾದಂತಿದೆ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್‌ಖಾತೆಯಲ್ಲಿ ಹಂಚಿಕೊಂಡಿದರು ಕಾಂಗ್ರೆಸ್‌, ಈ ವಿಳಂಬಕ್ಕೆ ವ್ಯವಹಾರ ಕುದುರದಿರುವುದೇ ಕಾರಣವೇ? ವಿಪಕ್ಷ ನಾಯಕನ ಸ್ಥಾನಕ್ಕೆ ಇರುವ ಹರಾಜಿನ ಬೆಲೆ ಇದುವರೆಗೂ ಬಿಜೆಪಿಯ ಬಂಡಾಯ ನಾಯಕರು ಬಹಿರಂಗ ಪಡಿಸಿಲ್ಲ. ಮೊದಲು ಬಹಿರಂಗ ಪಡಿಸುವ ಬಿಜೆಪಿಯ ಬಂಡಾಯ ನಾಯಕರಿಗೆ ಕಾಂಗ್ರೆಸ್ ಪಕ್ಷದಿಂದ ಬಹುಮಾನ ನೀಡಲಾಗುವುದು! BSY ಮತ್ತು ಸಂತೋಷ್ ಗುಂಪುಗಳಿಗೆ ಮಾಹಿತಿ ನೀಡದೆ ಗೌಪ್ಯತೆ ಕಾಪಾಡಲಾಗುವುದು ಎಂದು ಅಣಕಿಸಿದೆ.

ಇದನ್ನೂ ಓದಿ: ಡಿಸೆಂಬರ್‌ನಿಂದ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್‌ ವಿತರಣೆ: ಮಧು ಬಂಗಾರಪ್ಪ

ಹಿಂದೆ ಸಿಎಂ ಹುದ್ದೆಯನ್ನು 2500 ಕೋಟಿಗೆ, ಮಂತ್ರಿಗಿರಿಯನ್ನು 100 ಕೋಟಿಗೆ ಮಾರಿಕೊಂಡಿದ್ದ ಬಿಜೆಪಿ ಈಗ ರಾಜ್ಯಧ್ಯಕ್ಷ ಹುದ್ದೆಯನ್ನು ಅದೆಷ್ಟು ಕೋಟಿಗೆ ಮಾರಿಕೊಂಡಿದೆ ಎನ್ನುವುದನ್ನು ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರೇ ಬಹಿರಂಗಪಡಿಸಬೇಕು. ಹಾಗೆಯೇ ಇಂದು ವಿಪಕ್ಷ ನಾಯಕನ ಹುದ್ದೆಯ ಹರಾಜಿನಲ್ಲಿ ಎಷ್ಟು ಸಂಪಾದನೆಯಾಗುವ ನಿರೀಕ್ಷೆ ಇದೆ ಎಂದು ಪ್ರಶ್ನಿಸಿದೆ.

ವಿಡಿಯೋ ನೋಡಿ: 9 ನೇ ದಿನಕ್ಕೆ ಕಾಲಿಟ್ಟ ಬಿಸಿಯೂಟ ನೌಕರರ ಪ್ರತಿಭಟನೆ – ವಿಧಾನಸೌಧಕ್ಕೆ ಮುತ್ತಿಗೆ ಎಚ್ಚರಿಕೆJanashakthi Media

Donate Janashakthi Media

Leave a Reply

Your email address will not be published. Required fields are marked *