ಫ್ಯಾಕ್ಟ್‌ಚೆಕ್ | ಪೊಲೀಸರಿಗೆ ಥಳಿಸುತ್ತಿರುವ ಈ ವಿಡಿಯೊ ರಾಜಸ್ಥಾನದಲ್ಲ; ಥಳಿಸುತ್ತಿರುವವರು ಮುಸ್ಲಿಂ ಗುಂಪಲ್ಲ

ಪೊಲೀಸ್ ಸಮವಸ್ತ್ರದಲ್ಲಿರುವ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲೂ ಮುಖ್ಯವಾಗಿ ವಾಟ್ಸಪ್‌ನಲ್ಲಿ ವೈರಲ್ ಆಗಿದೆ. ಘಟನೆಯು ಕಾಂಗ್ರೆಸ್ ಆಡಳಿತದ ರಾಜಸ್ಥಾನದಲ್ಲಿ ಘಟನೆ ನಡೆದಿದ್ದು ಹಲ್ಲೆ ನಡೆಸಿದವರು ಮುಸ್ಲಿಂ ಸಮುದಾಯದವರು ಎಂಬ ಹೇಳಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ಟ್ವಿಟರ್‌ನಲ್ಲಿ @gajendr1807085 ಎಂಬ ಬಳಕೆದಾರ ಇದನ್ನು ಹಂಚಿಕೊಂಡಿದ್ದು, “ಇದು ರಾಜಸ್ಥಾನ ಕೋಟಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಜಿಹಾದಿಗಳಿಂದ ನಡೆದ ಘಟನೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ನೋಡಿ ಪೊಲೀಸರೇ ಜಿಹಾದಿಗಳಿಂದ ಪ್ರಾಣಭಿಕ್ಷೆ ಬೇಡುತ್ತಿದ್ದಾರೆ. ಇನ್ನು ಸಾಮಾನ್ಯ ಹಿಂದುಗಳ ಪರಿಸ್ಥಿತಿ ಏನಾಗಬಹುದು. ಈ ದೃಶ್ಯಗಳು ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕಂಡು ಬಂದರೆ ಆಶ್ಚರ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ. ಆರ್ಕೈವ್ ಇಲ್ಲಿ ನೋಡಿ.  ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಹಿಂದೂಗಳ ವ್ಯಾಪಾರ ಬಹಿಷ್ಕರಿಸುವಂತೆ ಬೆಂಗಳೂರಿನಲ್ಲಿ ಮುಸ್ಲಿಮರು ಕರೆ ನೀಡಿಲ್ಲ

ಈ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡುವಂತೆ ಜನಶಕ್ತಿ ಮೀಡಿಯಾದ +916361984022 ನಂಬರ್‌ಗೆ ವಿನಂತಿಗಳು ಬಂದಿವೆ. ಜನಶಕ್ತಿ ಮೀಡಿಯಾದ ಫ್ಯಾಕ್ಟ್‌ಚೆಕ್ ಗ್ರೂಪ್‌ಗೆ ಸೇರಿಲು ಇಲ್ಲಿ ಕ್ಲಿಕ್ ಮಾಡಿ.

ಫ್ಯಾಕ್ಟ್‌ಚೆಕ್: 

ಈ ವಿಡಿಯೊವನ್ನು ಸ್ಕ್ರೀನ್‌ ಶಾರ್ಟ್‌ ಇಟ್ಟುಕೊಂಡು ರಿವರ್ಸ್‌ ಸರ್ಚ್‌ ನಡೆಸಿದರೆ ಈ ಘಟನೆಯ ಬಗ್ಗೆಗಿನ ಹಲವಾರು ವರದಿಗಳು ಲಭ್ಯವಾಗುತ್ತದೆ. ಸಂಬಾದ್ ಪ್ರತಿದಿನ್ ಸುದ್ದಿ ವೆಬ್‌ಸೈಟ್ ಈ ಘಟನೆಯ ಬಗ್ಗೆ ವರದಿ ಮಾಡಿದ್ದು, ಘಟನೆಯು ಈ ವರ್ಷದ ಏಪ್ರಿಲ್ ತಿಂಗಳಿನದ್ದು ಎಂದು ಅದರ ವರದಿಯಲ್ಲಿ ಹೇಳಲಾಗಿದೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಕೇರಳದಲ್ಲಿ ಬುರ್ಖಾ ಧರಿಸದ ಕಾರಣಕ್ಕೆ ಹಿಂದೂ ಮಹಿಳೆಯನ್ನು ಮುಸ್ಲಿಂ ಮಹಿಳೆಯರು ಬಸ್ ಏರದಂತೆ ತಡೆದರು ಎಂಬುದು ಸುಳ್ಳು

“ಕಲಿಯಗಂಜ್: ಕಾಲಿಯಾಗಂಜ್‌ನಲ್ಲಿ ಹಲಗೆಯ ಕೆಳಗೆ ಅಡಗಿದ್ದ ಪೊಲೀಸರನ್ನು ಹೊರಗೆಳೆದು ಥಳಿಸಿದ ಉದ್ರಿಕ್ತ ಜನರ ಗುಂಪು, ವೈರಲ್ ವಿಡಿಯೋ” ಎಂದು ವರದಿಯ ಶಿರ್ಷಿಕೆಯಲ್ಲಿ ಹೇಳಲಾಗಿದೆ.

