ಬುರ್ಖಾ ಧರಿಸಿ ಬಸ್ ಹತ್ತಿ : ಬಸ್ ಚಾಲಕನ ಕಿರಿಕ್

ಕಲಬುರಗಿ: ಬುರ್ಖಾ ಧರಿಸದಿದ್ದರೇ ಬಸ್ ಹತ್ತಲು ಬಿಡುವುದಿಲ್ಲ ಎಂದ ಕಲ್ಯಾಣ ಕರ್ನಾಟಕ ಬಸ್​ ನ ಚಾಲಕ ಶಾಲಾ ಮುಸ್ಲಿಂ ವಿದ್ಯಾರ್ಥಿನಿಯರನ್ನು ಬಸ್​ನಿಂದ ಕೆಳಗಿಳಿಸಿರುವ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಓಕಳಿ ಗ್ರಾಮದ ಬಳಿ ನಡೆದಿದೆ.

 

ಇದನ್ನೂ ಓದಿ:ಹಿಜಾಬ್‌ ವಿವಾದ-ಹೆಣ್ಣು ಮಕ್ಕಳ ಶಿಕ್ಷಣ ಹಕ್ಕು ಎತ್ತಿ ಹಿಡಿದ ನ್ಯಾಯಪೀಠ: ಜನವಾದಿ ಮಹಿಳಾ ಸಂಘಟನೆ ಸ್ವಾಗತ

ಬುರ್ಖಾ ಧರಿಸಿಯೇ ಬನ್ನಿ ಎಂದು ವಿದ್ಯಾರ್ಥಿನಿಯರನ್ನು ಬಸ್‌ನಿಂದ ಚಾಲಕ ಕೆಳಗಿಳಿಸಿರುವ ಘಟನೆ ನಡೆದಿದೆ.  ತಮ್ಮೂರಿಗೆ ಹೋಗಲು ವಿದ್ಯಾರ್ಥಿನಿಯರು ಬಸವಕಲ್ಯಾಣಕ್ಕೆ ಹೋಗುವ ಬಸ್ ಹತ್ತಿದ್ದರು. ವರನಾಳ ಗ್ರಾಮಕ್ಕೆ ಹೋಗುವ ವಿದ್ಯಾರ್ಥಿಗಳನ್ನ ಹತ್ತಿಸಿಕೊಂಡಿರಿ. ನಾವು ಓಕಳಿ ವರೆಗೆ ಬರ್ತೀವಿ ಎಂದ ವಿದ್ಯಾರ್ಥಿನಿಯರು ಚಾಲಕನ ಬಳಿ ಪ್ರಸ್ತಾಪಿಸಿದ್ದಾರೆ. ಈ ವೇಳೆ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನ ‘ನೀನು ಮುಸ್ಲಿಂ ಇದಿಯಲ್ವ.. ಬುರ್ಖಾ ಧರಿಸಿ ಬಾ.. ಆಗ ಮಾತ್ರ ಬಸ್ ಹತ್ತಲು ಬಿಡುತ್ತೇನೆ’ ಎಂದಿದ್ದಾನೆ ಚಾಲಕ.

ಏಕವಚನದಲ್ಲಿ ಬೈಯ್ದು ನಮ್ಮನ್ನ ಚಾಲಕ ಕೆಳಗಿಳಿಸಿದ್ದಾರೆಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಈ ವಿಚಾರ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಶಿಕ್ಷಕರು ಮತ್ತು ಬಸ್ ಚಾಲಕನ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಚಾಲಕನ ನಡೆಗೆ ಆಕ್ರೋಶ ವ್ಯಕ್ತಪಡಿಸಿದೆ.
Donate Janashakthi Media

Leave a Reply

Your email address will not be published. Required fields are marked *