ಗದಗ: ಮತದಾನ ಮಾಡಲು ಬಂದಿದ್ದ ಅಜ್ಜಿಯೊಬ್ಬರು ಮತಗಟ್ಟೆಯ ಮುಂದೆ ಧರಣಿ ಕುಳಿತ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಮತಗಟ್ಟೆ ಸಂಖ್ಯೆ 53ರಲ್ಲಿ ನಡೆದಿದೆ.
85 ವರ್ಷದ ಮುಕ್ತುಂಬೀ ದೊಡ್ಡಮನಿ ಹೆಸರಿನ ಅಜ್ಜಿ ಮತ ಚಲಾಯಿಸಲು ತನ್ನ ಮೊಮ್ಮಗನ ಜೊತೆಗೆ ಮತಗಟ್ಟೆಗೆ ಆಗಮಿಸಿದ್ದರು. ಆದರೆ, ಚುನಾವಣಾ ಅಧಿಕಾರಿಗಳು ಮೊಮ್ಮಗನನ್ನು ಅಜ್ಜಿಯ ಜೊತೆಗೆ ಬಿಡಲಿಲ್ಲ ಎಂದು ಹೇಳಲಾಗಿದೆ. ಅಲ್ಲದೆ, ಅಜ್ಜಿ ತೋರಿಸಿದ ಚಿಹ್ನೆಗೆ ಮತ ಹಾಕದೆ ಬೇರೆ ಗುರುತಿಗೆ ಅಧಿಕಾರಿಗಳು ಮತಹಾಕಿಸಿದ್ದಾರೆ ಎಂದು ಅಜ್ಜಿ ಗಂಭೀರ ಆರೋಪ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ತಹಸೀಲ್ದಾರ ಸೇರಿದಂತೆ ಹಿರಿಯ ಅಧಿಕಾರಿಗಳು ಬರುವಂತೆ ಅಜ್ಜಿ ಪಟ್ಟು ಹಿಡಿದಿದ್ದಾರಿವ ಅಜ್ಜಿ ಮತಗಟ್ಟೆಯ ಮುಂದೆಯೇ ಧರಣಿ ಕುಳಿತಿದಿದ್ದಾರೆ.
ವಯಸ್ಸಾದ ಮತದಾರರು ಬೇರೊಬ್ಬರ ಸಹಾಯ ಪಡೆದು ಮತ ಚಲಾಯಿಸಲು ಅವಕಾಶವಿದೆ. ಆದರೆ ಈ ಅವಕಾಶವನ್ನೂ ನೀಡದೆ ಅವರು ಹೇಳಿದ ಪಕ್ಷಕ್ಕೆ ಮತ ಹಾಕದೇ ಬೇರೆ ಪಕ್ಷಕ್ಕೆ ಮತ ಹಾಕಿರುವ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.
ಬೆಳಿಗ್ಗೆ 11 ಗಂಟೆಯವರೆಗೆ ರಾಜ್ಯದಲ್ಲಿ ಒಟ್ಟಾರೆ ಶೇ 20.99ರಷ್ಟು ಮತದಾನವಾಗಿದೆ. ಹೊತ್ತು ಏರಿದಂತೆ ಮತದಾನವೂ ಚುರುಕಾಗುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಂದೇ ಕುಟುಂಬದ 65 ಜನ ಏಕಕಾಲಕ್ಕೆ ಮತದಾನ ಮಾಡುವ ಮೂಲಕ ಪ್ರಜಾತಂತ್ರ ಹಬ್ಬವನ್ನು ಸಂಭ್ರಮಿಸಿದ್ದಾರೆ. ಇಲ್ಲಿನ ʼಬಾದಂʼ ಕುಟುಂಬವು ಜ್ಯೂನಿಯರ್ ಕಾಲೇಜು ಆವರಣದಲ್ಲಿರುವ 161ನೇ ಮತಗಟ್ಟೆಯಲ್ಲಿ ಮತ ಚಲಾಯಿಸಿದೆ. ಪ್ರತಿ ಬಾರಿಯೂ ಎಲ್ಲರೂ ಒಂದಾಗಿ ಮತ ಚಲಾಯಿಸುವುದು ಈ ಕುಟುಂಬದ ವಿಶೇಷ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಂದೇ ಕುಟುಂಬದ 65 ಜನ ಏಕಕಾಲಕ್ಕೆ ಮತದಾನ ಮಾಡುವ ಮೂಲಕ ಪ್ರಜಾತಂತ್ರ ಹಬ್ಬವನ್ನು ಸಂಭ್ರಮಿಸಿದ್ದಾರೆ. ಇಲ್ಲಿನ ʼಬಾದಂʼ ಕುಟುಂಬವು ಜ್ಯೂನಿಯರ್ ಕಾಲೇಜು ಆವರಣದಲ್ಲಿರುವ 161ನೇ ಮತಗಟ್ಟೆಯಲ್ಲಿ ಮತ ಚಲಾಯಿಸಿದೆ. ಪ್ರತಿ ಬಾರಿಯೂ ಎಲ್ಲರೂ ಒಂದಾಗಿ ಮತ ಚಲಾಯಿಸುವುದು ಈ ಕುಟುಂಬದ ವಿಶೇಷ.#Karnatakaelection2023 pic.twitter.com/ErOdAB79lK
— Hindustan Times Kannada (@HTKannadaNews) May 10, 2023