ಆಂಬ್ಯುಲೆನ್ಸ್​ಗೆ ಕೊಡಲು ಹಣವಿಲ್ಲದೆ ಮಗನ ಶವವನ್ನು ಚೀಲದೊಳಗೆ ಹೊತ್ತು ಪ್ರಯಾಣಿಸಿದ ತಂದೆ

ಬೆಂಗಳೂರು : ವಲಸೆ ಕಾರ್ಮಿಕರೊಬ್ಬರು ಆಂಬ್ಯುಲೆನ್ಸ್​ಗೆ ಕೊಡಲು ಹಣವಿಲ್ಲದೆ ಮಗನ ಶವವನ್ನು ಚೀಲದೊಳಗೆ ಹಾಕಿ 200 ಕಿ.ಮೀಗಳಷ್ಟು ದೂರ ಪ್ರಯಾಣಿಸಿರುವ ಹೃದಯ ವಿದ್ರಾವಕ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಮುಸ್ತಫಾನಗರ ಗ್ರಾಮಪಂಚಾಯತ್​ನ ಡಂಗಿಪಾರಾ ಗ್ರಾಮದ ವಲಸೆ ಕಾರ್ಮಿಕ ಅಸೀಂ ದೇವಶರ್ಮಾ, ಆಂಬ್ಯುಲೆನ್ಸ್​ ಚಾಲಕ ಕೇಳಿದ ಶುಲ್ಕವನ್ನು ಭರಿಸಲು ಸಾಧ್ಯವಾಗದ ಕಾರಣ ಶವವನ್ನು ಹೊತ್ತುಕೊಂಡು 200 ಕಿ.ಮೀ ದೂರ ಸಾಗಿದ್ದಾರೆ. ಕಣ್ಣೀರು ತಡೆದುಕೊಂಡು ಬಸ್ ಹತ್ತಿದ್ದರು, ಬಸ್​ನಲ್ಲಿ ಯಾರಿಗೂ ತಿಳಿಯದಂತೆ ಎಚ್ಚರವಹಿಸಿದ್ದರು, ಒಂದೊಮ್ಮೆ ಹೇಳಿಬಿಟ್ಟರೆ ತಮ್ಮನ್ನು ಬಸ್ಸಿನಿಂದ ಇಳಿಸಬಹುದು ಎನ್ನುವ ಭಯವಿತ್ತು ಎಂದು ಹೇಳಿಕೊಂಡಿದ್ದಾರೆ.

ಅಸೀಂ ದೇವಶರ್ಮಾ ಅವರ ಅವಳಿ ಮಕ್ಕಳಿಬ್ಬರೂ ತೀವ್ರ ಅಸ್ವಸ್ಥಗೊಂಡ ಘಟನೆ ಶನಿವಾರ ನಡೆದಿದೆ. ಅವರನ್ನು ಆರಂಭದಲ್ಲಿ ಕಲಿಯಗಂಜ್​ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ನಂತರ ಮಕ್ಕಳ ಸ್ಥಿತಿ ಹದಗೆಟ್ಟ ಪರಿಣಾಮ ರಾಯ್​ಗಂಜ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಯಿತು.

ಇದನ್ನೂ ಓದಿತಮ್ಮನ ಶವ ಮಡಿಲಲ್ಲಿಟ್ಟುಕೊಂಡು ಆಂಬ್ಯುಲೆನ್ಸ್‌ಗಾಗಿ ಕಾದು ಕುಳಿತ ಬಾಲಕ

ಮೂಲಗಳ ಪ್ರಕಾರ, ಇವರ ಇಬ್ಬರು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಉತ್ತರ ಬಂಗಾಳ ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಕ್ಕಳ ಆರೋಗ್ಯ ಹದಗೆಡುತ್ತಲೇ ಇದ್ದ ಹಿನ್ನೆಲೆಯಲ್ಲಿ ಅಸೀಂ ದೇವಶರ್ಮಾ ಅವರ ಪತ್ನಿ ಮಕ್ಕಳೊಂದಿಗೆ ಮನೆಗೆ ತೆರಳಿದ್ದರು, ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇನ್ನೊಂದು ಮಗು ಶನಿವಾರ ರಾತ್ರಿ ಮೃತಪಟ್ಟಿದೆ.

ಮೃತ ಮಗನ ಶವವನ್ನು ತನ್ನ ಮನೆಗೆ ಕರೆ ತರಲು ವೈದ್ಯಕೀಯ ಕಾಲೇಜು ಆಸ್ಪತ್ರೆಯನ್ನು ಸಂಪರ್ಕಿಸಿದ್ದರು, ಆದರೆ ಆಂಬ್ಯುಲೆನ್ಸ್​ ಚಾಲಕ 8 ಸಾವಿರ ರೂ ಕೊಡುವಂತೆ ಹೇಳಿದ್ದರು. ಅಸೀಮ್ ದೇವಶರ್ಮಾ ಅವರು ಬಂಗಾಳದ ಸಿಲಿಗುರಿಯಿಂದ ರಾಯ್‌ಗಂಜ್‌ಗೆ ಖಾಸಗಿ ಬಸ್‌ ಹತ್ತಿದರು ಮತ್ತು ನಂತರ ಅವರ ಹುಟ್ಟೂರಾದ ಕಲಿಯಗಂಜ್‌ಗೆ ಹೋಗಲು ಮತ್ತೊಂದು ಬಸ್‌ನಲ್ಲಿ ಪ್ರಯಾಣಿಸಿದರು. ಕಲಿಯಾಗಂಜ್‌ನ ವಿವೇಕಾನಂದ ಛೇದಕವನ್ನು ತಲುಪಿದ ನಂತರ, ಅಸಿಮ್ ದೇವಶರ್ಮಾ ಸಹಾಯವನ್ನು ಕೋರಿದರು ಮತ್ತು ಆಂಬ್ಯುಲೆನ್ಸ್‌ಗೆ ವ್ಯವಸ್ಥೆ ಮಾಡಿದರು.

ಆರು ದಿನಗಳ ಕಾಲ ಸಿಲಿಗುರಿಯ ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ನನ್ನ ಐದು ತಿಂಗಳ ಮಗು ಕಳೆದ ರಾತ್ರಿ ಸಾವನ್ನಪ್ಪಿದ್ದಾನೆ, ಈ ಸಮಯದಲ್ಲಿ 16,000 ರೂ. ಖರ್ಚು ಮಾಡಿದ್ದಾಗಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *