ಜಿಎಸ್ಟಿ ಪರಿಹಾರ 2022 ರಲ್ಲಿ ಮುಗಿದೆ ಎಂದ ಮಾಜಿ ಸಿಎಂ
ಬೆಂಗಳೂರು: ಒಕ್ಕೂಟ ಸರ್ಕಾರದಿಂದ ರಾಜ್ಯಕ್ಕೆ ಎಷ್ಟು ಜಿಎಸ್ಟಿ ಪರಿಹಾರ ಬರಬೇಕಿತ್ತೊ, ಅದು ಬರುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಪ್ರತಿಪಾದಿಸಿದ್ದಾರೆ. “ಜಿಎಸ್ಟಿ ಪರಿಹಾರ ಕೇವಲ ಐದು ವರ್ಷಗಗಳು ಮಾತ್ರ ನೀಡಲಾಗುತ್ತದೆ ಎಂದು ಸಂವಿಧಾನ ತಿದ್ದುಪಡಿಯಲ್ಲೆ ಇವೆ. ಅದರಂತೆ ಜಿಎಸ್ಟಿ ಪರಿಹಾರ 2022 ರಲ್ಲಿ ಮುಗಿದೆ” ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೊಮ್ಮಾಯಿ, “ಒಕ್ಕೂಟ ಸರ್ಕಾರದಿಂದ ರಾಜ್ಯಕ್ಕೆ ಎಷ್ಟು ಜಿಎಸ್ಟಿ ಪರಿಹಾರ ಬರಬೇಕಿತ್ತೊ, ಅದು ಬರುತ್ತಿದೆ. ಆದರೆ ಹೆಚ್ಚುವರಿಯಾಗಿ ನೀಡಬೇಕು ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿದರೆ ಆಡಿಟ್ ಪರಿಗಣನೆಗೆ ಹೋಗಿ ಬರಬೇಕಿದೆ” ಎಂದು ಹೇಳಿದರು.
“ಜಿಎಸ್ಟಿ ಪರಿಹಾರ ಕೇವಲ ಐದು ವರ್ಷಗಗಳು ಮಾತ್ರ ನೀಡಲಾಗುತ್ತದೆ ಎಂದು ಸಂವಿಧಾನ ತಿದ್ದುಪಡಿಯಲ್ಲೆ ಇವೆ. ಅದರಂತೆ ಜಿಎಸ್ಟಿ ಪರಿಹಾರ 2022 ರಲ್ಲಿ ಮುಗಿದೆ. ಆದರೆ, ಐದು ವರ್ಷಗಳಲ್ಲಿ ಜಿಎಸ್ಟಿ ಪರಿಹಾರ ನಿಲ್ಲಿಸಿ ಅನ್ಯಾಯ ಎಸಗಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರ ಆರೋಪಿಸುತ್ತಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
“ಜಿಎಸ್ಟಿ ಬಗ್ಗೆಗಿನ ಸಂವಿಧಾನದ ತಿದ್ದುಪಡಿ ತಂದಾಗ ಸಿದ್ದರಾಮಯ್ಯ ಅವರು ಸೇರಿದಂತೆ ದೇಶದ ಎಲ್ಲಾ ರಾಜ್ಯಗಳು ಇದಕ್ಕೆ ಒಪ್ಪಿಕೊಂಡಿದ್ದಾರೆ. ಅಲ್ಲದೆ ಜಿಎಸ್ಟಿಯನ್ನು ಮೊದಲು ಪ್ರಾರಂಭ ಮಾಡಿದ್ದೇ ಕಾಂಗ್ರೆಸ್ ಸರ್ಕಾರ” ಎಂದು ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: ಬಜೆಟ್ನಲ್ಲಿ ಮದ್ಯ ಪ್ರಿಯರಿಗೆ ಬಿಗ್ ಶಾಕ್ ಕೊಟ್ಟ ಸಿದ್ಧರಾಮಯ್ಯ ಸರ್ಕಾರ: ಅಬಕಾರಿ ತೆರಿಗೆ ಹೆಚ್ಚಳ