ಒಡಿಶಾ ಅಪಘಾತದ ಅಸಲೀಹೊಣೆಗಾರರಿಗೆ ‘ಕವಚ’ವಾಗಿ ‘ರೈಲ್-ಟೂಲ್-ಕಿಟ್’

ಜೂನ್‍ 2ರ ಸಂಜೆ   ಒಡಿಶಾದ ಬಲಸೋರ್ಜಿಲ್ಲೆಯಲ್ಲಿ ನಡೆದ ಭೀಕರ ರೈಲು ಅಪಘಾತದ ಸುದ್ದಿ ದೇಶದಲ್ಲಿ ಆಘಾತ ಉಂಟು ಮಾಡುತ್ತಿದ್ದಂತೆ ಕೇಂದ್ರದ ಆಳುವ ಪಕ್ಷದ ಸೋಷಿಯಲ್‍ಮೀಡಿಯದ ಪ್ರತಿ-ಪ್ರಚಾರ ಸಕ್ರಿಯವಾಯಿತು. ಇದು‘ಆಪತ್ತನ್ನು ಅವಕಾಶವಾಗಿ ಪರಿರ್ತಿಸು’ವುದಕ್ಕೆ ಆಳುವ ಪಕ್ಷದ ಐಟಿಸೆಲ್‍ ಕಟ್ಟುತ್ತಿರುವ ಟೂಲ್‍ಕಿಟ್‍ಗಳ ತಂತ್ರದ ಭಾಗ ಎನ್ನುತ್ತಾರೆ ನ್ಯೂಸ್‍ಕ್ಲಿಕ್‍’ಸುದ್ದಿ ಜಾಲತಾಣದ ಹಿರಿಯ ಪತ್ರಕರ್ತೆ ಭಾಷಾಸಿಂಗ್;ಅವರು ಈ ಹೊಸ ಟೂಲ್‍ಕಿಟ್ಟನ್ನು‘ರೈಲ್-ಟೂಲ್‍-ಕಿಟ್‍’ಎಂದು ಕರೆದಿದ್ದಾರೆ.

275 ಜನ ಪ್ರಾಣಕಳಕೊಂಡು ಸಾವಿರಕ್ಕೂ ಹೆಚ್ಚುಮಂದಿಸಾವು-ಬದುಕಿನ ಹೋರಾಟದಲ್ಲಿರುವಾಗ ಈ ಟೂಲ್‍ಕಿಟ್‍ ಕರೆಕೊಟ್ಟದ್ದು ರೈಲ್ವೆ ಮಂತ್ರಿಯ ಜತೆಗೆನಿಲ್ಲಿ ಎಂದು. ಬಿಜೆಪಿ/ಆರೆಸ್ಸೆಸ್‍ನ ಹಿರಿಯ ಮುಖಂಡರಾಂಮಾಧವ್ ಅವರ ಟ್ವೀಟ್‍ ಪ್ರಾಣ ಕಳಕೊಂಡವರು ಮತ್ತು ಗಾಯಗೊಂಡು ಸುಧಾರಿಸಿ ಕೊಳ್ಳುತ್ತಿರುವವರಿಗೆ ಒಳ್ಳೆಯದನ್ನು ಮಾಡು ಎಂದು‘ದೇವರನ್ನು ಪ್ರಾರ್ಥಿಸಿಕೊಳ್ಳುತ್ತ’ ಕರೆಕೊಟ್ಟದ್ದು ರೈಲ್ವೆ ಮಂತ್ರಿ ಅಶ್ವಿನ್ವೈಷ್ಣವ್‍ನೆರ ವಿಗಧಾವಿಸಿ ಎಂದು! ಅವರು ದೇಶದ ಅತ್ಯುತ್ತಮ ರೈಲ್ವೆ ಮಂತ್ರಿ,ಆದ್ದರಿಂದ ಇದೀಗ ಅವರನ್ನು ಹತ್ತಾರುಟೀಕೆ-ಟಿಪ್ಪಣಿಗಳಿಂದ ಕಾಡುವ ಸಮಯವಲ್ಲ,ಬದಲು ಅವರ ಮತ್ತು ಅವರ ಮಂತ್ರಾಲಯದ ಜತೆಗೆ ನಿಲ್ಲಬೇಕಾದ ಸಮಯ ಎಂದರು!ಇದನ್ನನು ಸರಿಸಿರಿ ಪಬ್ಲಿಕ್ಭಾರತ್, ಟೈಮ್ಸ್ನೌ ನವಭಾರತ್‌ ಟೈಮ್ಸ್ ಮುಂತಾದ ‘ಗೋದಿಮೀಡಿಯ’ದಲ್ಲಿ ರೈಲುಮಂತ್ರಿಗಳ ಮತ್ತು ಪ್ರಧಾನಮಂತ್ರಿಗಳ ‘ತಕ್ಷಣದ’ಕ್ರಮಗಳ ಜೈಕಾರ,ರೈಲ್ವೆ ಮಂತ್ರಿಗಳ ಐಐಟಿಎಂ.ಟೆಕ್‍. ಪದವಿ ಅಮೆರಿಕಾದ ವಿಶ್ವವಿದ್ಯಾಲಯದಿಂದ ಮೇನೇಜ್‍ಮೆಂಟ್ಪ ದವಿ ಇತ್ಯಾದಿ ಇತ್ಯಾದಿ ‘ಸಾಧನೆ’ಗಳು ಮತ್ತು ಐಟಿಸೆಲ್‍ನ ಮುಖ್ಯಸ್ಥರನ್ನು ಅನುಸರಿಸಿ ಹಿಂದಿನ ಬಿಜೆಪಿಯೇತರ ರೈಲುಮಂತ್ರಿಗಳ‘ಕೆಟ್ಟದಾಖಲೆ’ಗಳ ಪಟ್ಟಿಗಳ ಟ್ವಿಟ್‍ಗಳು ,ರಿಟ್ವೀಟ್‍ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಿಸಿದವು.

ಮಂತ್ರಿಗಳ ಟ್ವಿಟರ್‍ನಲ್ಲಿ ಅವರು ಅಪಘಾತ ನಡೆದ ಸ್ಥಳ ದಲ್ಲಿ ಹಗಲು ರಾತ್ರಿಯೆನ್ನ ದೆಕಷ್ಟಪಡುತ್ತಿರುವುದನ್ನು ಪ್ರಸಾರ ಮಾಡಲಾಯಿತು, ಸ್ವಲ್ಪ ದೂರದಲ್ಲಿ ನೂರಾರು ಕಾರ್ಮಿಕರು, ರಕ್ಷಣಾ ಕಾರ್ಯಪಡೆಗಳ ಸಿಬ್ಬಂದಿ ಮತ್ತು ನಾಗರಿಕರು ತತ್ಪರತೆಯಿಂದ ನಡೆಸಿದ್ದ ರಕ್ಷಣಾಕಾರ್ಯಗಳ ಪ್ರಸಾರವಿಲ್ಲ, ಆಕಾರ್ಮಿಕರ ಪ್ರಯತ್ನದಿಂದ ಹಳಿಗಳು ಸಂಚಾರಕ್ಕೆ ಯೋಗ್ಯವಾದಾಗ ಹಸಿರು ಬಾವುಟ ತೋರಿಸಿದ ಮಂತ್ರಿಗಳು ‘ವಂದೇಮಾತರಂ’, ಭಾರತ್‍ ಮಾತಾಕೀಜೈ ಎಂದು ಘೋಷಣೆ ಕೊಡುವುದನ್ನು ಪ್ರಚಾರ ಮಾಡಲಾಯಿತು. ಪ್ರಧಾನ ಮಂತ್ರಿಗಳು ಭೇಟಿ ನೀಡಲು ಬಂದಾಗ ಅವರುರ್ಯಾಲಿಯನ್ನು ದ್ದೇಶಿಸಿ ಮಾತಾಡಲು ಬಂದಿದ್ದಾರೋ ಎಂಬಂತೆ ‘ಮೋದಿ’ ಘೋಷಣೆಗಳ ವೀಡಿಯೋ.  ‘ಕೇರಿಂಗ್‍ಪಿಎಂ’ ಎಂಬ ಟ್ವೀಟ್‍ಗಳು,ರಿಟ್ವೀಟ್‍ಗಳ ಸರಣಿ!

