ಬಹಿರಂಗ ಪ್ರಚಾರಕ್ಕೆ ಕೊನೆಯ ದಿನ: ಬಿಎಂಟಿಸಿ ಬಸ್ ಏರಿದ ರಾಹುಲ್ ಗಾಂಧಿ!

ಬೆಂಗಳೂರು :  ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಸೋಮವಾರ ಕೊನೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಕೊನೆಯ ಹಂತದ ಕಸರತ್ತನ್ನು ರಾಜಕೀಯ ಪಕ್ಷಗಳು ನಡೆಸುತ್ತಿದೆ. ಅದರಲ್ಲೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಸೋಮವಾರ ಬೆಳಗ್ಗೆಯಿಂದಲೇ ಮತಯಾಚನೆಯಲ್ಲಿ ತೊಡಗಿರುವ ರಾಹುಲ್ ಗಾಂಧಿ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕೆಫೆ ಕಾಫಿ ಡೇಗೆ ತೆರಳಿ ಕಾಫಿ ಕುಡಿದರು. ಜೊತೆಗೆ ಅಲ್ಲಿದ್ದವರ ಜೊತೆಗೆ ಮಾತುಕತೆ ನಡೆಸಿದರು. ಬಳಿಕ ಪಕ್ಕದಲ್ಲಿದ್ದ ಬಸ್ ಸ್ಟಾಂಡ್ ಗೆ ಆಗಮಿಸಿದ ರಾಹುಲ್ ಬಸ್ ಗಾಗಿ ಕಾಯುತ್ತಿದ್ದವರ ಜೊತೆಗೂ ಕೆಲ ಹೊತ್ತು ಮಾತುಕತೆ ನಡೆಸಿದರು.‌ ಇದೇ ವೇಳೆ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ವಿವರಿಸಿ ಮತಯಾಚನೆ ಮಾಡಿದರು

ಇದಾದ ಬಳಿಕ ಬಿಎಂಟಿಸಿ ಬಸ್‌ ನಲ್ಲಿ ರಾಹುಲ್ ಗಾಂಧಿ ಪ್ರಯಾಣ ಮಾಡಿದರು. ಕನ್ನಿಂಗ್ ಹ್ಯಾಮ್ ರಸ್ತೆಯಿಂದ ಬಸ್ ಹತ್ತಿದ ರಾಹುಲ್ ಗಾಂಧಿ ಲಿಂಗರಾಜಪುರದ ವರೆಗೆ ಬಸ್‌ ನಲ್ಲಿ ಪ್ರಯಾಣ ಮಾಡುವ ಮೂಲಕ ಗಮನ ಸೆಳೆದರು.

ಪ್ರಿಯಾಂಕಾ ಗಾಂಧಿ ರೋಡ್ ಶೋ :  ಇನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಬೆಂಗಳೂರಿನಲ್ಲಿ ಸೋಮವಾರ ರೋಡ್ ಶೋ ನಡೆಸಲಿದರು.  ನಗರದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆ 10.30 ಗೆ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಲಿದರು.  ಬಳಿಕ ವಿಜಯ ನಗರ ವಿಧಾನಸಭಾ ಕ್ಷೇತ್ರದಲ್ಲೂ ಅವರು ರೋಡ್ ಶೋ ನಡೆಸಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ.

ಇನ್ನು ಇದೇ ಮೊದಲ ಬಾರಿಗೆ ಕನಕಪುರದಲ್ಲಿ ಸೋಮವಾರ ಮಧ್ಯಾಹ್ನ 3.00 ಗಂಟೆಗೆ ಡಿಕೆ ಶಿವಕುಮಾರ್ ಚುನಾವಣೆ ಪ್ರಚಾರ ಭಾಷಣ ಮಾಡಲಿದ್ದಾರೆ. ಬಹಿರಂಗ ಚುನಾವಣೆ ಪ್ರಚಾರ ಅಂತಿಮಗೊಳ್ಳುವ ಕೆಲವೇ ಕ್ಷಣಗಳ ಮೊದಲು ಅವರು ಮಾಡುತ್ತಿರುವ ಕೊನೆಯ ಚುನಾವಣೆ ಪ್ರಚಾರ ಭಾಷಣ ಇದಾಗಿದೆ. ಅವರು ನಾಮಪತ್ರ ಸಲ್ಲಿಸಿದ ನಂತರ ಒಂದೇ ಒಂದು ಬಾರಿ ಮಾತ್ರ ಕನಕಪುರದಲ್ಲಿ ಚುನಾವಣೆ ಪ್ರಚಾರ ಭಾಷಣ ಮಾಡುತ್ತಿದ್ದಾರೆ.

ಬಿಜೆಪಿಯಿಂದಲೂ ಭರ್ಜರಿ ಪ್ರಚಾರ : ಇನ್ನು ಕೊನೆಯ ದಿನದಲ್ಲಿ ಮತದಾರರ ಮನ ಸೆಳೆಯಲು ಬಿಜೆಪಿ ಕೂಡಾ ಪ್ರಚಾರ ನಡೆಸುತ್ತಿದೆ. ಪದ್ಮನಾಭನಗರದಲ್ಲಿ ಸಚಿವ ಆರ್‌. ಅಶೋಕ್ ಪರವಾಗಿ ಖ್ಯಾತ ನಟ ಧ್ರುವ ಸರ್ಜಾ ಅವರು ಪ್ರಚಾರ ನಡೆಸಲಿದ್ದಾರೆ. ಈ ಮೂಲಕ ಹಂತಿಮ ಹಂತದಲ್ಲಿ ಮತದಾರರ ಗಮನ ಸೆಳೆಯಲು ಪ್ರಯತ್ನ ನಡೆಸಲಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *