ಮೃಣಾಲ್ ಸೆನ್ 100 ವೆಬಿನಾರ್ ಸರಣಿ

ಮೃಣಾಲ್ ಸೆನ್ ವಿಶ್ವಮನ್ನಣೆ ಪಡೆದ ಭಾರತದ ಸಿನಿಮಾ ಮಹಾನ್ ತ್ರಿವಳಿಗಳಲ್ಲಿ (ಸತ್ಯಜಿತ್ ರೇ, ರಿತ್ವಿಕ್ ಘಟಕ್ ಇನ್ನಿಬ್ಬರು) ಒಬ್ಬರು. ಆರು ದಶಕಗಳ ದೀರ್ಘ ಕಾಲ 19 ಕಥಾಚಿತ್ರ ಗಳು ಸೇರಿದಂತೆ ಒಟ್ಟು 37 ಚಿತ್ರಗಳನ್ನು ನಿರ್ದೇಶಿಸಿ ಸಿನೆಮಾ ಕಲೆಯ ಪ್ರಯೋಗಗಳಲ್ಲಿ ತೊಡಗಿದವರು. ‘ಎಡಪಂಥೀಯ ರಾಜಕೀಯ ಸಿನಿಮಾದ ಪ್ರವರ್ತಕರು’, ‘ಸಿನಿಮಾದ ಬೀದಿ ಹೋರಾಟಗಾರ’, ‘ವಿವಿಧ ಶೈಲಿಗಳ ದಿಟ್ಟ ಪ್ರಯೋಗಶೀಲ’ ಎಂದೆಲ್ಲ ಹೆಸರಾದವರು. ಅವರ ಶತಮಾನೋತ್ಸವದ ಸಂದರ್ಭದಲ್ಲಿ ಚಿತ್ರ ಸಮುದಾಯ ಅವರ ಚಿತ್ರಗಳ ಸದಾ ಸಮಕಾಲೀನತೆಯ ಅನುಸಂಧಾನ ಮಾಡುವ ವೆಬಿನಾರ್ ಸರಣಿಯನ್ನು ಆಯೋಜಿಸುತ್ತಿದೆ. ಪ್ರತಿ ತಿಂಗಳ ಒಂದರಂತೆ ವರ್ಷಪೂರ್ತಿ ನಡೆಯುವ ಈ ಸರಣಿಯಲ್ಲಿ ಕರ್ನಾಟಕದ ಸಿನಿಮಾ ಕರ್ಮಿಗಳು, ಸಿನಿಮಾ ಪ್ರಿಯರು, ಪರಿಣತರು, ಸಿನಿಮಾ ಕಲೆಗೆ ಅವರ ಕೊಡುಗೆಯ ಹಲವು ಮಗ್ಗುಲುಗಳನ್ನು ಕಂಡುಕೊಳ್ಳುವ ಉಪನ್ಯಾಸ/ಸಂವಾದಗಳನ್ನು ನಡೆಸಲಿದ್ದಾರೆ.

ಇದನ್ನೂ ಓದಿ:ಬದಲಾಗುತ್ತಾ ಬೆಳೆದ ಮೃಣಾಲ್ ಸೇನ್

ವೆಬಿನಾರ್‌ನ ಉದ್ಘಾಟನಾ ಉಪನ್ಯಾಸವನ್ನು ಭಾರತದ ಸಮಕಾಲೀನ ಸಿನಿಮಾ ದಿಗ್ಗಜಗಳಲ್ಲಿ ಒಬ್ಬರಾದ ಅಡೂರ್ ಗೋಪಾಲಕೃಷ್ಣನ್ ಇದೇ ಸೆಪ್ಟೆಂಬರ್ 2 ಶನಿವಾರ ಸಂಜೆ 5.30ಕ್ಕೆ ನೀಡಲಿದ್ದಾರೆ. ZOOM ನಲ್ಲಿ ನಡೆಯುವ ಈ ವೆಬಿನಾರ್‌ನ್ನು ಜನಶಕ್ತಿ ಮೀಡಿಯಾದ ಯೂ ಟ್ಯೂಬ್, ಫೇಸ್ ಬುಕ್ ಗಳಲ್ಲಿ ಲೈವ್ ಪ್ರಸಾರ ಸಹ ಮಾಡಲಾಗುತ್ತದೆ.

ಎಲ್ಲ ಸಿನೆಮಾ ಆಸಕ್ತರು ಈ ಕೆಳಗಿನ ZOOM link ಅಥವಾ JanashakthiMedia You Tube ಮತ್ತು Facebook Live ಮೂಲಕ ಭಾಗವಹಿಸಲು ವಿನಂತಿ.

Join Zoom Meeting

https://us06web.zoom.us/j/86491607070?pwd=MWoxWkRKR1h2azRScE9sQURrTGFxdz09

Meeting ID: 864 9160 7070
Passcode: 590016

ಯೂಟ್ಯೂಬ್ ಲಿಂಕ್

https://youtube.com/@JanashakthiMedia?si=Wc8JJqLHKAie1oRU

ಫೆಸ್ಬುಕ್ ಲಿಂಕ್

https://www.facebook.com/profile.php?id=61550041599018

 

Donate Janashakthi Media

Leave a Reply

Your email address will not be published. Required fields are marked *