ಬೆಂಗಳೂರ: 2023-24ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟವಾಗಿದ್ದು, ಎಲ್ಲಾ ವಿಭಾಗಗಳಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಪರೀಕ್ಷೆಗೆ ಹಾಜರಾಗಿದ್ದ 2,44,345 ವಿದ್ಯಾರ್ಥಿಗಳಲ್ಲಿ ಎಂಜಿನಿಯರ್ ಕೋರ್ಸ್ಗೆ 2,03,381, ಕೃಷಿ ವಿಜ್ಞಾನಕ್ಕೆ 1,64,187, ಪಶುಸಂಗೋಪನೆ 1,66,756, ಯೋಗ ಮತ್ತು ನ್ಯಾಚುರೋಪತಿಗೆ 1,66,746, ಬಿ ಫಾರ್ಮಕ್ಕೆ 2,06,191 ಹಾಗೂ 2,06,340 ವಿದ್ಯಾರ್ಥಿಗಳು ಡಿ ಫಾರ್ಮಾ ಕೋರ್ಸ್ ಗಳಿಗೆ ಅರ್ಹತೆ ಪಡೆದಿದ್ದಾರೆ.
ಇದನ್ನೂ ಓದಿ:ಸಿಇಟಿ ಫಲಿತಾಂಶ: ಮೈಸೂರಿನ ಮೇಘನ್ ರಾಜ್ಯಕ್ಕೆ ಪ್ರಥಮ ಸ್ಥಾನ
ಎಂಜಿನಿಯರ್ : ಬೆಂಗಳೂರಿನ ಉತ್ತರ ಹಳ್ಳಿಯ ಕುಮಾರನ್ ಚಿಲ್ಡ್ರನ್ಸ್ ಹೋಂನ ವಿಜ್ಞೇಶ್ ನಟರಾಜ್ ಕುಮಾರ್ ಮೊದಲ ರ್ಯಾಂಕ್ (ಶೇ96.111)
ಯೋಗ ಮತ್ತು ನ್ಯಾಚುರೋಪತಿ:ಬೆಂಗಳೂರಿನ ಪದ್ಮನಾಭನಗರ ಕುಮಾರನ್ ಚಿಲ್ಡ್ರನ್ ಹೋಂನ ಪ್ರತೀಕ್ಷಾ ಆರ್.ಪ್ರಥಮ ರ್ಯಾಂಕ್ (ಶೇ 97.222)
ಕೃಷಿ ವಿಜ್ಞಾನ:ಮಂಗಳೂರು ಎಕ್ಸ್ಪರ್ಟ್ ಪಿಯು ಕಾಲೇಜಿನ ಎಸ್.ಎಚ್.ಭೈರೇಶ್ ಪ್ರಥಮ ರ್ಯಾಂಕ್(ಶೇ 93.75)
ಪಶುಸಂಗೋಪನೆ:ಬೆಂಗಳೂರು ಚಾಮರಾಜನಗರಪೇಟೆಯ ಮಹೇಶ್ ಪಿಯು ಕಾಲೇಜು ವಿದ್ಯಾರ್ಥಿನಿ ಮಾಳವೀಕಾ ಕಪೂರು ಮೊದಲ ರ್ಯಾಂಕ್ (97.222)
ಬಿಎಸ್ಸಿ ನರ್ಸಿಂಗ್: ಬೆಂಗಳೂರು ಚಾಮರಾಜಪೇಟೆಯ ಮಹೇಶ್ ಪಿಯು ಕಾಲೇಜಿನ ಮಾಳವೀಕ ಕಪೂರ್ ಪ್ರಥಮ
ಬಿ ಫಾರ್ಮಾ:ಬೆಂಗಳೂರಿನ ಪದ್ಮನಾಭನಗರ ಕುಮಾರನ್ ಚಿಲ್ಡ್ರನ್ ಹೋಂನ ಪ್ರತೀಕ್ಷಾ ಆರ್.ಪ್ರಥಮ ರ್ಯಾಂಕ್
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ http://kea.kar.nic.in/ ನಲ್ಲಿ ದೊರೆಯಲಿದೆ.