 

ಇದಕ್ಕೆ ಸಮಾನಾಂತರವಾಗಿ, ನಗ್ನ ಕೋಮುವಾದಿ ,ಜಾತಿವಾದಿ ಟ್ವೀಟ್‍ಗಳೂ, ವಾಟ್ಸ್-ಆಫ್‍ ಅಪಪ್ರಚಾರಗಳೂ ಈ 9 ವರ್ಷಗಳಲ್ಲಿ ಕುಪರಿಚಿತವಾಗಿರುವ ಕೇಸರೀ ಪಡೆಗಳ ಹ್ಯಾಂಡಲ್‍ ಗಳಿಂದ ನಡೆದವು

ಅಪಘಾತ ನಡೆದ ಜಾಗದಲ್ಲಿರುವ ಒಂದು ಬಿಳಿ ಕಟ್ಟಡದತ್ತ ಗುರುತುಮಾಡಿ,‘ಇಂದು ಶುಕ್ರವಾರ, ಹತ್ತಿರದಲ್ಲೇ ಒಂದು ಮಸೀದಿಯಿದೆ ಎಂದು ಹೇಳಿ ಸೂಚ್ಯವಾಗಿ ಇದು ಮುಸ್ಲಿಮರ ಬುಡಮೇಲು ಕೃತ್ಯ ಎಂದು ಬಿಂಬಿಸುವ ಪ್ರಯತ್ನ ನಡೆಯಿತು. ಆದರೆ ಆಬಿಳಿ ಕಟ್ಟಡ ಇಸ್ಕಾನ್‍ಕೃಷ್ಣ ಮಂದಿರವೆಂದು ಆಲ್ಟ್ನ್ಯೂಸ್‍ ಪತ್ತೆ ಮಾಡಿ ಹೇಳಿತು.

ನಂತರ ಅಲ್ಲಿಯ ಸ್ಟೇಷನ್‍ ಮಾಸ್ಟರ್ ಹೆಸರು ಶರೀಫ್, ಸಿಬಿಐ ತನಿಖೆಯ ಆದೇಶದ ನಂತರ ಪರಾರಿಯಾಗಿದ್ದಾರೆಂದು ಮತ್ತೊಂದು ಸುಳ್ಳು ಸುದ್ದಿಯನ್ನು ಹರಿಯ ಬಿಡಲಾಯಿತು. ‘ಈ ಕೋಮಿನದ್ದು ಇದೇಸಮಸ್ಯೆ’ಎಂಬ ಟಿಪ್ಪಣಿ ಬೇರೆ! ಸ್ಟೇಷನ್‍ಮಾಸ್ಟರ್ ಹೆಸರು

 

ಎಸ್‍ಬಿಮೊಹಂತಿ, ಅವರು ರೈಲ್ವೆ ತನಿಖೆ ತಂಡದಲ್ಲಿ ಕೆಲಸ ಮಾಡಿದ್ದಾರೆ ಎಂದು ಕೂಡ ಆಲ್ಟ್ನ್ಯೂಸ್‍ ಪತ್ತೆ ಮಾಡಿತು. ಇದುರೊಹಿಂಗ್ಯಾ ಮುಸ್ಲಿಮರು ಸಕ್ರಿಯರಾಗಿರುವ ಪ್ರದೇಶ ಎಂದು ಇನ್ನೊಂದು ಪ್ರಚಾರ ನಡೆಯಿತು.

ಈ ಎಲ್ಲ ಕೋಮುವಾದಿ ಅಪಪ್ರಚಾರವನ್ನು ಎಷ್ಟು ವ್ಯಾಪಕವಾಗಿ ನಡೆಸಲಾಯಿತೆಂದರೆ ಒಡಿಶಾ ಪೋಲೀಸ್ ಕಾನೂನು ಕ್ರಮದ ಎಚ್ಚರಿಕೆ ಕೊಡಬೇಕಾಯಿತು.

“ನಾವು ತಲೆ ಕೆಡಿಸಿ ಕೊಳ್ಳಬೇಕಾಗಿಲ್ಲ …ನಮ್ಮ ಕವಚಚೆನ್ನಾಗಿ ಕೆಲಸಮಾಡುತ್ತಿದೆ (ವ್ಯಂಗ್ಯಚಿತ್ರ: ಮಂಜುಲ್)

 

ಇಷ್ಟೇ ಅಲ್ಲ, ಒಂದೆಡೆಯಲ್ಲಿ ಇದು ಮುಸ್ಲಿಮರ ಬುಡಮೇಲು ಕೃತ್ಯ ಎಂದು ಬಿಂಬಿಸಿದರೆ, ಇನ್ನೊಂದೆಡೆಯಲ್ಲಿ ರೈಲ್ವೆ ಸುರಕ್ಷಿತತೆಯ ಹುದ್ದೆಗಳಲ್ಲೂ ಮೀಸಲಾತಿ ಇರುವುದರಿಂದ ಅದರ ಮೂಲಕ ಆಯ್ಕೆಯಾದ ಅಯೋಗ್ಯರಿಂದಾಗಿ ಈ ಅಫಘಾತ ಸಂಭವಿಸುವಂತಾಗಿದೆ ಎಂಬ ಅಪಪ್ರಚಾರವೂ ನಡೆಯಿತು.

ಉತ್ತರ ಸಿಗಲೇ ಬೇಕಾಗಿರುವ ಪ್ರಶ್ನೆಗಳು

ಈ ಟೂಲ್‍ಕಿಟ್‍ನ ಮುಖ್ಯ ಉದ್ದೇಶ ಈ ಭೀಕರ ಅಪಘಾತಕ್ಕೆ ದಾರಿ ಮಾಡಿಕೊಟ್ಟಿರುವ ನಿಜಕಾರಣಗಳ ಬಗ್ಗೆ ವಿಚಾರ-ವಿಮರ್ಶೆ ನಡೆಯದಿರಲಿ ಎಂಬುದು ಸ್ಪಷ್ಟ ಎನ್ನುತ್ತಾರೆ ಮಾಧ್ಯಮ ವಿಶ್ಲೇಷಕರು. ಅಂದರೆ ಈ ಭೀಕರ ಅಪಘಾತಕ್ಕೆ ರೈಲ್ವೆಮಂತ್ರಿಗಳನ್ನಾಗಲೀ,  ಪ್ರಧಾನ ಮಂತ್ರಿಗಳನ್ನಾಗಲೀ ಹೊಣೆಗಾರರಾಗಿ ಮಾಡದಂತೆ ರಕ್ಷಿಸುವುದು!

‘ವಂದೇ ಭಾರತ್’ ಎಂಬ ಅತಿವೇಗದ ಲಕ್ಷುರಿರೈಲುಗಳು ಮಾತ್ರವಲ್ಲ, ‘ಕವಚ’ ಎಂಬ ಅಪಘಾತಗಳೇ ನಡೆಯದಂತೆ ಸಂಪೂರ್ಣ ರಕ್ಷಣೆ ಕೊಡುವ ವ್ಯವಸ್ಥೆಯ ಹರಿಕಾರರು ನಮ್ಮ ಪ್ರಧಾನಿಗಳು ಎಂದು ಈ ರೈಲ್ವೆ ಮಂತ್ರಿಗಳು ಹಲವು ಬಾರಿ ಹಾಡಿ ಹೊಗಳಿದ್ದರು. ಈ ಭೀಕರ ಅಪಘಾತದ ನಂತರ ಸಹಜವಾಗಿ ಏಳುವ ಪ್ರಶ್ನೆಗಳಲ್ಲಿ ಮೊದಲನೆಯದ್ದು ಈ ಕವಚ ಇಲ್ಲಿ ಕೆಲಸಮಾಡಲಿಲ್ಲವೇ ಎಂಬುದು. ಈ ರೂಟಿನಲ್ಲಿ ಅದನ್ನು ಅಳವಡಿಸಿಲ್ಲ ಎಂದು ರೈಲ್ವೆ ಮಂತ್ರಿಗಳು ಹೇಳಬೇಕಾಗಿ ಬಂದಿತ್ತು ಇಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ 97% ದಷ್ಟು ಇದನ್ನು ಇನ್ನು ಅಳವಡಿಸ ಬೇಕಷ್ಟೇ ಎಂಬುದೂ ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.

