ಮುಂಬೈ: ಶುಕ್ರವಾರ ನಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಪತ್ರಿಕಾಗೋಷ್ಠಿಯಲ್ಲಿ ಗೊಂದಲ ಸೃಷ್ಟಿಸಲು ನಿರಾಕರಿಸಿದ ಆರೋಪದ ಮೇಲೆ ಎನ್ಡಿ ಟಿವಿ(NDTV)ಯ ಮುಂಬೈ ಬ್ಯೂರೋ ಮುಖ್ಯಸ್ಥ ಸೋಹಿತ್ ಮಿಶ್ರಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ನ್ಯೂಸ್ಲಾಂಡ್ರಿ ವರದಿ ಮಾಡಿದೆ. ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಗಳಲ್ಲಿ ಒಂದಾದ ಅದಾನಿ ಗ್ರೂಪ್ ಮತ್ತು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ನಡುವಿನ ಆಪಾದಿತ ಸಂಪರ್ಕಗಳ ಕುರಿತು ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ನಡೆಸಿದ್ದರು.
ಅದಾನಿ ಗ್ರೂಪ್ಗಳಿಗೆ ಬಂಡವಾಳ ಹಾಕಿದ ಶೆಲ್ ಕಂಪನಿಗಳ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿಯನ್ನು ಅಡ್ಡಿಪಡಿಸಲು ಮತ್ತು ಅವರಿಗೆ ಪ್ರಚೋದನಕಾರಿ ಪ್ರಶ್ನೆಗಳನ್ನು ಕೇಳಲು ಸೋಹಿತ್ ಮಿಶ್ರಾ ಅವರಿಗೆ ಅವರ ಮೇಲಾಧಿಕಾರಿಗಳು ಸೂಚಿಸಿದ್ದಾರೆ ಎಂದು ಹೆಸರಿಸದ ಮೂಲವನ್ನು ಉಲ್ಲೇಖಿಸಿ ನ್ಯೂಸ್ಲಾಂಡ್ರಿ ವರದಿ ಮಾಡಿದೆ. ಆದರೆ ಅದಕ್ಕೆ ಸೋಹಿತ್ ಮಿಶ್ರಾ ಅವರು ನಿರಾಕರಿಸಿದ್ದು, ಬದಲಿಗೆ ಎನ್ಡಿಟಿವಿ ತ್ಯಜಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. NDTV
ಇದನ್ನೂ ಓದಿ: 6 ವರ್ಷಗಳಲ್ಲಿ 237 ಹೊಸ ಟಿವಿ ಚಾನೆಲ್ಗಳಿಗೆ ಅನುಮತಿ: ಕೇಂದ್ರ ಸರ್ಕಾರ
NDTV ಸಂಪಾದಕೀಯ ನೀತಿಗಳು ಆಡಳಿತಾರೂಢ ಬಿಜೆಪಿ ಕಡೆಗೆ ಪಕ್ಷಪಾತವನ್ನು ಪ್ರದರ್ಶಿಸುತ್ತವೆ ಎಂದು ಮಿಶ್ರಾ ನಂಬಿದ್ದಾರೆ ಮತ್ತು ಅವರೊಂದಿಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅದಾನಿ ಅವ್ಯವಹಾರವನ್ನು ಕೇಂದ್ರೀಕರಿಸಿದ ರಾಹುಲ್ ಗಾಂಧಿ ನಡೆಸಿದ್ದ ಪತ್ರಿಕಾಗೋಷ್ಠಿಯನ್ನು ಅಡ್ಡಿಪಡಿಸುವಂತೆ ಚಾನೆಲ್ನ ಮುಖ್ಯ ಸಂಪಾದಕ ಸಂಜಯ್ ಪುಗಾಲಿಯಾ ಅವರು NDTV ಮುಂಬೈ ಬ್ಯೂರೋ ಮುಖ್ಯಸ್ಥರಾಗಿದ್ದ ಸೋಹಿತ್ ಮಿಶ್ರಾ ಅವರನ್ನು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ಪತ್ರಿಕಾಗೋಷ್ಠಿಯಲ್ಲಿ ಗೊಂದಲ ಸೃಷ್ಟಿಸುವುದು ಮತ್ತು ಅಲ್ಲಿನ ನಿರೂಪಣೆಯನ್ನು ತಿರುಚುವಂತೆ ಅವರಿಗೆ ಕೇಳಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
