ಚಂದಮಾಮನ ಅಂಗಳದಲ್ಲಿ ಕುಣಿಯುತ್ತಿರುವ ಮಗುವನ್ನು ಪ್ರೀತಿಯಿಂದ ನೋಡುತ್ತಿರುವ ತಾಯಿ: ಇಸ್ರೋ ಬಣ್ಣನೆ

ಬೆಂಗಳೂರು: ಚಂದ್ರಯಾನ-3 ಮಿಷನ್‌ನ ಹೊಸ ವಿಡಿಯೊವನ್ನು ಇಸ್ರೋ ಗುರುವಾರ ಬಿಡುಗಡೆ ಮಾಡಿದ್ದು, “ಮಗು ಚಂದಮಾಮನ ಅಂಗಳದಲ್ಲಿ ತಮಾಷೆಯಾಗಿ ಕುಣಿಯುತ್ತಿದ್ದು, ತಾಯಿ ಪ್ರೀತಿಯಿಂದ ನೋಡುತ್ತಿರುವಂತೆ ಅನಿಸುತ್ತಿದೆ ಅಲ್ಲವೆ” ಎಂದು ಕೇಳಿದೆ. ವಿಡಿಯೊದಲ್ಲಿ ಪ್ರಜ್ಞಾನ್ ರೋವರ್ ತಿರುಗುತ್ತಿವುದನ್ನು ವಿಕ್ರಂ ಲ್ಯಾಂಡರ್ ತನ್ನ ಕ್ಯಾಮೆರಾದಲ್ಲಿ ಸರೆ ಹಿಡಿದಿರುವುದು ದಾಖಲಾಗಿದೆ.

ವಿಡಿಯೊ ಬಗ್ಗೆ ಟ್ವಿಟರ್‌(ಎಕ್ಸ್‌)ನಲ್ಲಿ ಮಾಹಿತಿ ನೀಡಿರುವ ಇಸ್ರೊ, “ಸುರಕ್ಷಿತ ಮಾರ್ಗದ ಹುಡುಕಾಟದಲ್ಲಿ ರೋವರ್ ಅನ್ನು ತಿರುಗಿಸಲಾಯಿತು. ಲ್ಯಾಂಡರ್ ಇಮೇಜರ್ ಕ್ಯಾಮೆರಾದಿಂದ ಈ ತಿರುಗುವಿಕೆಯನ್ನು ಸೆರೆಹಿಡಿಯಲಾಗಿದೆ. ಒಂದು ಮಗು ಚಂದಮಾಮನ ಅಂಗಳದಲ್ಲಿ ತಮಾಷೆಯಾಗಿ ಕುಣಿಯುತ್ತಿದೆ, ತಾಯಿ ಪ್ರೀತಿಯಿಂದ ನೋಡುತ್ತಿದ್ದಾಳೆ ಎಂದು ಅನಿಸುತ್ತಿದೆ ಅಲ್ಲವೇ?” ಎಂದು ಕೇಳಿದೆ.

ಇದನ್ನೂ ಓದಿ: ಚಂದ್ರಯಾನ-3 ಲ್ಯಾಂಡರ್‌ನಿಂದ ರೋವರ್‌ ಹೊರಬಂದ ದೃಶ್ಯ ಹಂಚಿಕೊಂಡ ಇ ಸ್ರೊ

ಪ್ರಜ್ಞಾನ್ ತಾನು ಇರುವ ಸ್ಥಳದಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುತ್ತಿದ್ದು, “ರೇಡಿಯೋ ಅನ್ಯಾಟಮಿ ಆಫ್ ಮೂನ್ ಬೌಂಡ್ ಹೈಪರ್ಸೆನ್ಸಿಟಿವ್ ಅಯಾನೋಸ್ಫಿಯರ್ ಮತ್ತು ಅಟ್ಮಾಸ್ಫಿಯರ್ – ಲ್ಯಾಂಗ್ಮುಯಿರ್ ಪ್ರೋಬ್ (RAMBHA-LP) ಪೇಲೋಡ್ ಆನ್‌ಬೋರ್ಡ್‌ನಲ್ಲಿದೆ” ಎಂದು ಇಸ್ರೊ ಹೇಳಿದೆ.

ಚಂದ್ರಯಾನ-3 ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮೇಲೆ ಪ್ಲಾಸ್ಮಾ ಪರಿಸರದ ಮೇಲ್ಮೈಯನ್ನು ಮೊಟ್ಟಮೊದಲ ಬಾರಿಗೆ ಮಾಪನ ಮಾಡಿದ್ದಾಗಿ ಇಸ್ರೋ ಹೇಳಿದ್ದು, ಆರಂಭಿಕ ಮೌಲ್ಯಮಾಪನವು ಚಂದ್ರನ ಮೇಲ್ಮೈನಲ್ಲಿ ಪ್ಲಾಸ್ಮಾ ತುಲನಾತ್ಮಕವಾಗಿ ವಿರಳವಾಗಿದೆ ಎಂದು ಸೂಚಿಸುತ್ತದೆ ಎಂದು ತಿಳಿಸಿದೆ.

ವಿಡಿಯೊ ನೋಡಿ: ಮಾತು ಮತ್ತು ಹಾಡಿನ ಮೂಲಕ ಸೌಜನ್ಯ ಹೋರಾಟಕ್ಕೆ ಧ್ವನಿಯಾದ ಜನಪರ ಗಾಯಕ ಜನ್ನಿ Janashakthi Media

Donate Janashakthi Media

Leave a Reply

Your email address will not be published. Required fields are marked *