ಎರಡನೇ ಪ್ರಶ್ನೆ-ಆರು ತಿಂಗಳ ಹಿಂದೆ ಸಿಎಜಿ (ಮಹಾಲೆಕ್ಕ ಪರಿಶೋಧಕರ ಕಚೇರಿ) ರೈಲ್ವೆಯಲ್ಲಿ ಹಳಿ ತಪ್ಪಿದ್ದರಿಂದ ನಡೆದ ಅಪಘಾತಗಳನ್ನು ಕುರಿತಂತೆ ಸಲ್ಲಿಸಿದವರದಿಯಲ್ಲಿ ಹಲವಾರು ನ್ಯೂನತೆಗಳನ್ನು ಪಟ್ಟಿ ಮಾಡಿತ್ತು. ಅವುಗಳನ್ನು ಸರಿಪಡಿಸಲು ಸರಕಾರ ಕ್ರಮಗಳನ್ನು ಕೈಗೊಂಡಿದ್ದರೆ, ಇಂತಹ ಭೀಕರ ಅಪಘಾತವನ್ನು ತಡೆಯಬಹುದಿತ್ತು, ಅದನ್ನು ಏಕೆ ಮಾಡಿಲ್ಲ ಎಂಬುದು. ಮುಖ್ಯವಾಗಿ, 2017ರಿಂದ 2021ರ ನಡುವೆ ತನಿಖೆಮಾಡಿದ 1129 ಹಳಿತಪ್ಪಿದ ಪ್ರಕರಣಗಳಲ್ಲಿ 275 ಕಾರ್ಯಾಚರಣೆ ವಿಭಾಗದ ಲೋಪಗಳಿಂದಾಗಿ ನಡೆದಿದ್ದು ಇದರಲ್ಲಿ 84% ಶಂಟಿಂಗ್‍ ಕಾರ್ಯಗಳಲ್ಲಿ ಸರಿಯಲ್ಲದ ಪಾಯಿಂಟ್‍ಗಳನ್ನು ಹಾಕಿದ್ದು ಮತ್ತು ಇತರ ತಪ್ಪುಗಳಿಂದಾಗಿ; ಇದನ್ನು ತುರ್ತಾಗಿ ಸರಿಪಡಿಸಬೇಕಾಗಿದೆ ಎಂದಿತ್ತು. ಈ ಅಪಘಾತದಲ್ಲಿ ಇದು ಮುಖ್ಯಕಾರಣ ಎಂದು ಇದುವರೆಗೆ ಮೇಲ್ನೋಟಕ್ಕೆ ಕಂಡು ಬಂದಿರುವ ಸಂಗತಿ ಎಂಬುದನ್ನು ಇಲ್ಲಿ ಗಮನಿಸಬೇಕು.

