ನವದೆಹಲಿ: ಪ್ಲಾಟ್ಫಾರ್ಮ್ನಲ್ಲಿ ಖಾತೆಯನ್ನು ನಿರ್ವಹಿಸಲು ಕನಿಷ್ಠ ವಯಸ್ಸಿನ ಮಾನದಂಡಗಳನ್ನು ಪೂರೈಸದ ಕಾರಣ ಟ್ವಿಟರ್ ಶನಿವಾರ ಏಷ್ಯನ್ ನ್ಯೂಸ್ ಇಂಟರ್ನ್ಯಾಶನಲ್(ಎಎನ್‌ಐ ) ಖಾತೆಯನ್ನು ಅಮಾನತುಗೊಳಿಸಿದೆ.
ಎಎನ್‌ಐ ಸಂಪಾದಕಿ ಸ್ಮಿತಾ ಪ್ರಕಾಶ್ ಅವರು ಮೈಕ್ರೋ-ಬ್ಲಾಗಿಂಗ್ ಟ್ವೀಟರ್ ಕಳುಹಿಸಿದ ಇ-ಮೇಲ್ನ ಸ್ಕ್ರೀನ್ಶಾಟ್ ಅನ್ನು ಟ್ವೀಟ್ ಮಾಡಿ ಹ್ಯಾಂಡಲ್ ಲಾಕ್ ಆಗಿದೆ ಎಂದು ತಿಳಿಸಿದ್ದಾರೆ.
Do watch – what did @SadhguruJV experience at Kailash Mansarovar. His years of romancing Marxism, atheistic scepticism, the metaphysical experience in Chamundi hills, his views on India aspiring to be vishwaguru, how not to be fearful of death but live in the magic of present…
— Smita Prakash (@smitaprakash) April 24, 2023
ಟ್ವಿಟರ್ ಖಾತೆಯನ್ನು ರಚಿಸಲು ನಿಮಗೆ ಕನಿಷ್ಠ 13 ವರ್ಷ ವಯಸ್ಸಾಗಿರಬೇಕು ಎಂದು ಮೇಲ್ನಲ್ಲಿ ಬರೆಯಲಾಗಿದೆ. ನೀವು ಈ ವಯಸ್ಸಿನ ಮಾನದಂಡಗಳನ್ನು ಪೂರೈಸಿಲ್ಲ ಎಂದು ಟ್ವಿಟರ್ ನಿರ್ಧರಿಸಿದೆ.
ಇದನ್ನೂ ಓದಿ : ಖ್ಯಾತನಾಮರ ಖಾತೆಗಳ ‘ಬ್ಲೂಟಿಕ್’ ತೆಗೆಯಲು ಮುಂದಾದ ಟ್ವಿಟರ್
ಆದ್ದರಿಂದ ನಿಮ್ಮ ಖಾತೆಯನ್ನು ಲಾಕ್ ಮಾಡಲಾಗಿದೆ. ಅಲ್ಲದೆ ಟ್ವಿಟರ್ ನಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದೆ.