ಲಿಂಗಸಗೂರು: ಪಟ್ಟಣದಲ್ಲಿ ಬೆಳ್ಳಂಬೆಳಿಗ್ಗೆ ಜೆಸಿಬಿ ರಸ್ತೆಗಿಳಿದು ರಸ್ತೆ ಅಗಲಿಕರಣ ಕಾರ್ಯಾಚರಣೆ ನಡೆಸಿದ ಘಟನೆ ಪಟ್ಟಣದಲ್ಲಿ ನಡೆಯಿತು.
ಪಟ್ಟಣದ ಜನತೆ ಇನ್ನು ನಿದ್ದೆಯಲ್ಲಿರುವಾಗಲೆ ರಸ್ತೆಗಿಳಿದ ಜೆಸಿಬಿ ಪಟ್ಟಣದ ಬಸ್ ನಿಲ್ದಾಣ ವೃತದಿಂದ ಅತಿಥಿ ಹೊಟೇಲ್ ವರೆಗೆ ಮುಖ್ಯರಸ್ತೆಯ ಎರಡು ಬದಿಯಲ್ಲಿ ರಸ್ತೆ ಅಗಲಿಕರಣ ಕಾರ್ಯಾಚರಣೆ ನಡೆಸಲಾಯಿತು.
ಇದನ್ನೂ ಓದಿ:ʼವೇತನ ಚೀಟಿ-ಹಾಜರಾತಿʼ ಕಡ್ಡಾಯ ಕೈಬಿಟ್ಟ ಕಲ್ಯಾಣ ಮಂಡಳಿ – ಕಟ್ಟಡ ಕಾರ್ಮಿಕರ ಹೋರಾಟಕ್ಕೆ ಜಯ
ಬಹಳ ದಿನಗಳಿಂದ ರಸ್ತೆಯ ಪಕ್ಕದಲ್ಲಿಯೆ ಗೂಡಂಗಡಿಗಳನ್ನಿಟ್ಟು ಅಥವಾ ಕೆಲ ಕಟ್ಟಡಗಳು ಒತ್ತುವರಿ ಮಾಡಿರುವುದರಿಂದ ವಾಹನಗಳ ಸಂಚಾರಕ್ಕೆ ಪಾದಚಾರಿಗಳಿಗೆ ತೊಂದರೆಯಾಗಿ ಓಡಾಡಲು ಕಷ್ಟವಾಗುತ್ತಿತ್ತು. ಸಂಚಾರ ದಟ್ಟಣೆ ಹಾಗೂ ಅಪಘಾತಗಳಂತಹ ಅವಘಡಗಳು ನಡೆದದ್ದುಂಟು ಅದಕ್ಕಾಗಿಯೆ ಸಹಾಯಕ ಆಯುಕ್ತರಾದ ಅವಿನಾಶ ಶಿಂದೆ.ಸಂಜೀವನ್ ನೇತೃತ್ವದ ಬೆಳಿಗ್ಗೆ ನಾಲ್ಕು ಗಂಟೆಗೆ ರಸ್ತೆ ತೆರವು ಕಾರ್ಯಚರಣೆ ನಡೆಸಲಾಯಿತು.
ಕೆಲವರು ತಕರಾರು:
ತೆರವು ಕಾರ್ಯಚರಣೆ ಸಂದರ್ಭದಲ್ಲಿ ಕೆಲವರು ಒಂದೇ ಕಡೆ ತೆರವು ಮಾಡಿದರೆ ಹೇಗೆ ಎಲ್ಲಾ ಕಡೆಯು ತೆರವು ಮಾಡಿ ಎಂದು ವಾಗ್ವಾದ ನಡೆದರೆ ಇನ್ನೂ ಕೆಲವರು ಮುಖ್ಯ ರಸ್ತೆಯಲ್ಲಿ ಮಾತ್ರ ತೆರವು ಮಾಡಿ ಒಳರಸ್ತೆಯಲ್ಲಿ ಬೇಡ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದವು.
ಸಧ್ಯ ಪಟ್ಟಣದ ಮುಖ್ಯರಸ್ತೆಯಲ್ಲಿ ಮಾತ್ರ ಅಗಲೀಕರಣ ನಡೆಸಿದ್ದು, ಪಟ್ಟಣದ ಎಲ್ಲಾ ಕಡೆಯಲ್ಲಿಯೂ ಹಂತ ಹಂತವಾಗಿ ಅಗಲೀಕರಣ ಮಾಡುವುದರ ಮುಖಾಂತರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಶಿಂದೆ ಅವಿನಾಶ ಸಂಜೀವನ್,ಪಿಐ ಸಂಜೀವಕುಮಾರ ಪಿಎಸ್ಐ ಹನುಮಂತಪ್ಪ ಸೇರಿದಂತೆ ಇದ್ದರು.