ಇದಲ್ಲದೆ ಸಿಎಜಿ ತನ್ನವರದಿಯಲ್ಲಿರಾಷ್ಟ್ರೀಯರೈಲ್ ಸುರಕ್ಷಾಕೋಶ್ಎಂಬ 2017-18ರ ಬಜೆಟಿನಲ್ಲಿ ಪ್ರಕಟಿಸಿದ ನಿಧಿಯನ್ನು ಪ್ರಸ್ತಾಪಿಸುತ್ತ, ಐದು ವರ್ಷಗಳಲ್ಲಿ 1 ಲಕ್ಷ ಕೋಟಿರೂ.ಗಳ ಸುರಕ್ಷತಾ ನಿಧಿ ರಚಿಸಲಾಗುವುದು, ಇದಕ್ಕೆ ಪ್ರತಿವರ್ಷ ಬಜೆಟಿನಿಂದ 20,000 ಕೋಟಿರೂ.ಮತ್ತು ರೈಲ್ವೆ ಆಂತರಿಕ ಮೂಲಗಳಿಂದ 5000ಕೋಟಿರೂ. ನೀಡಲಾಗುವುದು ಎಂದು ಹೇಳಿದ್ದರೂ, 2021 ರವರೆಗೆ ರೈಲ್ವೆ ಆಂತರಿಕವಾಗಿ ಹೊಂದಿಸಬೇಕಾಗಿದ್ದ 20,000 ಕೋಟಿರೂ.ಗಳಲ್ಲಿ 15,775 ರೂ.ಗಳಕೊರತೆಯಾಗಿದೆ, ಇದರಿಂದಾಗಿ ಈ ನಿಧಿಯನ್ನು ಸ್ಥಾಪಿಸಿರುವುದರ ಉದ್ದೇಶ ಕ್ರಮೇಣನ ಶಿಸುತ್ತ ರೈಲ್ವೆ ಸುರಕ್ಷಿತೆಗಾಗಿ ರಚಿಸಿದ ಈ ನಿಧಿಯ ಪ್ರಾಥಮಿಕ ಉದ್ದೇಶವನ್ನೇ ವಿಫಲಗೊಳಿಸಲಾಗಿದೆ ಎಂದು ನವಂಬರ್ 2022ರ ತನ್ನವರದಿಯಲ್ಲಿ ಸಿಎಜಿ ಟಿಪ್ಪಣಿ ಮಾಡಿರುವುದು ಗಮನಾರ್ಹ.

ಮೂರನೇ ಪ್ರಶ್ನೆ, ಕಳೆದ ಫೆಬ್ರುವರಿಯಲ್ಲಷ್ಟೇ ಇದೇತೆರನ ಸಿಗ್ನಲಿಂಗ್‍ದೋಷದಿಂದ ದಕ್ಷಿಣ-ಮಧ್ಯವಲಯದ ಮೈಸೂರು ವಿಭಾಗದ ಹೊಸ ದುರ್ಗ ರೋಡ್‍ನಲ್ಲಿ ದಿಲ್ಲಿ-ಬೆಂಗಳೂರು ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ಗೆ ಇದೇರೀತಿಯ ಅಪಘಾತ ಅದರ ಚಾಲಕರ ವಿಚಕ್ಷಣತೆಯಿಂದಾಗಿ ತಪ್ಪಿಹೋಗಿತ್ತು. ಇದನ್ನು ಅಲ್ಲಿಯ ಮುಖ್ಯ ಕಾರ್ಯಾಚರಣೆ ವ್ಯವಸ‍್ಥಾಪಕರು ಹಿರಿಯ ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದು, ಸಿಗ್ನಲ್ಮೆಂಟೆನೆನ್ಸ್ವ್ಯ ವಸ್ಥೆಯನ್ನು ತಕ್ಷಣವೇ ಸರಿಪಡಿಸದಿದ್ದರೆ ಗಂಭೀರ ಅಪಘಾತಗಳು ನಡೆಯ ಬಹುದು ಎಂದೂ ಹೇಳಿದ್ದರು ಎಂದು ವರದಿಯಾಗಿದೆ (ದಿಹಿಂದು, ಜೂನ್‍5).ಇದನ್ನು ರೈಲ್ವೆ ಮಂಡಳಿ ಮತ್ತು ಮಂತ್ರಿಗಳು ಗಂಭೀರವಾಗಿ ತೆಗೆದು ಕೊಂಡಿದ್ದಾರೆಯೇ? ತೆಗೆದುಕೊಂಡಿದ್ದರೆ ಈ ಭೀಕರ ಅಪಘಾತವನ್ನು ತಪ್ಪಿಸ ಬಹುದಿತ್ತಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಏಳುತ್ತದೆ.

