ಬೆಂಗಳೂರ: ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಹಾಗೂ ಸಾರ್ವಜನಿಕ ಉದ್ಯಮಗಳನ್ನ ಸ್ಥಾಪಿಸಿ ಯುವಜನರಿಗೆ ಉದ್ಯೋಗ ನೀಡಬೇಕೆಂದು ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್) ವಿದ್ಯಾರ್ಥಿ ಮುಖಂಡರು ಬೆಂಗಳೂರ ಜಿಲ್ಲಾ ಮಂಡಳಿ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಯ ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಇದನ್ನೂ ಓದಿ:ಲಕ್ಷಾಂತರ ರೂಪಾಯಿ ತೆತ್ತು ವಿದ್ಯಾಭ್ಯಾಸ ಪಡೆದರೂ ಉದ್ಯೋಗವೆಲ್ಲಿದೆ: ಜೀವನ್ರಾಜ್ ಕುತ್ತಾರ್ ಪ್ರಶ್ನೆ
ರಾಜ್ಯ ಸರ್ಕಾರ ಯುವನಿಧಿ ಯೋಜನೆಯಲ್ಲಿ 2022 ರಲ್ಲಿ ಪದವಿ ಮತ್ತು ಡಿಪ್ಲೊಮ ಪೂರ್ಣಗೊಳಿಸಿದವರನ್ನು ಮಾತ್ರ ಪರಿಗಣಿಸಿದ್ದು ಅದಕ್ಕೂ ಹಿಂದೆ ಪದವಿ ಡಿಪ್ಲೊಮ ಪೂರ್ಣಗೊಳಿಸಿದವರನ್ನು ಪರಿಗಣಿಸದೆ ತಾರತಮ್ಯ ಎಸಗಿದೆ. 2018 ರಿಂದ ಯುವಜನರ ಸಂಖ್ಯೆಗೆ ಅನುಗುಣವಾಗಿ ಉದ್ಯೋಗ ಸೃಷ್ಟಿಸದೆ ನಿರುದ್ಯೋಗ ಸಮಸ್ಯೆ ಇದ್ದು ದೇಶದಾದ್ಯಂತ ತಾಂಡವವಾಡುತ್ತಿದೆ. ಆದ್ದರಿಂದ ಸರ್ಕಾರ ಕೂಡಲೇ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಮೋದಿ ಅವರ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಒಂಭತ್ತು ವರ್ಷಗಳಿಂದ ಈಡೇರಿರುವುದಿಲ್ಲ. ಅದೇ ಮಾದರಿಯನ್ನು ಕಾಂಗ್ರೆಸ್ ಸರ್ಕಾರ ಅನುಸರಿಸದೇ ಉದ್ಯೋಗ ಸೃಷ್ಟಿಸಿ ನಿರುದ್ಯೋಗಿ ಯುವಜನರಿಗೆ ಉದ್ಯೋಗ ನೀಡಬೇಕು ಮತ್ತು ಎಲ್ಲಾ ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಎಐವೈಎಫ್ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷ ಹರೀಶ ಬಾಲಾ, ಜಿಲ್ಲಾ ಕಾರ್ಯದರ್ಶಿ ಅಮೀತಕುಮಾರ.ವಿ, ಮುಖಂಡರಾದ ವಾಣಿಶ್ರೀ, ಜಗನ್ನಾಥ, ಶಾಂತರಾಜ ಜೈನ, ತನುಜ್ ಕುಮಾರ, ಮತ್ತು ಇತರರು ಇದ್ದರು.