ಬೆಂಗಳೂರು: ಮೂರು ತಿಂಗಳ ಬಾಕಿ ಸಂಬಳ ಕೇಳಿದ್ದಕ್ಕೆ ಮುನಿಸಿಪಲ್ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಖಾನಾಪುರ ಚೀಫ್ ಆಫೀಸರ್ ನಡೆಯನ್ನು ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ ಖಂಡಿಸಿದೆ.
ಸಂಬಳದ ಬಗ್ಗೆ ಮಾತಾನಾಡದೇ ಸಂಬಳ ಕೇಳಲು ಬಂದಿರುವ ನೌಕರರನ್ನು ನಿಂದಿಸಿ, ಅವರ ಮೇಲೆ ಕುರ್ಚಿ ಎತ್ತಿಕೊಂಡು ಹೋಗಿ ಹಲ್ಲೆ ನಡೆಸಿರುವ ಘಟನೆಯು ಬೆಳಗಾವಿ ಜಿಲ್ಲೆ ಖಾನಪುರ ಮುನಿಸಿಪಾಲಿಟಿಯಲ್ಲಿ ಆಗಸ್ಟ್ 31 ರಂದು ನಡೆದಿದೆ. ಮುನಿಸಿಪಾಲ್ ಕಾರ್ಮಿಕರು 3-4 ತಿಂಗಳಿಂದ ಮಾಡಿದ ಕೆಲಸಕ್ಕೆ ಸಂಬಳವು ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದರು. ಪುರಸಭೆಯ ಪ್ರಮುಖರಾದ ಚೀಪ್ ಆಫೀಸರ್ ಅವರ ಬಳಿ ಎಲ್ಲಾ ಕಾರ್ಮಿಕರು ಸೇರಿ ಸಂಬಳ ಕೇಳಲು ಹೋಗಿದ್ದಾರೆ ಸಂಬಳ ನೀಡುವ ಬದಲಾಗಿ ಹಲ್ಲೆ ನಡೆಸಿರುವ ಕ್ರಮವನ್ನು ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ರಾಜ್ಯ ಸಮಿತಿ ಖಂಡಿಸಿದೆ.
ಸಂಘಟನೆಯ ಪ್ರದಾನ ಕಾರ್ಯದರ್ಶಿ ಸೈಯದ್ ಮುಜೀಬ್, ರಾಜ್ಯ ಉಪಾಧ್ಯಕ್ಷ ಸ್ಯಾಮ್ಸನ್, ಸಹ ಕಾರ್ಯದರ್ಶಿ ಸುಬ್ರಮಣ್ಯ ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದು, ಅಧಿಕಾರಿಯ ಮೇಲೆ ಶಿಸ್ತು ಕ್ರಮ ವಹಿಸಿ ಅಲ್ಲಿಂದ ವರ್ಗವಾಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಅಂಗನವಾಡಿ ಹೋರಾಟಗಾರರ ಮೇಲೆ ಶಾಸಕ ಎಚ್.ಡಿ.ರೇವಣ್ಣ ದುರ್ವರ್ತನೆ: ಸಿಐಟಿಯು ಖಂಡನೆ
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಾದ ಮುನಿಸಿಪಾಲಿಟಿ, ನಗರ ಸಭೆ, ಮಹಾ ನಗರ ಪಾಲಿಕೆಗಳಲ್ಲಿ ಅತಿ ಕಡಿಮೆ ಸಂಬಳದಲ್ಲಿ ಯಾವುದೇ ಕಾರ್ಮಿಕ ಕಾನೂನುಗಳ ಸೌಲಭ್ಯವಿಲ್ಲದೇ ,ವಾರದ ರಜೆ, ದಿನಕ್ಕೆ 8 ಘಂಟೆಯ ದುಡಿಮೆ, ಹಬ್ಬಗಳಿಗೆ ರಜೆ ಇಲ್ಲದೇ, ಜೀತದಾಳುಗಳಂತೆ ಮುನಿಸಿಪಲ್ ಕಾರ್ಮಿಕರನ್ನು ದುಡಿಸಲಾಗುತ್ತಿದೆ, ಈ ಕಾರ್ಮಿಕರು ನ್ಯಾಯ ಬದ್ದವಾಗಿ ಮಾಡಿದ ಕೆಲಸಕ್ಕೆ ಕೂಲಿ ಕೇಳಿದರೆ ಹಲ್ಲೆ ಮತ್ತು ಕೆಲಸದಿಂದ ತಗೆಯುವ ನಡೆಗಳು ವ್ಯಾಪಕವಾಗಿವೆ ಎಂದು ಸಂಘವು ಅರೋಪಿಸಿದೆ.