ಫ್ಯಾಕ್ಟ್‌ಚೆಕ್ | ಪೊಲೀಸರಿಗೆ ಥಳಿಸುತ್ತಿರುವ ವಿಡಿಯೊ ರಾಜಸ್ಥಾನದಲ್ಲ; ಥಳಿಸುತ್ತಿರುವವರು ಮುಸ್ಲಿಂ ಗುಂಪಲ್ಲ FactCheck | Police beating video is not from Rajasthan; It is not the Muslim group that is doing the beating

ಈ ಸುಳಿವನ್ನು ಇಟ್ಟುಕೊಂಡು ಇಂಟರ್‌ನೆಟ್‌ನಲ್ಲಿ ಮತ್ತಷ್ಟು ಹುಡುಕಾಡಿದಾಗ ಏಪ್ರಿಲ್ ತಿಂಗಳಲ್ಲಿ ನಡೆದ ಈ ಘಟನೆ ಮತ್ತಷ್ಟು ಸುದ್ದಿಗಳು ಸಿಕ್ಕಿವೆ.

ಇಂಡಿಯಾ ಟುಡೆ ವರದಿಯ ಪ್ರಕಾರ, “ಪೊಲೀಸರು ಅಪ್ರಾಪ್ತ ಬುಡಕಟ್ಟು ಬಾಲಕಿಯ ಶವವನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಉದ್ರಿಕ್ತ ಜನರ ಗುಂಪು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ, ಪೊಲೀಸರ ಮೇಲೆ ಹಲ್ಲೆ ನಡೆಸಿತ್ತು. ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ದಿನಗಳ ನಂತರ ರಾಯ್‌ಗಂಜ್ ಪಿಡಿ ಎಸ್ಪಿ ಸನಾ ಅಖ್ತರ್ ಬಾಲಕಿಯ ಶವವನ್ನು ಬೀದಿಯಲ್ಲಿ ಎಳೆಕೊಂಡು ಹೋಗಿದ್ದಕ್ಕಾಗಿ ನಾಲ್ವರು ಸಹಾಯಕ ಸಬ್ ಇನ್ಸ್‌ಪೆಕ್ಟರ್‌ಗಳನ್ನು (ಎಎಸ್‌ಐ) ಅಮಾನತುಗೊಳಿಸಿದ್ದರು. ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಪ್ರಧಾನಿ ಮೋದಿ ಭಾರತೀಯರಿಗೆ 3 ತಿಂಗಳ ಉಚಿತ ರೀಚಾರ್ಜ್ ನೀಡುತ್ತಿದ್ದಾರೆ ಎಂಬುದು ಸುಳ್ಳು!

ಜನರು ಪೊಲೀಸರಿಗೆ ಥಳಿಸುತ್ತಿರುವ ವಿಡಿಯೊವನ್ನು ತೃಣಮೂಲ ಕಾಂಗ್ರೆಸ್ ನಾಯಕ ಕುನಾಲ್ ಘೋಷ್ ಅವರು ಏಪ್ರಿಲ್ 26, 2023 ರಂದು ಟ್ವೀಟ್ ಮಾಡಿದ್ದರು.

ಒಟ್ಟಿನಲ್ಲಿ ಹೇಳಬಹುದಾದರೆ, ಘಟನೆಯು ಕಾಂಗ್ರೆಸ್ ಆಡಳಿತದ ರಾಜಸ್ಥಾನದ್ದು ಹಾಗೂ ಪೊಲೀಸರಿಗೆ ಥಳಿಸುತ್ತಿರುವವರು ಮುಸ್ಲಿಮರು ಎಂಬ ಪ್ರತಿಪಾದನೆ ಸುಳ್ಳಾಗಿದೆ. ವೀಡಿಯೋ ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಕಲಿಯಾಗಂಜ್‌ನದ್ದಾಗಿದೆ. ಘಟನೆಯು ಏಪ್ರಿಲ್ 2023 ರಲ್ಲಿ ಸಂಭವಿಸಿದೆ. ಸ್ಥಳೀಯರು ಪೊಲೀಸರು ಆಪಾದಿತ ಅತ್ಯಾಚಾರ, ಕೊಲೆ ಪ್ರಕರಣವನ್ನು ನಿಭಾಯಿಸಿದ ರೀತಿಗೆ ಉದ್ರಿಕ್ತ ಜನರು ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿ, ಅಧಿಕಾರಿಗಳು ಥಳಿಸಿದ್ದರು.


ಯಾವುದೆ ವಿಡಿಯೊ, ಚಿತ್ರ ಅಥವಾ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮುಂಚೆ ಅದು ಸತ್ಯವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಅವುಗಳ ಬಗ್ಗೆ ನಿಮಗೆ ಸಂಶಯವಿದ್ದರೆ ಜನಶಕ್ತಿ ಮೀಡಿಯಾದ +916361984022 ಈ ನಂಬರ್‌ಗೆ ಕಳುಹಿಸಿ. ನಾವು ಅದನ್ನು ಫ್ಯಾಕ್ಟ್‌ಚೆಕ್ ಮಾಡುತ್ತೇವೆ.


ವಿಡಿಯೊ ನೋಡಿ: ದುಡಿಯುವ ಜನರ ಮಹಾಧರಣಿ ನವೆಂಬರ್ 26 ರಿಂದ 28 Janashakthi Media

Donate Janashakthi Media

Leave a Reply

Your email address will not be published. Required fields are marked *