ತಾನು NDTV ತೊರೆದ ಬಗ್ಗೆ ಸೋಹಿತ್ ಮಿಶ್ರಾ ಅವರು ತನ್ನ ಯೂಟ್ಯೂಬ್ ಚಾನೆಲ್ ಅಲ್ಲಿ ಮಾಹಿತಿ ನೀಡಿದ್ದಾರೆ. ತನ್ನ ರಾಜೀನಾಮೆ ಬಗ್ಗೆ ಮಾತನಾಡಿರುವ ಅವರು, “ಇನ್ನು ಸಹಿಸಲು ಸಾಧ್ಯವಿಲ್ಲ ಎಂದಾಗ ರಾಜೀನಾಮೆ ನೀಡುವುದೇ ಸರಿ ಎನಿಸಿತು. ನಾನು ಕೂಡಾ ಎನ್ಡಿಟಿವಿಗೆ ರಾಜೀನಾಮೆ ನೀಡಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪೆಗಸಸ್ ಅಸಹಕಾರ, ಎನ್ಡಿ ಟಿವಿ ಖರೀದಿ, ಮತ್ತು ಬುಲ್ಬುಲ್ ಕತೆ
ರಾಹುಲ್ ಗಾಂಧಿ ಅವರ ಪತ್ರಿಕಾಗೋಷ್ಠಿಯಲ್ಲಿ ಗೊಂದಲ ಸೃಷ್ಟಿಸಲು ಇಂಡಿಯಾ ಟುಡೇ ಪತ್ರಕರ್ತೆ ಸುಪ್ರಿಯಾ ಭಾರದ್ವಾಜ್ ಅವರಿಗೂ ಕೇಳಲಾಗಿತ್ತು ಎಂದು ವರದಿಯಾಗಿದೆ. ಇದನ್ನು ವಿರೋಧಿಸಿ ಇಂಡಿಯಾ ಟುಡೆ ನೆಟ್ವರ್ಕ್ ಅನ್ನು ಸುಪ್ರಿಯಾ ಭಾರದ್ವಾಜ್ ಅವರು ತೊರೆದಿದ್ದಾರೆ ಎಂದು ವರದಿ ಹೇಳಿದೆ.
ಎನ್ಡಿ ಟಿವಿಯ ಮಾಲಕತ್ವ ಅದಾನಿ ಪಡೆದ ನಂತರ ಅದರಲ್ಲಿ ರಫೇಲ್ ಒಪ್ಪಂದ, ಪೆಗಾಸಸ್ ಸ್ಪೈವೇರ್ ಹಗರಣ ಮತ್ತು ಕಾಶ್ಮೀರ ಪರಿಸ್ಥಿತಿಯಂತಹ ವಿವಿಧ ವಿಷಯಗಳನ್ನು ಆಡಳಿತ ಪರವಾಗಿ ಪ್ರಸಾರ ಮಾಡಲಾಗುತ್ತಿದೆ ಎಂಬ ಟೀಕೆಗಳನ್ನು ಚಾನೆಲ್ ಎದುರಿಸುತ್ತಿದ್ದು, ಸರ್ಕಾರ ಮತ್ತು ಅದಾನಿ ಗ್ರೂಪ್ನ ಒತ್ತಡಕ್ಕೆ ಟಿವಿ ಒಳಗಾಗಿದೆ ಎಂದು ಆರೋಪಿಸಲಾಗಿದೆ.
ಸೋಹಿತ್ ಮಿಶ್ರಾ ಅವರು 2017 ರಲ್ಲಿ ಎನ್ಡಿ ಟಿವಿ ಸೇರಿದ್ದರು. ರೈತರ ಪ್ರತಿಭಟನೆಗಳು, ಕೋವಿಡ್ -19 ಸಾಂಕ್ರಾಮಿಕ ಮತ್ತು ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಸೇರಿದಂತೆ ವಿವಿಧ ವರದಿಗಳನ್ನು ಮಾಡಿದ್ದರು. ತಮ್ಮ ವರದಿಗಾರಿಕೆಗಾಗಿ ಅವರು ಹಲವಾರು ಪ್ರಶಸ್ತಿಗಳನ್ನೂ ಪಡೆದಿದ್ದರು.
ವಿಡಿಯೊ ನೋಡಿ: ದೇಶಕ್ಕೆ ಗಾಯವಾದಾಗ ಜನ ಮೌನವಾಗಿದ್ದರೆ, ಅದು ಇಡೀ ದೇಶವನ್ನೇ ಸುಡುತ್ತದೆ – ಪ್ರಕಾಶ್ ರಾಜ್ Janashakthi Media