ಜಿಲ್ಲಾ ಉಸ್ತುವಾರಿ ಸಚಿವರ ನೇಮಕ : ಯಾವ ಸಚಿವರಿಗೆ ಯಾವ ಜಿಲ್ಲೆಯ ಹೊಣೆ ? ಇಲ್ಲಿದೆ ಪಟ್ಟಿ

ಬೆಳಗಾವಿ: ಬಹುನಿರೀಕ್ಷಿತ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವನ್ನು ಸರಕಾರ ಅಂತಿಮಗೊಳಿಸಿದೆ. ಸಂಪುಟ ಹಂಚಿಕೆಯಾದರೂ ನೂತನ ಸಚಿವರಿಗೆ ಉಸ್ತುವಾರಿ ಜಿಲ್ಲೆಗಳ ಹಂಚಿಕೆಯಾಗಿರಲಿಲ್ಲ. ಇದೀಗ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕಗೊಳಿಸಿ ಶುಕ್ರವಾರ ಆದೇಶ ಹೊರಡಿಸಿದೆ.

ಬೆಂಗಳೂರು ನಗರ ಉಸ್ತುವಾರಿಯನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಿಗೆ ನೀಡಲಾಗಿದೆ, ದಸರಾ ಮೊದಲಾದ ಪ್ರಮುಖ ಕಾರ್ಯಕ್ರಮಗಳು ಜರುಗುವ ಮೈಸೂರು ಜಿಲ್ಲೆಯ ಉಸ್ತುವಾರಿ ಎಚ್‌ಸಿ ಮಹದೇವಪ್ಪ ಪಾಲಾಗಿದೆ. ದೊಡ್ಡ ಜಿಲ್ಲೆ ಬೆಳಗಾವಿ ಉಸ್ತುವಾರಿಯನ್ನು ಸತೀಶ್‌ ಜಾರಕಿಹೊಳಿ ಅವರಿಗೆ ನೀಡಲಾಗಿದೆ. ಸಚಿವರ ಪ್ರಾತಿನಿಧ್ಯವಿಲ್ಲದ ಜಿಲ್ಲೆಗಳಿಗೆ ಸಹಜವಾಗಿ ಹೊರ ಜಿಲ್ಲೆಗಳ ಸಚಿವರನ್ನು ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದೆ.

ಸಿಎಂ ಸಿದ್ದರಾಮಯ್ಯ ಯಾವುದೇ ಜಿಲ್ಲೆಯನ್ನು ತಮಗೆ ಹಂಚಿಕೆ ಮಾಡಿಕೊಂಡಿಲ್ಲ. ರಹೀಂ ಖಾನ್‌ ಹಾಗೂ ಕೃಷ್ಣ ಬೈರೇಗೌಡ ಅವರಿಗೂ ಯಾವುದೇ ಜಿಲ್ಲೆಗಳ ಜವಾಬ್ದಾರಿ ನೀಡಿಲ್ಲ .

ರಾಜ್ಯದ ನೂತನ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಈ ಕೆಳಗಿನಂತಿದೆ,

ಕ್ರ. ಸಂ. ಸಚಿವರು ಉಸ್ತುವಾರಿ ಜಿಲ್ಲೆಗಳು
1 ಡಿ.ಕೆ. ಶಿವಕುಮಾರ್‌ ಬೆಂಗಳೂರು ನಗರ
2 ಡಾ.ಜಿ. ಪರಮೇಶ್ವರ್‌ ತುಮಕೂರು
3 ಎಚ್‌.ಕೆ. ಪಾಟೀಲ್‌ ಗದಗ
4 ಕೆ.ಎಚ್‌. ಮುನಿಯಪ್ಪ ಬೆಂಗಳೂರು ಗ್ರಾಮಾಂತರ
5 ರಾಮಲಿಂಗಾ ರೆಡ್ಡಿ ರಾಮನಗರ
6 ಕೆ.ಜೆ. ಜಾರ್ಜ್‌ ಚಿಕ್ಕಮಗಳೂರು
7 ಎಂ.ಬಿ. ಪಾಟೀಲ್‌ ವಿಜಯಪುರ
8 ದಿನೇಶ್‌ ಗುಂಡೂರಾವ್‌ ದಕ್ಷಿಣ ಕನ್ನಡ
9 ಎಚ್‌.ಸಿ. ಮಹದೇವಪ್ಪ ಮೈಸೂರು
10 ಸತೀಶ್‌ ಜಾರಕಿಹೊಳಿ ಬೆಳಗಾವಿ
11 ಪ್ರಿಯಾಂಕ್‌ ಖರ್ಗೆ ಕಲಬುರಗಿ
12 ಶಿವಾನಂದ ಪಾಟೀಲ್‌ ಹಾವೇರಿ
13 ಬಿ.ಝಡ್‌. ಜಮೀರ್‌ ಅಹಮದ್‌ ಖಾನ್‌ ವಿಜಯನಗರ
14 ಶರಣ ಬಸಪ್ಪ ದರ್ಶನಾಪುರ್‌ ಯಾದಗಿರಿ
15 ಈಶ್ವರ್‌ ಬಿ. ಖಂಡ್ರೆ ಬೀದರ್‌
16 ಎನ್‌. ಚಲುವರಾಯಸ್ವಾಮಿ ಮಂಡ್ಯ
17 ಎಸ್‌.ಎಸ್‌. ಮಲ್ಲಿಕಾರ್ಜುನ್‌ ದಾವಣಗೆರೆ
18 ಸಂತೋಷ್‌ ಎಸ್‌. ಲಾಡ್‌ ಧಾರವಾಡ
19 ಡಾ. ಶರಣ ಪ್ರಕಾಶ್‌ ಪಾಟೀಲ್‌ ರಾಯಚೂರು
20 ಆರ್‌.ಬಿ. ತಿಮ್ಮಾಪುರ ಬಾಗಲಕೋಟೆ
21 ಕೆ. ವೆಂಕಟೇಶ್‌ ಚಾಮರಾಜನಗರ
22 ಶಿವರಾಜ್‌ ತಂಗಡಗಿ ಕೊಪ್ಪಳ
23 ಡಿ. ಸುಧಾಕರ್‌ ಚಿತ್ರದುರ್ಗ
24 ಬಿ. ನಾಗೇಂದ್ರ ಬಳ್ಳಾರಿ
25 ಕೆ.ಎನ್‌. ರಾಜಣ್ಣ ಹಾಸನ
26 ಬೈರತಿ ಸುರೇಶ್‌ ಕೋಲಾರ
27 ಲಕ್ಷ್ಮೀ ಹೆಬ್ಬಾಳ್ಕರ್‌ ಉಡುಪಿ
28 ಮಂಕಾಳ ವೈದ್ಯ ಉತ್ತರ ಕನ್ನಡ
29 ಮಧು ಬಂಗಾರಪ್ಪ ಶಿವಮೊಗ್ಗ
30 ಡಾ.ಎಂ.ಸಿ. ಸುಧಾಕರ್‌ ಚಿಕ್ಕಬಳ್ಳಾಪುರ
31 ಎನ್‌.ಎಸ್‌. ಭೋಸರಾಜು ಕೊಡಗು

 

 

 

Donate Janashakthi Media

Leave a Reply

Your email address will not be published. Required fields are marked *