ಇಂದು ಬಿಡುಗಡೆಯಾಗಿರುವ ರಾಜರ್ಮಾತಾಂಡ, ಫೈಟರ್, ಲವ್, ಅಭಿರಾಮಚಂದ್ರ, ಆಡೇ ನಮ್ ಗಾಡ್ ಸಿನಿಮಾಗಳು ರಾಜ್ಯದ್ಯಂತ ಬಾರೀ ಸದ್ದು ಮಾಡುತ್ತಿವೆ. ಎಲ್ಲಡೆ ಚಿತ್ರಮಂದಿರಗಳು ಪೂರ್ತಿಗೊಂಡಿದ್ದು ಸಿನಿಮಾಗಳಿಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ರಾಜಮಾರ್ತಾಂಡ
ಚಿರು ನಟಿಸಿದ ಕೊನೆಯ ಸಿನಿಮಾ ರಾಜರ್ಮಾತಾಂಡ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಪಡೆದಿದ್ದು, ಚಿರು ಕಟ್ಟ್ವೊಟ್ ಜೊತೆ ಅವರ ಮಗನ ಕಟ್ಟ್ವೊಟ್ ಕೂಡ ಚಿತ್ರಮಂದಿರಗಳ ಮುಂದೆ ರಾರಾಜಿಸುತ್ತಿವೆ. ಮೊದಲ ಪ್ರದರ್ಶನ ವೀಕ್ಷಿಸಲು ದ್ರವ ಸರ್ಜಾ ಹಾಗೂ ಮೇಘನ ರಾಜ್ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಸಿನಿಮಾ ಒಳ್ಳೆಯ ಕಥೆಯಿಂದ ಜನರ ಮನ ತಲುಪಿದೆ.
ಫೈಟರ್
ವಿನೋದ ಪ್ರಭಾಕರ್ ಅವರ ‘ಫೈಟರ್’ ಸಿನಿಮಾ ಒಂದು ಆಕ್ಷನ್-ಪ್ಯಾಕ್ಡ್ ಕಮರ್ಷಿಯಲ್ ಡ್ರಾಮಾ ಆಗಿದ್ದು, ಚಿತ್ರಕಥೆ ಮುಖ್ಯ ಕಥಾವಸ್ತುವಿಗೆ ಬರಲು ಯಾವುದೇ ಸಮಯ ತೆಗೆದುಕೊಳ್ಳುವುದಿಲ್ಲ. ಕಥೆಯಲ್ಲಿ ಸೇರಿಸಲಾದ ಸಾಮಾಜಿಕ ಆಸಕ್ತಿಯ ಕೋನವು ಕೃಷಿ ಭೂಮಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯ ಮೇಲೆ ಸಾವಯವ ಕೃಷಿಯ ಅಗತ್ಯವನ್ನು ಕೇಂದ್ರೀಕರಿಸುತ್ತದೆ. ಸಿನಿಮಾ ಅಷ್ಟೇನೂ ಒಳ್ಳೆಯ ರಿವೀವ್ ಪಡೆಯದೆ, ಕೇವಲ ೨ ಸ್ಟಾರ್ ರೇಟಿಂಗ್ ಪಡೆದಿದೆ.
ಲವ್
ಹೊಸದಾದ ತಂಡ ನಿರ್ಮಿಸಿರುವ ಲವ್ ಸಿನಿಮಾ ಹಿಂದು ಹುಡುಗ ಮತ್ತು ಒಂದು ಮುಸ್ಲೀಮ್ ಹುಡುಗಿಯ ನಡುವೆ ನಡೆಯುವ ಪ್ರೇಮಕಥೆಯಾಗಿದೆ. ಸಿನಿಮಾ ಒಳ್ಳೆಯ ರಿವೀವ್ ಪಡೆದಿದ್ದು, ಸೆಕೆಂಡ ಆಫ್ ವೀಕ್ಷಕರ ಮನಗೆದ್ದಿದೆ.
ಅಭಿರಾಮಚಂದ್ರ
ಸಿನಿಮಾದ ಆರಂಭದಿಂದ ಕೊನೆವರೆಗೆ ‘ಅಭಿರಾಮಚಂದ್ರ’ ಕಥೆ ಎಲ್ಲಿಗೆ ಸಾಗಿದರೂ ಕೂಡ ನಿರ್ದೇಶಕರು ಹಾಸ್ಯದ ಸೊಗಡನ್ನು ಬಿಟ್ಟುಕೊಟ್ಟಿಲ್ಲ. ಹಾಗಾಗಿ ಇಡೀ ಸಿನಿಮಾದಲ್ಲಿ ಫನ್ ಇದೆ. ತ್ರಿಕೋನ ಪ್ರೇಮಕಥೆ ಇರುವುದರಿಂದ ಈ ಪ್ರೀತಿಯ ಹೂವು ಯಾರ ಮುಡಿ ಸೇರುತ್ತದೆ ಎಂಬ ಕೌತುಕ ಕೊನೆವರೆಗೂ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಸಿನಿಮಾ ಒಳ್ಳೆಯ ರಿವೀವ್ ಪಡೆದಿದ್ದು, ೨ ಸ್ಟಾರ್ ರೇಟಿಂಗ್ ಪಡೆದಿದೆ.
ಆಡೇ ನಮ್ ಗಾಡ್
ಆಡನ್ನು ದೇವರಾಗಿ ಪೂಜೆ ಮಾಡಿದಾಗ ಏನೆಲ್ಲಾ ಆಗುತ್ತದೆ ಎನ್ನುವ ಕಥಾಹಂದರ ಹೊಂದಿರುವ ‘ಆಡೇ ನಮ್ ಗಾಡ್’ ಸಿನಿಮಾ ಹೊಸ ತಂಡದ ಹೊಸ ಪ್ರಯತ್ನವಾಗಿದೆ. ಸಿನಿಮಾ ಸಮಾಜಕ್ಕೆ ಒಂದೊಳ್ಳೆಯ ಸಂದೇಶ ಕೊಡಲಿದ್ದು, ಎಲ್ಲೆಡೆ ಒಳ್ಳೇಯ ಪ್ರತಿಕ್ರಿಯೆ ಪಡೆಯುತ್ತಿದೆ.