ಈ ಕೊಡಲೇ ಶೋಷಕ ಗುತ್ತಿಗೆ ಪದ್ದತಿ ರದ್ದು ಮಾಡಲು ಸಂಘವು ಅಗ್ರಹಿಸಿದೆ. ರಾಜ್ಯ ವಿವಿದೆಡೆಗಳಲ್ಲಿ 3-4 ತಿಂಗಳುಗಳಿಂದ ಬಾಕಿ ಇರುವ ಸಂಬಳವನ್ನು ನೀಡಲು ಮತ್ತು ಕಾನೂನು ಬದ್ದವಾಗಿ 8 ಘಂಟೆ ಕೆಲಸ, ಸಂಬಳ ಸಹಿತ ವಾರದ ರಜೆ, ಹಬ್ಬ ಮತ್ತು ರಾಷ್ಟೀಯ ಹಬ್ಬಗಳಿಗೆ ರಜೆ, ಪ್ರತಿ ತಿಂಗಳ 5 ತಾರೀಖಿನ ಒಳಗೆ ಸಂಬಳ, ಸಂಬಳದ ಚೀಟಿ, ಗುರುತಿನ ಚೀಟಿ, ಇ.ಎಸ್.ಐ. ಪಿ.ಎಫ್, ಸುರಕ್ಷತಾ ಸಲಕರಣೆಗಳು, ಆರೋಗ್ಯಕರ ತಿಂಡಿ ಮತ್ತು ಇತರೆ ಕಾನೂನು ಸೌಲಭ್ಯಗಳನ್ನು ನೀಡುವಂತೆ, ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ಜವಾಬ್ದಾರಿ ನೀಡುವಂತೆ,ಹಾಗೂ ಇದರಲ್ಲಿ ಲೋಪ ಮಾಡುವ ಮುನಿಸಿಪಾಲಿಟಿಗಳ ಮುಖ್ಯಸ್ಥರನ್ನು ಹೊಣೆಮಾಡಿ ಅವರ ಮೇಲೆ ಶಿಸ್ತು ಕ್ರಮ ವಹಿಸುವಂತೆ ಮಾಡಲು ಸರ್ಕಾರ ಮುಂದಾಗಬೇಕೆಂದು ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ (ರಿ) ಸಿಐಟಿಯು ಸರ್ಕಾರವನ್ನು ಒತ್ತಾಯಿಸುತ್ತದೆ ಎಂದರು.
ಗುತ್ತಿಗೆ ಮುನಿಸಿಪಲ್ ಕಾರ್ಮಿಕರ ಸಮಸ್ಯೆಗಳನ್ನು ಪರಿಹಾರ ರೂಪಿಸಲು ಬೇಕಾಗಿ ನಗರಾಬಿವೃದ್ದಿ ಹಾಗೂ ಪೌರಾಡಳಿತ ಸಚಿವರು ಮತ್ತು ಇಲಾಖಾಧಿಕಾರಿಗಳು ಎಲ್ಲಾ ಮುನಿಸಿಪಲ್ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳನ್ನು ಒಳಗೊಂಡ ಜಂಟಿ ಸಭೆಯನ್ನು ಕರೆಯುವಂತೆ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ(ರಿ) ಸಿಐಟಿಯು, ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.