ಈ ಎಲ್ಲ ಪ್ರಶ್ನೆಗಳಿಗೆ ಅವರು ಈ ಭೀಷಣ ಅಪಘಾತದಲ್ಲಿ ಪ್ರಾಣ ಕಳಕೊಂಡವರ ಕುಟುಂಬಗಳಿಗೆ, ಗಂಭೀರಗಾಯಗಳಾಗಿ ನರಳುತ್ತಿರುವ ಸುಮಾರು ಒಂದು ಸಾವಿರ ಪ್ರಯಾಣಿಕರಿಗೆ ಹಾಗೂ ಇಡೀ ದೇಶಕ್ಕೆ ಉತ್ತರ ಕೊಡಬೇಕಾಗಿಲ್ಲ ಎಂಬ ರಕ್ಷಣಾ ಕವಚವನ್ನು ನಿರ್ಮಿಸುವುದೇ ಈ ರೈಲ್-ಟೂಲ್-ಕಿಟ್‍ನ ಉದ್ದೇಶ ಎಂದು ಪತ್ರಕರ್ತೆ ಭಾಷಾಸಿಂಗ್ ಹೆಳುತ್ತಾರೆ.

ಸಿಬಿಐ ತನಿಖೆ ಮತ್ತೊಂದು ಕವಚ?

ರೈಲ್ವೆಯ ತಕ್ಷಣದ ಆಂತರಿಕ ತನಿಖೆ ಆರಂಭವಾದ ಸ್ವಲ್ಪ ಸಮಯದಲ್ಲೇ ರೈಲ್ವೆ ಮಂತ್ರಿಗಳು ಅಪಘಾತದ ಮೂಲ ಪತ್ತೆಯಾಗಿದೆ, ತಪ್ಪಿತಸ್ಥರನ್ನು ಗುರುತಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದರು. ನಂತರ ಭೇಟಿಗೆ ಬಂದ ಪ್ರಧಾನಿಗಳೂ ತಪ್ಪಿತಸ್ಥರನ್ನು ಕಠಿಣ ಶಿಕ್ಷೆ ಗೊಳಪಡಿಸದೆ ಬಿಡುವುದಿಲ್ಲ ಎಂದರು. ಇದು ಬಹುಶಃ ಟೂಲ್ಕಿಟ್‍ ರಚಿಸಿದವರಿಗೆ ಬುಡ ಮೇಲು ಕೃತ್ಯ ಎಂದು ಬಿಂಬಿಸಲು ಒದಗಿಸಿದ ಅವಕಾಶ.

ಈ ಗರೈಲ್ವೆ ಮಂಡಳಿ ‘ಸಿಗ್ನಲ್ವ್ಯ ವಸ್ಥೆಯಲ್ಲಿ ಹಸ್ತಕ್ಷೇಪ’ವಾದಂತೆ ಕಾಣುತ್ತದೆ, ಆದ್ದರಿಂದ ಇದನ್ನು ಸಿಬಿಐ ತನಿಖೆಗೆ ಒಪ್ಪಿಸ ಬೇಕು ಎಂದು ಶಿಫಾರಸುಮಾಡಿದೆ. ಇದು ಸರಕಾರದ ಒತ್ತಡದ ಪರಿಣಾಮ ಎಂಬುದು ರಾಜಕೀಯ ವೀಕ್ಷಕರ ಸಂದೇಹ. ಸಿಬಿಐ ಕ್ರಿಮಿನಲ್‍ಕೃತ್ಯವನ್ನು ತನಿಖೆ ಮಾಡುವ ಸಂಸ್ಥೆ. ರೈಲ್ವೆಯ ಸಿಗ್ನಲಿಂಗ್‍ವ್ಯವಸ್ಥೆಯಲ್ಲಿ ಯಾವರೀತಿ ಹಸ್ತಕ್ಷೇಪ ನಡೆದಿದೆ ಎಂಬುದರ ತನಿಖೆ ಅದರ ಪರಿಣತಿಯ ವ್ಯಾಪ್ತಿಗೆ ಬರುವುದಿಲ್ಲ. ಇಲ್ಲಿ ಬುಡ ಮೇಲು ಕೃತ್ಯ ದಸಾಧ್ಯತೆ ಸುಮಾರಾಗಿ ಇಲ್ಲವೇ ಇಲ್ಲ, ಹೆಚ್ಚೆಂದರೆ ಕರ್ತವ್ಯ ನಿರ್ವಣೆಯಲ್ಲಿ ತಪ್ಪಾಗಿರಬಹುದು ಎಂದು ಈ ಕ್ಷೇತ್ರದ ಬಗ್ಗೆ ಬಲ್ಲವರು ಹೇಳುತ್ತಾರೆ.

“ರೈಲ್ವೆ ಸುರಕ್ಷ ತಾನಿಯಂತ್ರಕರು ಅಪಘಾತದ ತಾಂತ್ರಿಕ ಆಯಾಮಗಳನ್ನು ಪರೀಕ್ಷಿಸುವ ಅವಕಾಶಪಡೆಯದೆ, ರೈಲ್ವೆ ಬುಡಮೇಲು ಕೃತ್ಯದ ಸಾಧ್ಯತೆಯನ್ನು ಸೂಚಿಸಿ ತರಾತುರಿಯಲ್ಲಿ ಸಿಬಿಐಗೆ ಒಪ್ಪಿಸಿರುವುದು ನನಗೆ ಆಶ್ಚರ್ಯ ಉಂಟುಮಾಡಿದೆ. ಇದು ರೈಲ್ವೆ ಇಲಾಖೆಯ ಮಟ್ಟದಲ್ಲಿನ ಆಡಳಿತ ವೈಫಲ್ಯದ ಪ್ರಶ್ನೆಯನ್ನು ಕುರಿತಂತೆ ಸಾರ್ವಜನಿಕರ ದಾರಿತಪ್ಪಿಸುವ ನಡೆಯಂತೆ ನನಗೆ ಕಾಣಿಸುತ್ತದೆ” ಎಂದು ಭಾರತ ಸರಕಾರದ ರೆವಿನ್ನೂ ಕಾರ್ಯದರ್ಶಿಯ ಉನ್ನತ ಹುದ್ದೆಯಲ್ಲಿ ಸೇವೆಸಲ್ಲಿ ಸಿನಿವೃತ್ತರಾಗಿರುವ ಇಎಎಸ್‍ಶರ್ಮ ರೈಲ್ವೆ ಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಹೇಳಿರುವುದಾಗಿ ವರದಿಯಾಗಿದೆ.

ಪ್ರಾಥಮಿಕ ತನಿಖೆ ನಡೆಸಿರುವ ಐವರು ರೈಲ್ವೆ ಅಧಿಕಾರಿಗಳಲ್ಲಿ ಒಬ್ಬರು ನಂತರ ಒಂದು ಭಿನ್ನ ಮತದ ಟಿಪ್ಪಣಿ ಸಲ್ಲಿಸಿರುವುದು ನಿಜವಾದಕಾರಣವನ್ನು ಮರೆಮಾಚುವ ಪ್ರಯತ್ನ ನಡೆಯುತ್ತಿದೆ ಎಂಬ ಸಂದೇಹವನ್ನು ಮತ್ತಷ್ಟು ಬಲಪಡಿಸಿದೆ ಎಂದು ಹೇಳಲಾಗುತ್ತಿದೆ.(ದಿವೈರ್, ಜೂನ್‍ 7).

Donate Janashakthi Media

Leave a Reply

Your email address will not be published. Required fields are marked *